Mangalore Kudupu Murder Case, Update, Police: ಕುಡುಪು ಹತ್ಯೆ ಪ್ರಕರಣ ; ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ; ಗೃಹ ಸಚಿವರ ಹೇಳಿಕೆ ನಿರಾಕರಿಸಿದ ಪೊಲೀಸ್ ಕಮಿಷನರ್ ! 

01-05-25 05:38 pm       Mangalore Correspondent   ಕರಾವಳಿ

ಗುಂಪು ಹತ್ಯೆ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ನಾವು ಇನ್ನೂ ವಿಚಾರಣೆ ಮಾಡುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳದ ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ. ‌

ಮಂಗಳೂರು, ಮೇ 1 : ಗುಂಪು ಹತ್ಯೆ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ನಾವು ಇನ್ನೂ ವಿಚಾರಣೆ ಮಾಡುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳದ ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ. ‌

ಮಂಗಳೂರಿನ ಕುಡುಪು ಬಳಿ  ಯುವಕನ ಹತ್ಯೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಕಾರಣ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿರುವುದು ರಾಜ್ಯದಲ್ಲಿ ಸಂಚಲನ ಎಬ್ಬಿಸಿತ್ತು. ಮಂಗಳೂರು ಪೊಲೀಸರು ಆ ರೀತಿಯ ಮಾಹಿತಿ ನೀಡಿರದಿದ್ದರೂ ಗೃಹ ಸಚಿವರು ಮಾಧ್ಯಮಕ್ಕೆ ಆ ರೀತಿ ಹೇಳಿಕೆ ನೀಡಿದ್ದರು. 

ಘಟನೆ ಸಂಬಂಧ ಪೊಲೀಸರ ಲೋಪ ಆಗಿದ್ದಕ್ಕೆ ಇನ್ಸ್ ಪೆಕ್ಟರ್ ಸೇರಿ ಮೂವರ ಅಮಾನತು ಪಡಿಸಿದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಂದರ್ಭದಲ್ಲಿ ಘಟನೆಗೆ ಕಾರಣ ಎನ್ನಲಾದ ಪಾಕಿಸ್ತಾನ ಪರ ಘೋಷಣೆ ವಿಚಾರ ಇನ್ನೂ ಗೊತ್ತಾಗಿಲ್ಲ ಎಂದು ಕಮಿಷನರ್ ಹೇಳಿದ್ದು ಗೃಹ ಸಚಿವರು ಯಾರ ಮಾಹಿತಿ ಆಧರಿಸಿ ಹೇಳಿದ್ದರು ಎನ್ನುವ ಪ್ರಶ್ನೆ ಏಳುವಂತೆ ಮಾಡಿದೆ.  

ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ ಮೂವರು ಪೋಲಿಸರನ್ನು ಅಮಾನತು ಮಾಡಲಾಗಿದೆ. ಮೊದಲು ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಲಾಗಿತ್ತು.‌ ತನಿಖೆ ನಡೆಸಿದ ನಂತರ ಇದು ಕೊಲೆ ಎಂದು ಧೃಡಪಟ್ಟಿದೆ. ಮೂವರು ಪೋಲಿಸರನ್ನು ಕರ್ತವ್ಯದಲ್ಲಿ ಲೋಪ ಎಸಗಿದ ಆರೋಪದಲ್ಲಿ ಅಮಾನತು ಮಾಡಲಾಗಿದೆ. ತನಿಖೆಯನ್ನು ಮುಂದುವರೆಸಿದ್ದೇವೆ. 20 ಮಂದಿಯನ್ನು ಬಂಧಿಸಲಾಗಿದೆ, ಮತ್ತೊಬ್ಬನ್ನು ಇಂದು ಬೆಳ್ಳಗ್ಗೆ ವಶಕ್ಕೆ ಪಡೆದುಕೊಂಡಿದ್ದೇವೆ. 

ತಲೆಮರೆಸಿಕೊಂಡಿರುವರಿಗೆ ಹುಡುಕಾಟ ಮಾಡುತ್ತಿದ್ದೇವೆ, ಇದಲ್ಲದೆ, ಘಟನಾ ಸ್ಥಳದಲ್ಲಿ ಇದ್ದ 15 ಜನರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಐ ವಿಟ್ನೆಸ್ ಹಾಗೂ  ಸ್ಥಳದ ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಲಾಗುತ್ತಿದೆ. ಪಾಕ್ ಪರ ಘೋಷಣೆ ಕೂಗಿದ್ದಾನೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಸ್ಥಳೀಯರ ಮಾಹಿತಿ ಪಡೆಯುತ್ತಿದ್ದೇವೆ ಎಂದು ಕಮಿಷನರ್ ಅನುಪಮ್ ಅರ್ಗವಾಲ್ ಹೇಳಿದ್ದಾರೆ.

In a significant development in the Kudupu murder case, Mangaluru Police Commissioner Anupam Agrawal has stated that no evidence has been found to support claims of the accused shouting pro-Pakistan slogans after the incident. This directly contradicts the earlier statement made by Karnataka Home Minister G. Parameshwara, who had suggested that such slogans were raised. Speaking to the media, Commissioner Agrawal clarified, “So far, our investigation has not found any audio, video, or eyewitness accounts to confirm the allegation of pro-Pak slogans being raised during or after the crime.”