ಬ್ರೇಕಿಂಗ್ ನ್ಯೂಸ್
 
            
                        02-05-25 09:26 pm Mangalore Correspondent ಕರಾವಳಿ
 
            ಮಂಗಳೂರು, ಮೇ.2: ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಸುಟ್ಟ ಅಪರಾಧಿಗಳ ಕೇಸನ್ನು ಸಿದ್ದರಾಮಯ್ಯ ವಾಪಸ್ ತೆಗೆದುಕೊಂಡಿದ್ದಾರೆ. ಈ ರೀತಿ ಮಾಡಿರುವುದು ಅಪರಾಧಿಗಳಿಗೆ 'ಇದು ನಮ್ಮ ಸರ್ಕಾರ' ಎನ್ನುವ ಭಾವನೆ ಬಂದಿದೆ. ಇದರಿಂದ ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿದ್ದು ಹಿಂದುಗಳನ್ನು ಭಯಪಡಿಸುವ ಕೃತ್ಯ ಆಗ್ತಾ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಂಟ್ವಾಳದಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಶವಕ್ಕೆ ಅಂತಿಮ ನಮನ ಸಲ್ಲಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪಿಎಫ್ಐ ಸಂಘಟನೆಯ ಅಪರಾಧಿಗಳನ್ನು ಸಿದ್ದರಾಮಯ್ಯ ಸರ್ಕಾರ ಬಿಟ್ಟು ಕಳುಹಿಸಿದೆ. ಕ್ಯಾಬಿನೆಟ್ ಮೂಲಕ ಅವರ ಮೇಲಿನ ಕೇಸ್ ಹಿಂಪಡೆದು ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು ಸುಟ್ಟ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಅಜೆಂಡಾ ಸಾಬೀತಾಗಿದೆ. ಅವರ ಮೇಲಿನ ಕೇಸನ್ನೂ ವಾಪಸ್ ತಗೊಂಡು ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ರಾಜ್ಯ ಸರ್ಕಾರವೇ ಕಾರಣವಾಗುತ್ತಿದೆ.
ಮಂಗಳೂರಿನಲ್ಲಿ ಕಾರನ್ನು ಅಡ್ಡಹಾಕಿ ಸುಹಾಸ್ ಅವರನ್ನು ಭೀಕರವಾಗಿ ಕೊಂದಿದ್ದು ಇದಕ್ಕೆ ಸಾಕ್ಷಿ. ಸಿರಿಯಾದಲ್ಲಿ ಏನು ಮಾಡುತ್ತಿದ್ದಾರೋ ಅಂತಹದ್ದೇ ಕೃತ್ಯವನ್ನು ಇಲ್ಲಿ ಮಾಡಿದ್ದಾರೆ. ಇಂತಹ ಭೀಭತ್ಸ ಕೃತ್ಯವನ್ನು ಸಾಮಾನ್ಯ ಜನರಿಂದ ಮಾಡಲು ಸಾಧ್ಯವಿಲ್ಲ. ಹೊರಗಡೆ ತರಬೇತಿ ಪಡೆದವರೇ ಈ ಕೃತ್ಯ ಎಸಗಿದ್ದಾರೆ. ಆದರೆ ಈ ಕೃತ್ಯವನ್ನೂ ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾ ಇದೆ.

ಇದೇ ವೇಳೆ, ಖಾದರ್ ಅವರು ತನಗೂ ಬೆದರಿಕೆ ಕರೆ ಬಂದಿದೆ ಎಂದು ಹೇಳುತ್ತಿದ್ದಾರೆ. ಅಂದರೆ ಈ ಕೇಸನ್ನು ಡೈವರ್ಟ್ ಮಾಡುವ ಷಡ್ಯಂತ್ರ ನಡೀತಾ ಇದೆ. ಸಿಎಂ ಸಿದ್ದರಾಮಯ್ಯ ಸುಹಾಸ್ ಶೆಟ್ಟಿ ಕೊಲೆ ಬಗ್ಗೆ ಮಾತಾಡಲ್ಲ. ಖಾದರ್ ಅವರಿಗೆ ರಕ್ಷಣೆ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಎಲ್ಲ ದೇಶದ್ರೋಹಿ ಶಕ್ತಿಗಳಿಗೂ ಬಲ ಬಂದಿದೆ. ಈ ಸರ್ಕಾರದಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬ ವಿಶ್ವಾಸ ಇಲ್ಲ. ಆದರೆ ಸರ್ಕಾರ ಬರ್ತದೆ, ಹೋಗ್ತದೆ, ಇವ್ಯಾವುದೂ ಪರ್ಮನೆಂಟ್ ಅಲ್ಲ. ಅಧಿಕಾರಿಗಳು ಮಾತ್ರ ಪರ್ಮನೆಂಟ್, ಅವರಲ್ಲಿ ನಿಷ್ಪಕ್ಷಪಾತ ತನಿಖೆ ಆಗಬೇಕೆಂದು ಆಗ್ರಹ ಮಾಡ್ತೀನಿ.
ಸುಹಾಸ್ ಶೆಟ್ಟಿ ಪ್ರಕರಣದ ಬಗ್ಗೆ ಎನ್ಐಎ ತನಿಖೆ ಆಗಬೇಕೆಂದು ಈಗಾಗಲೇ ಅಮಿತ್ ಷಾ ಕಚೇರಿಗೆ ಮಾತಾಡಿದ್ದೇನೆ. ಪತ್ರವನ್ನೂ ಬರೆದಿದ್ದೇನೆ. ಕರಾವಳಿಯಲ್ಲಿ ಭಟ್ಕಳದಿಂದ ಕಾಸರಗೋಡು ವರೆಗೆ ಆಗಿರುವ ಈ ರೀತಿಯ ಎಲ್ಲ ಕೊಲೆ ಸರಣಿಗಳ ಬಗ್ಗೆಯೂ ಎನ್ಐಎ ಮೂಲಕ ತನಿಖೆಗೆ ವಿಶೇಷ ತಂಡ ಆಗಬೇಕು ಎಂದು ಹೇಳಿದರು.
 
            
            
            In the wake of the shocking murder of Suhas in Mangalore, Union Minister Shobha Karandlaje has alleged that senior Congress leader and Speaker of the Karnataka Legislative Assembly, U.T. Khader, is attempting to divert public attention by claiming threats to his own life.
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             29-10-25 10:43 pm
                        
            
                  
                Mangalore Correspondent    
            
                    
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
 
    ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm