Mangalore, Kudupu Murder case, MLA Bharath Shetty: ಯಾರನ್ನೋ ಕಿಂಗ್ ಪಿನ್ ಎನ್ನಲು ಏನಿದೆ ನಿಮ್ಮಲ್ಲಿ ಸಾಕ್ಷಿ? ಕಾಂಗ್ರೆಸಿಗರು ಜಡ್ಜ್ ಮೆಂಟ್ ಕೊಡುತ್ತಿದ್ದಾರೆಯೇ? ಅಮಾಯಕರನ್ನು ಫಿಕ್ಸ್ ಮಾಡಿದರೆ ಸುಮ್ಮನಿರಲ್ಲ ; ಶಾಸಕ ಭರತ್ ಶೆಟ್ಟಿ ಕಿಡಿ

01-05-25 09:29 pm       Mangalore Correspondent   ಕರಾವಳಿ

ಕುಡುಪು ಹತ್ಯೆ ಪ್ರಕರಣದಲ್ಲಿ ಇಂಥ ವ್ಯಕ್ತಿಯೇ ಇದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ಅಥವಾ ಎಸ್ಡಿಪಿಐ ನಾಯಕರಲ್ಲಿ ಸಾಕ್ಷಿ ಇದೆಯೇ? ಇದೇ ವ್ಯಕ್ತಿ ಕಿಂಗ್ ಪಿನ್ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಪೊಲೀಸರು ಇವರ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಇಂಥದ್ದೇ ವ್ಯಕ್ತಿ ಬೇಕು, ಇಂತಿಷ್ಟು ಮಂದಿಯನ್ನು ಅರೆಸ್ಟ್ ಮಾಡಬೇಕು ಎನ್ನುತ್ತಿದ್ದಾರೆ.

ಮಂಗಳೂರು, ಮೇ 1 : ಕುಡುಪು ಹತ್ಯೆ ಪ್ರಕರಣದಲ್ಲಿ ಇಂಥ ವ್ಯಕ್ತಿಯೇ ಇದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ಅಥವಾ ಎಸ್ಡಿಪಿಐ ನಾಯಕರಲ್ಲಿ ಸಾಕ್ಷಿ ಇದೆಯೇ? ಇದೇ ವ್ಯಕ್ತಿ ಕಿಂಗ್ ಪಿನ್ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಪೊಲೀಸರು ಇವರ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಇಂಥದ್ದೇ ವ್ಯಕ್ತಿ ಬೇಕು, ಇಂತಿಷ್ಟು ಮಂದಿಯನ್ನು ಅರೆಸ್ಟ್ ಮಾಡಬೇಕು ಎನ್ನುತ್ತಿದ್ದಾರೆ. ಅಲ್ಲಿ ಏನು ಕ್ರೈಮ್ ಆಗಿದೆಯೋ ಅದರ ಬಗ್ಗೆ ತನಿಖೆ ಮಾಡಿ, ಯಾರು ತಪ್ಪಿತಸ್ಥರಿದ್ದಾರೆ ಅರೆಸ್ಟ್ ಮಾಡಿ. ಇದರ ನೆಪದಲ್ಲಿ ಅಮಾಯಕರನ್ನು ಬಂಧನ ಮಾಡುವುದು, ಯಾರನ್ನೋ ಫಿಕ್ಸ್ ಮಾಡುವುದು ಸರಿಯಲ್ಲ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ದೇಶದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಭಾವನೆಯಿದ್ದು, ಇಂತಹ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಹಾಕಿದರೆ ಯಾರು ಕೂಡ ಬಿಡುವುದಿಲ್ಲ. ಹಾಗಂತ, ಇದೇನೂ ಪೂರ್ವ ನಿಯೋಜಿತವಾಗಿ ಆಗಿರುವ ಕೃತ್ಯವಲ್ಲ, ಅಕಸ್ಮಾತ್ ಆಗಿದೆ. ಅಲ್ಲಿ ಕ್ರಿಕೆಟ್ ಆಯೋಜಿಸಿದ್ದು ಬಿಜೆಪಿಗರಲ್ಲ, ಅಲ್ಲಿನ ಕಾರ್ಯಕ್ರಮಕ್ಕೆ ಬಿಜೆಪಿ, ಕಾಂಗ್ರೆಸಿಗರು ಎಲ್ಲ ಬಂದಿದ್ದಾರೆ. ಹಾಗಿರುವಾಗ, ನೀವು ಕ್ರೈಮ್ ಹೆಸರಲ್ಲಿ ಜಾತಿ ಹುಡುಕುವುದು, ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುವುದು, ಅಮಾಯಕರನ್ನು ಫಿಕ್ಸ್ ಮಾಡಲು ಪೊಲೀಸರಿಗೆ ಒತ್ತಡ ಹೇರಿದರೆ ನಾವು ಸುಮ್ಮನಿರಲ್ಲ. ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.

ದೇಶ ಯುದ್ಧ ಸನ್ನಿವೇಶದಲ್ಲಿರುವಾಗ ಹಿಂದು- ಮುಸ್ಲಿಂ ಒಗ್ಗಟ್ಟು ಮುರಿಯುವ ಸಂಚು ಕಾಂಗ್ರೆಸಿಗರ ಮಾತಿನಲ್ಲಿ ಕಾಣುತ್ತದೆ. ಕೇರಳದ ವ್ಯಕ್ತಿ ಯಾಕಾಗಿ ಮಂಗಳೂರಿಗೆ ಬಂದಿದ್ದ, ಆತನ ಹಿನ್ನೆಲೆ ಏನು ಅಂತ ಪೊಲೀಸರು ತನಿಖೆ ಮಾಡಬೇಕು. ಇವರು ಇಸ್ರೇಲ್ –ಪ್ಯಾಲೆಸ್ತೀನ್ ಯುದ್ಧ ನಡೆದಾಗ ಇಸ್ರೇಲ್ ಧ್ವಜವನ್ನು ಸುಡುತ್ತಾರೆ. ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆಯೊಬ್ಬರು ಪಾಕ್ ಪರ ಕಮೆಂಟ್ ಹಾಕಿದಾಗ ಮಾತನಾಡಲ್ಲ. ಈಗ ಒಬ್ಬ ಸತ್ತಿದ್ದಾನೆಂದು ರಾಜಕೀಯ ಲಾಭಕ್ಕೆ ನೋಡುತ್ತಿದ್ದಾರೆ ಎಂದು ಹೇಳಿದ ಭರತ್ ಶೆಟ್ಟಿ, ಈಗ ಪಾಕ್ ಪರ ಘೋಷಣೆ ಕೂಗಿರುವ ಸಂತ್ರಸ್ತ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ. ಬೆಂಗಳೂರಿನಲ್ಲಿ ಗೋವಿನ ಕೆಚ್ಚಲು ಕೊಯ್ದ ವ್ಯಕ್ತಿಯನ್ನೂ ಮಾನಸಿಕ ಅಸ್ವಸ್ಥ ಎಂದೇ ಹೇಳಿದ್ದರು. ಪಾಕ್ ಪರ ಮಾತನಾಡುವವರೆಲ್ಲ ಮಾನಸಿಕ ಅಸ್ವಸ್ಥರೇ ಆಗುತ್ತಿದ್ದಾರೆ ಎಂದು ಹೇಳಿದರು.

ಪೊಲೀಸ್ ತನಿಖೆ ಕೆಟ್ಟದಾಗಿ ನಡೆದಿದೆ, ತಲೆ ಬುಡ ಇಲ್ಲದ ರೀತಿ ಮಾಡಿದ್ದಾರೆ. ಮೊದಲು ಯುಡಿಆರ್ ಮಾಡುತ್ತಾರೆ, ಆಮೇಲೆ ಗುಂಪು ಹತ್ಯೆ ಅಂತ ಮಾಡುತ್ತಾರೆ. ಈಗ ಅದಕ್ಕೆ ರಾಜಕೀಯ ಬಣ್ಣ ಕೊಡುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಕಾರ್ಪೊರೇಟರ್ ಪತಿಯ ಮೇಲಿನ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಆರೋಪ ಅಷ್ಟೇ. ಏನಾದರೂ ದಾಖಲೆ ಇದೆಯಾ. ಸಾಕ್ಷಿ ಇದ್ದರೆ ಪೊಲೀಸರು ಅರೆಸ್ಟ್ ಮಾಡಲಿ. ಇವರು ಸುಮ್ಮನೆ ಹೆಸರು ತೆಗೆದಿದ್ದಕ್ಕೆ ಮಾನನಷ್ಟ ಹಾಕುತ್ತಾರೆ, ನೋಡಿಕೊಳ್ಳಲಿ ಎಂದರು. ಸುದ್ದಿಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ರಾಜೇಶ್ ಕೊಟ್ಟಾರಿ, ಯತೀಶ್ ಆರ್ವಾರ್ ಮತ್ತಿತರರಿದ್ದರು.

Mob lynching of 35-year-old Ashraf in Kudupu, on the outskirts of Mangaluru on April 27, was accidental and this crime should not be politicised, said Mangaluru City North MLA Y. Bharath Shetty in Mangaluru on Thursday, May 1.