ಬ್ರೇಕಿಂಗ್ ನ್ಯೂಸ್
05-06-25 03:05 pm HK News Desk ಕರಾವಳಿ
ಮಂಗಳೂರು, ಜೂನ್ 5: ಅರ್ ಸಿಬಿ ರಾಜ್ಯದ ಅಥವಾ ರಾಷ್ಟ್ರದ ಟೀಂ ಅಲ್ಲ. ಯಾವುದೋ ಒಂದು ಭಾವನೆ ಮತ್ತು ಹರ್ಷೋದ್ಘಾರದಲ್ಲಿ ವಿಜಯೋತ್ಸವ ಮಾಡುವಾಗ ಘಟನೆ ನಡೆದಿದೆ. ಏನಾಗಿದೆ ಏನಾಗಿಲ್ಲ ಅನ್ನೋದನ್ನ ಮುಖ್ಯಮಂತ್ರಿಗಳು ಹೇಳಬೇಕಾಗುತ್ತದೆ. ಐಪಿಎಲ್ ನಡೆಸೋರು ಕರೋಡ್ ಪತಿಗಳಲ್ಲ, ಸಾವಿರಾರು ಕೋಟಿ ಮಾಲೀಕರು. ಪ್ರಾಣ ಕಳೆದುಕೊಂಡವರಿಗೆ ಬಿಸಿಸಿಐ ಕಡೆಯಿಂದ ಒಂದೊಂದು ಕೋಟಿ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಮಾಡ್ತೀನಿ, ರಾಜ್ಯ ಸರ್ಕಾರದಿಂದಲೇ ಬಿಸಿಸಿಐನಿಂದ ಒಂದು ಕೋಟಿ ಕೊಡಿಸಬೇಕು. ಎಲ್ಲರೂ ದುಃಖದಲ್ಲಿದ್ದಾರೆ, ಹಾಗಾಗಿ ಏನೂ ಹೇಳಲು ಹೋಗಲ್ಲ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಭಗವಂತ ಶಕ್ತಿ ಕೊಡಲಿ. ಸರ್ಕಾರ ಏನ್ ಮಾಡಿದೆ, ಏನ್ ಮಾಡಿಲ್ಲ ಅಂತ ನಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹೇಳಲು ಆಗಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಈ ಬಗ್ಗೆ ತಿಳುವಳಿಕೆ ಕೊಡಬೇಕು.
ಚಿನ್ನಸ್ವಾಮಿ ಕ್ರೀಡಾಂಗಣದ ಕೆಪಾಸಿಟಿ ಇರೋದು 35 ಸಾವಿರ ಜನ ಮಾತ್ರ. ಉಚಿತ ಅಂದ ತಕ್ಷಣ ಮೂರು ಲಕ್ಷ ಜನ ಅಲ್ಲಿಗೆ ಬಂದಿದಾರೆ. ಸಾವಿರಕ್ಕೆ ಒಂದು ಪೊಲೀಸ್ ನಮ್ಮಲ್ಲಿರೋದು, ಎಲ್ಲೋ ಒಂದು ಕಡೆ ಹೆಚ್ಚು ಕಮ್ಮಿ ಆಗಿದೆ. ಸಾವು ಹೊರಗಡೆ ಆದಾಗ ಒಳಗಡೆ ಸೆಲೆಬ್ರೇಷನ್ ನಿಲ್ಲಿಸಬೇಕಾಗಿತ್ತು. ಅಭಿಮಾನಿಗಳು ಬರೋವಾಗ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯೋಚನೆ ಮಾಡಬೇಕಾಗಿತ್ತು.
ಹೈಕೋರ್ಟ್ ಗೆ ಸುಮೊಟೋ ಕೇಸ್ ಮಾಡುವ ಎಲ್ಲಾ ಹಕ್ಕಿದೆ, ಅದೇ ಥರ ಎಲ್ಲದರಲ್ಲೂ ಮಾಡಿದರೆ ಒಳ್ಳೆಯದು. ಹನ್ನೊಂದು ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು. ಇದು ಸರ್ಕಾರ ನಡೆಸಿರೋ ಕ್ರಿಕೆಟ್ ಅಲ್ಲ. ವಿಧಾನಸೌಧ ಬಳಿ ಯಾವುದೇ ಘಟನೆ ಆಗಿಲ್ಲ. ಇನ್ಜು ಸ್ಟೇಡಿಯಂನವರು ಕಾರ್ಯಕ್ರಮ ನಡೆಸುವಾಗ ಸ್ವಲ್ಪ ಯೋಚನೆ ಮಾಡಿ ನಡೆಸಬೇಕಿತ್ತು. ಅಮಾಯಕರು, ಯುವಕರು, ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಹೊಣೆ ಹೊರಬೇಕು ಎಂದು ಹೇಳಿದರು.
B K Hariprasad in Mangalore Demands Rs 1 Crore Compensation from BCCI for Each Victim of IPL Celebration Tragedy
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm