ಬ್ರೇಕಿಂಗ್ ನ್ಯೂಸ್
02-05-25 06:44 pm Mangaluru HK Staff ಕರಾವಳಿ
ಬಂಟ್ವಾಳ, ಮೇ 2: ಬಜಪೆಯಲ್ಲಿ ಹತ್ಯೆಗೀಡಾದ ಹಿಂದೂ ಪರ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಮೃತದೇಹದ ಅಂತ್ಯಕ್ರಿಯೆ ಶುಕ್ರವಾರ ಬಂಟ್ವಾಳ ತಾಲೂಕಿನ ಕಾರಿಂಜ ಗ್ರಾಮದ ಪುಲಿಮಜಲು ಎಂಬಲ್ಲಿ ಬಿಜೆಪಿ ನಾಯಕರು, ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು.
ಸುಹಾಸ್ ಶೆಟ್ಟಿ ತಾಯಿಯ ಮೂಲ ಮನೆಯಾದ ಕಾರಿಂಜ ಸಮೀಪದ ಪುಲಿಮಜಲಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಇದಕ್ಕೂ ಮುನ್ನ ಮಂಗಳೂರಿನಿಂದ ಸುಹಾಸ್ ಶೆಟ್ಟಿ ಮೃತದೇಹವನ್ನು ಮೆರವಣಿಗೆ ಮೂಲಕ ಬಂಟ್ವಾಳದ ಪುಲಿಮಜಲಿಗೆ ತರಲಾಯಿತು. ಸಾವಿರಾರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು. ಕೊನೆಗೆ, ಪುಲಿಮಜಲಿನ ಮನೆಯ ಬಳಿಯಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಹಿರಿಯ ನಾಯಕ ಸಿ.ಟಿ.ರವಿ, ಕರಾವಳಿ ಜಿಲ್ಲೆಗಳ ಬಿಜೆಪಿ ಶಾಸಕರು ಅಂತ್ಯಕ್ರಿಯೆ ಸಂದರ್ಭದಲ್ಲಿ ಭಾಗಿಯಾಗಿದ್ದರು. ಇದಲ್ಲದೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್, ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಕಾರ್ಯದರ್ಶಿ ಮಿಲಿಂದ್ ಫರಾಂಡ, ಹಿಂದೂ ಸಂಘಟನೆಯ ಮುಖಂಡರಾದ ಪುನೀತ್ ಕೆರೆಹಳ್ಳಿ, ರಘು ಸಕಲೇಶಪುರ, ಶರಣ್ ಪಂಪ್ ವೆಲ್ ಮುಂತಾದವರು ಭಾಗಿಯಾಗಿದ್ದರು.
ಜೀವಕ್ಕೆ ರಕ್ಷಣೆ ನೀಡದಿರೋದು ಪೊಲೀಸರ ವೈಫಲ್ಯ ;
ಮೃತ ಸುಹಾಸ್ ಶೆಟ್ಟಿ ಅಂತಿಮ ದರ್ಶನದ ಬಳಿಕ ಬಿ.ವೈ ವಿಜಯೇಂದ್ರ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಕಾಶ್ಮೀರ ಪೆಹಲ್ಗಾಮ್ ಹತ್ಯೆ ಮರೆಯುವ ಮೊದಲೇ ಮಂಗಳೂರಿನಲ್ಲಿ ಕೊಲೆ ಘಟನೆ ನಡೆದಿರುವುದು ಖಂಡನಾರ್ಹ. ಬಿಜೆಪಿ ಈ ಘಟನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಪೊಲೀಸ್ ಇಲಾಖೆ ವೈಫಲ್ಯ ಮೇಲ್ನೋಟಕ್ಕೆ ಕಂಡು ಬರ್ತಿದೆ. ಹಿಂದು ಕಾರ್ಯಕರ್ತರ ಜೀವಕ್ಕೆ ರಕ್ಷಣೆ ನೀಡದಿರೋದು ಪೊಲೀಸರ ವೈಫಲ್ಯ. ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತನ ಕುಟುಂಬಕ್ಕೆ ಧೈರ್ಯ ಹೇಳುವ ಪ್ರಯತ್ನ ಮಾಡಿದ್ದೇವೆ. ಬಿಜೆಪಿಯ ಮುಖಂಡರು, ಕಾರ್ಯಕರ್ತರು ಅವರ ಕುಟುಂಬದ ಜೊತೆ ಇದ್ದೇವೆ. ಕುಟುಂಬದ ಆಧಾರ ಸ್ತಂಭ ಕಳಚಿ ಬಿದ್ದಂತಾಗಿದೆ. ಪಕ್ಷದ ಪರವಾಗಿ 25 ಲಕ್ಷ ಪರಿಹಾರ ನೀಡುವ ತೀರ್ಮಾನ ಮಾಡಿದ್ದೇವೆ. ಮುಖ್ಯಮಂತ್ರಿ, ಗೃಹಸಚಿವರು ಘಟನೆಯ ಗಂಭೀರತೆ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದಿಂದ ಪರಿಹಾರ ನೀಡಬೇಕು. ಕೊಲೆ ಘಟನೆ ಬಗ್ಗೆ ಎನ್ಐಎ ತನಿಖೆಯಾಗಬೇಕು. ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದ್ರೆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿದರು.
Karnataka BJP President B.Y. Vijayendra has condemned the recent murder of Hindu activist Suhas Shetty in Mangaluru, describing it as a "serious failure in the system." He accused the Congress-led state government of fostering an environment that allows repeated attacks on Hindu activists. Vijayendra's remarks highlight concerns over the state's law and order situation and the safety of Hindu activists under the current administration.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 10:26 pm
Mangalore Correspondent
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
12-07-25 01:32 pm
HK News Desk
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm