ಬ್ರೇಕಿಂಗ್ ನ್ಯೂಸ್
02-06-25 10:54 pm Mangalore Correspondent ಕರಾವಳಿ
ಮಂಗಳೂರು, ಜೂನ್ 2 : ಸರಕಾರದ ಬೇಜವಾಬ್ದಾರಿ ಆಡಳಿತ ಮತ್ತು ಓಲೈಕೆಯ ರಾಜಕಾರಣದಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಹೊರತು ಹಿಂದೂ ನಾಯಕರಿಂದ ಅಲ್ಲ. ಓಲೈಕೆಯ ತಂತ್ರವಾಗಿ ಆರ್ ಎಸ್ ಎಸ್ ನೇತಾರ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಕೇಸು ದಾಖಲಿಸಲಾಗಿದೆ. ಸರಕಾರ ಮತ್ತಷ್ಟು ಸ್ವಾಸ್ಥ್ಯ ಕೆಡಿಸಲು ಮುಂದಾಗಿರುವಂತೆ ಕಾಣುತ್ತದೆ. ಜೇನು ಗೂಡಿಗೆ ಕಲ್ಲು ಹೊಡೆಯಲು ಹೋದರೆ ಏನಾಗುತ್ತದೆ ಎಂಬುದು ಸರಕಾರಕ್ಕೆ ತಿಳಿದಿರಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಪರೋಕ್ಷ ಎಚ್ಚರಿಕೆ ನೀಡಿದ್ದು, ಕೇಸ್ ವಾಪಾಸ್ ಪಡೆಯಲು ಒತ್ತಾಯಿಸಿದ್ದಾರೆ.
ದೇಶದ ಸಂವಿಧಾನ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ, ಮಾತನಾಡುವ ಸ್ವಾತಂತ್ರ ನೀಡಿದೆ. ಆರ್ ಎಸ್ ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹಿಂದೂ ಸಮಾಜದ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರೆ ಅದು ಪ್ರಚೋದನೆಯೆ? ಹಿಂದೂಗಳ ಧ್ವನಿಯನ್ನು ಕೇಸ್ ಹಾಕುವ ಮೂಲಕ ಅಡಗಿಸಲು ಸಾಧ್ಯವಾಗದು.
ಅದೂ 20 ದಿನಗಳ ಬಳಿಕ ಡಾ.ಪ್ರಭಾಕರ ಭಟ್ ಅವರ ಮೇಲೆ ವಿಳಂಬವಾಗಿ ಕೇಸು ಹಾಕಿರುವುದು ನಿಮ್ಮ ಪಕ್ಷವನ್ನು ತೊರೆಯುತ್ತಿರುವವರನ್ನು ಸಂತೋಷ ಪಡಿಸಲು ಎಂಬಂತೆ ಕಾಣುತ್ತಿದೆ. ಹಿಂದೂ ನಾಯಕರ ಮನೆ ಫೋಟೋ ತೆಗೆಯೋದು,
ನಡುರಾತ್ರಿ ಮನೆಗೆ ತೆರಳಿ ವಿಚಾರಣೆ ನೆಪದಲ್ಲಿ ತೊಂದರೆ ಕೊಡುವುದು ಕಾನೂನು ಮೀರಿದ ನಡವಳಿಕೆಯನ್ನು ಪೊಲೀಸರು ತೋರುತ್ತಿದ್ದಾರೆ.
ಗ್ರಾಮಾಂತರ ಪ್ರದೇಶದ ಕಾರ್ಯಕರ್ತರ ಮನೆಗೆ ನುಗ್ಗಿ ವಿಚಾರಣೆ, ಬೆದರಿಸುವ ವರ್ತನೆ ತುರ್ತು ಪರಿಸ್ಥಿತಿ ನೆನೆಪಿಸುತ್ತಿದೆ. ಜೇನುಗೂಡಿಗೆ ಕೈ ಹಾಕಿ ಪರಿಸ್ಥಿತಿ ಹದೆಗೆಡಿಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಸುಹಾಸ್ ಶೆಟ್ಟಿ ಪ್ರಕರಣದ ಆರೋಪಿಗಳು ಇನ್ನೂ ರಾಜಾರೋಷ ತಿರುಗಾಡುತ್ತಿದ್ದಾರೆ. ಸಿಸಿ ಟಿವಿಯ ದೃಶ್ಯ ಎಲ್ಲಾ ಸತ್ಯವನ್ನು ಹೇಳುತ್ತಿದೆ. ನಿಮ್ಮ ಆಡಳಿತ ಪಕ್ಷದ ಅತಿಯಾದ ಓಲೈಕೆಯಿಂದ ಹಿಂದೂ ಸಮಾಜ ಬೇಸತ್ತಿದ್ದು, ಬೆದರಿಸುವ ಬದಲು , ಜನರಲ್ಲಿ ಕಾನೂನಿನ ಮೇಲೆ ನಂಬಿಕೆ ಹೆಚ್ಚಾಗಲು ತನಿಖೆಯನ್ನು ನಿಷ್ಪಕ್ಷಪಾತ ಮಾಡಿ ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಕರಾವಳಿಯಲ್ಲಿ ಸರ್ಕಾರಕ್ಕೂ ಜಿಹಾದಿಗಳಿಗೂ, ಹಿಂದೂಗಳೇ ಟಾರ್ಗೆಟ್ ; ವೇದವ್ಯಾಸ ಕಾಮತ್
ವೋಟ್ ಬ್ಯಾಂಕ್ ರಾಜಕಾರಣದ ನೀಚ ಮಟ್ಟಕ್ಕೆ ಇಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಪ್ರಮುಖರನ್ನು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಮೂಲಕ ಕರಾವಳಿ ಪ್ರದೇಶದ ಸಾಮಾಜಿಕ ಸ್ವಾಸ್ಥ್ಯವನ್ನು ಇನ್ನಷ್ಟು ಹಾಳು ಮಾಡಲು ಹೊರಟಿರುವುದಕ್ಕೆ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆರ್.ಎಸ್.ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸಿರುವುದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರ ಗಡಿಪಾರಿಗೆ ನೊಟೀಸ್ ನೀಡಿರುವುದು, ರಾತ್ರೋರಾತ್ರಿ ಸಂಘಟನೆಗಳ ಕಾರ್ಯಕರ್ತರ ಮನೆಗೆ ಪೊಲೀಸರನ್ನು ನುಗ್ಗಿಸುತ್ತಿರುವುದು, 15 ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿರುವುದು ಸೇರಿದಂತೆ ಜಿಲ್ಲೆಯಲ್ಲಿ ಹಿಂದೂಗಳ ಪಾಲಿಗೆ ಭಯಭೀತ ವಾತಾವರಣ ಸೃಷ್ಟಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡುತ್ತಿರುವ ಕಾಂಗ್ರೆಸ್ ಸರ್ಕಾರ, ಹಿಂದೂಗಳ ವಿರುದ್ಧ ದಾಳಿ ಮಾಡುವ, ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಎಷ್ಟು ಮತಾಂಧ ಜಿಹಾದಿಗಳನ್ನು ಬಂಧಿಸಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ. ಅದು ಬಿಟ್ಟು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ತಾಲಿಬಾನ್ ಮಾದರಿ ಆಡಳಿತ ನೀಡುವುದು ಬೇಡ ಎಂದು ಎಚ್ಚರಿಸಿದರು.
ಸರ್ಕಾರವು ಇಂತಹ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸ್ಥಾಪಿಸಬೇಕು ವಿನಃ, ಕೇವಲ ಒಂದು ಸಮುದಾಯದ ಪರವಾಗಿ ನಡೆದುಕೊಳ್ಳುವುದಲ್ಲ. ಪೊಲೀಸರ ಈ ಕ್ರಮ ಜಿಲ್ಲೆಯಲ್ಲಿ ಶಾಂತಿ ಮೂಡಿಸುವ ಬದಲು ಇನ್ನಷ್ಟು ಪ್ರಕ್ಷುಬ್ಧತೆ ಸೃಷ್ಟಿಸುವ ಸಾಧ್ಯತೆಯಿದ್ದು, ಜನರ ತಾಳ್ಮೆಯ ಕಟ್ಟೆಯೊಡೆದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ಹೊಣೆಯಾಗಬೇಕಾದೀತು. ಹಾಗಾಗಿ ಕೂಡಲೇ ಇಂತಹ ಹಿಂದೂ ವಿರೋಧಿ ನೀತಿಯನ್ನು ಕೈ ಬಿಡುವಂತೆ ಶಾಸಕರು ಆಗ್ರಹಿಸಿದರು.
Don't Disturb the Beehive, Mangalore MLAS Warn Govt Against Targeting Hindu Leaders in Coastal Karnataka
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm