U T Khader, Satish Kumapla, Mangalore, Suhas, Fazil: ಫಾಜಿಲ್ ಮನೆಯವರಿಗೂ ಸುಹಾಸ್‌ ಶೆಟ್ಟಿ ಹತ್ಯೆಗೂ ಸಂಬಂಧವಿಲ್ಲ ಎಂದಿದ್ದ ಖಾದರ್ ಬಣ್ಣ ಬಯಲಾಗಿದೆ, ಅವರ ಜಿಹಾದಿ ಮನಸ್ಥಿತಿ ಬಹಿರಂಗವಾಗಿದೆ ; ಸತೀಶ್‌ ಕುಂಪಲ

03-05-25 10:13 pm       Mangalore Correspondent   ಕರಾವಳಿ

ವಿಧಾನಸಭಾಧ್ಯಕ್ಷ ಯು.ಟಿ.ಖಾದ‌ರ್ ಬಣ್ಣ ಬಯಲಾಗಿದೆ, ಅವರ ಜಿಹಾದಿ ಮನಸ್ಥಿತಿ ಬಹಿರಂಗವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದ್ದಾರೆ.

ಮಂಗಳೂರು, ಮೇ 03 : ವಿಧಾನಸಭಾಧ್ಯಕ್ಷ ಯು.ಟಿ.ಖಾದ‌ರ್ ಬಣ್ಣ ಬಯಲಾಗಿದೆ, ಅವರ ಜಿಹಾದಿ ಮನಸ್ಥಿತಿ ಬಹಿರಂಗವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ಕುಂಪಲ, ಫಾಜಿಲ್ ಮನೆಯವರಿಗೂ ಸುಹಾಸ್‌ ಶೆಟ್ಟಿ ಹತ್ಯೆಗೂ ಸಂಬಂಧವಿಲ್ಲ ಎಂದು ಖಾದರ್ ಹೇಳಿಕೆ ನೀಡಿದ್ದರು, ಆದರೆ ಸುಹಾಸ್‌ ಹತ್ಯೆಗೆ ಫಾಜಿಲ್ ಸಹೋದರನೇ ಐದು ಲಕ್ಷ ಸುಪಾರಿ ಕೊಟ್ಟಿದ್ದಾಗಿ ಪೊಲೀಸರೇ ಹೇಳಿದ್ದಾರೆ. ಹಾಗಾಗಿ ಖಾದ‌ರ್ ಅವರ ನಿಜ ಬಣ್ಣ ಬಯಲಾಗಿದೆ ಎಂದರು.

ಖಾದರ್ ಈ ರೀತಿಯ ಹೇಳಿಕೆ ಕೊಟ್ಟರೆ ಪೊಲೀಸರು ಸರಿಯಾಗಿ ತನಿಖೆ ಮಾಡುವುದಾದರೂ ಹೇಗೆ? ಸುಹಾಸ್ ಶೆಟ್ಟಿ ಸಾವಿನ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳುವುದೇ ಸೂಕ್ತ, ಈಗಿನ ಸನ್ನಿವೇಶದಲ್ಲಿ ರಾಜ್ಯ ಸರಕಾರ ಪೊಲೀಸರನ್ನು ಸರಿಯಾಗಿ ತನಿಖೆ ಮಾಡುವ ಸ್ವಾತಂತ್ರ್ಯ ಕೊಡುವ ಭರವಸೆ ನಮಗಿಲ್ಲ ಎಂದರು.

ಇಂದು ನಗರಕ್ಕೆ ಆಗಮಿಸಿದ ಗೃಹ ಸಚಿವ ಪರಮೇಶ್ವ‌ರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಬ್ಬರೂ ಶಾಂತಿಯ ವಾತಾವರಣಕ್ಕೆ ಸಹಕರಿಸಬೇಕಿತ್ತು, ಬದಲು ಅಶಾಂತಿ ಸೃಷ್ಟಿಸಿ ತೆರಳಿದ್ದಾರೆ. ಕೇವಲ ಮುಸಲ್ಮಾನ ಮುಖಂಡರನ್ನಷ್ಟೇ ಕರೆದು ಸಭೆ ನಡೆಸಿದ್ದಾರೆ. ಹಿಂದೂ ಮುಖಂಡರನ್ನಾಗಲಿ, ಈ ಭಾಗದ ಶಾಸಕರನ್ನಾಗಲಿ ಕರೆದು ಮಾತನಾಡಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ ಆಕ್ಷೇಪ ವ್ಯಕ್ತಪಡಿಸಿದರು.

Mangaluru MLA Satish Kumpala Slams Khaders Claim, Questions Fazil Family's Alleged Disconnect from Suhas Shetty Murder.