Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾಲ ! ಇನ್ನೆರಡು ದಿನ ಮಳೆ ಬಿರುಸಿನ ಸೂಚನೆ, ಮಣಿಪಾಲದಲ್ಲಿ ಹೆದ್ದಾರಿಯಲ್ಲೇ ಪ್ರವಾಹ ! ಸಮುದ್ರಕ್ಕಿಳಿಯದಂತೆ ಎಚ್ಚರಿಕೆ 

20-05-25 02:03 pm       Mangalore Correspondent   ಕರಾವಳಿ

ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ. ರಾತ್ರಿಯಿಂದಲೇ ನಿರಂತರ ಮಳೆ ಸುರಿದಿದ್ದು ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ನೆಲ ಒಮ್ಮಿಂದೊಮ್ಮೆಲೆ ತಂಪಗಾಗಿದೆ. ಗಾಳಿ, ಸಿಡಿಲಿನ ಅಬ್ಬರ ಇಲ್ಲದೆ ಸಾಧಾರಣ ರೀತಿಯಲ್ಲಿ ಮಳೆ ಸುರಿಯತೊಡಗಿದ್ದು ಮಳೆಗಾಲದ ಅನುಭವ ನೀಡಿದೆ.‌ 

ಮಂಗಳೂರು, ಮೇ 20 : ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ. ರಾತ್ರಿಯಿಂದಲೇ ನಿರಂತರ ಮಳೆ ಸುರಿದಿದ್ದು ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ನೆಲ ಒಮ್ಮಿಂದೊಮ್ಮೆಲೆ ತಂಪಗಾಗಿದೆ. ಗಾಳಿ, ಸಿಡಿಲಿನ ಅಬ್ಬರ ಇಲ್ಲದೆ ಸಾಧಾರಣ ರೀತಿಯಲ್ಲಿ ಮಳೆ ಸುರಿಯತೊಡಗಿದ್ದು ಮಳೆಗಾಲದ ಅನುಭವ ನೀಡಿದೆ.‌ 

ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಬಹುತೇಕ ಭಾಗದಲ್ಲಿ ಒಂದೇ ರೀತಿಯಲ್ಲಿ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಮೇ ಆರಂಭದಲ್ಲಿಯೇ ಒಳ್ಳೆ ಮಳೆ ಆಗಿದ್ದರೂ ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ಒಳ್ಳೆಯ ಮಳೆ ಆಗಿರಲಿಲ್ಲ‌.  

ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು ಹೆಲ್ತ್ ಹಬ್ ಎನಿಸಿರುವ ಮಣಿಪಾಲದಲ್ಲಿ ಹೆದ್ದಾರಿಯಲ್ಲಿ ನದಿಯಂತೆ ನೀರು ಹರಿಯುವ ವಿಡಿಯೋ ವೈರಲ್ ಆಗಿದೆ. ಉಡುಪಿ- ಮಣಿಪಾಲ ರಸ್ತೆಯಲ್ಲಿ ಕೃತಕ ಪ್ರವಾಹದ ರೀತಿಯಲ್ಲಿ ಮಳೆ ನೀರು ಹರದಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಮಣಿಪಾಲದ ಐನಾಕ್ಸ್ ಬಳಿ ರಸ್ತೆಯಲ್ಲಿ ಪ್ರವಾಹದ ರೀತಿ ಕಲ್ಲು ಮಣ್ಣಿನ ಜೊತೆಗೆ ನೀರು ಹರಿದಿದ್ದು, ಘಟ್ಟ ಕುಸಿದು ಬಂದ ರೀತಿಯ ಅನುಭವ ಆಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದಿದೆ. 

ಎರಡು ದಿನ ಭಾರೀ ಮಳೆ ಸೂಚನೆ 

ಹವಾಮಾನ ಇಲಾಖೆಯಿಂದ ಕರಾವಳಿ ಮತ್ತು ಘಟ್ಟ ಪ್ರದೇಶದಲ್ಲಿ ಮೇ 20 ಮತ್ತು 21ರಂದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಲಾಗಿದ್ದು ಈಗಾಗಲೇ ಮೀನುಗಾರಿಕೆ ತೆರಳಿದವರು ಮರಳುವಂತೆ ಸೂಚಿಸಲಾಗಿದೆ.

Heavy rainfall that began early Tuesday, May 20 morning has once again triggered artificial flooding along the crucial Udupi-Manipal Road, causing severe inconvenience to commuters.