ಬ್ರೇಕಿಂಗ್ ನ್ಯೂಸ್
29-04-25 11:53 am Mangalore Correspondent ಕರಾವಳಿ
ಮಂಗಳೂರು, ಎ.29 : ನೆಹರು ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಬಿ.ಆರ್ ಅಂಬೇಡ್ಕರ್ ಹತ್ತೇ ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ರೋಸಿ ಹೋಗಿ ರಾಜಿನಾಮೆ ನೀಡಿದ್ದರು. 1956ರಲ್ಲಿ ರಾಜಿನಾಮೆ ಪತ್ರ ನೀಡಿದಾಗ, ಅದರಲ್ಲಿ ಐದು ಕಾರಣಗಳನ್ನೂ ಉಲ್ಲೇಖಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಈ ಪತ್ರ ಹೊರಗೆ ಬರದಂತೆ ಕಾಂಗ್ರೆಸ್ ನೋಡಿಕೊಂಡಿತ್ತು. ಮೋದಿ ಸರಕಾರ ಬಂದ ಬಳಿಕ ಮುಚ್ಚಿಹೋಗಿದ್ದ ಪತ್ರ ಹೊರಗೆ ಬಂದಿದ್ದು, ಕಾಂಗ್ರೆಸ್ ಸುಡುವ ಮನೆ, ಎಚ್ಚರ ಎಂದು ಯಾಕೆ ಹೇಳಿದರೆಂದು ಅದನ್ನು ನೋಡಿದಾಗ ಅರ್ಥವಾಗುತ್ತದೆ ಎಂದು ಸಾಮಾಜಿಕ ಚಿಂತಕ ವಾದಿರಾಜ ಸಾಮರಸ್ಯ ಹೇಳಿದರು.
ನಗರದ ಕೆನರಾ ಹೈಸ್ಕೂಲಿನ ಭುವನೇಂದ್ರ ಸಭಾಂಗಣದಲ್ಲಿ ಕಾಂಗ್ರೆಸ್ ಸುಡುವ ಮನೆ, ಎಚ್ಚರ ಹೀಗೆಂದು ಅಂಬೇಡ್ಕರ್ ಯಾಕಾಗಿ ಹೇಳಿದ್ದರು ಎನ್ನುವ ಬಗ್ಗೆ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು. ನೆಹರು ಅವರಲ್ಲಿ ದೇಶಾದ್ಯಂತ ಎಲ್ಲ ಮಹಿಳೆಯರಿಗೂ ಸಮಾನ ಹಕ್ಕು ಸಿಗಬೇಕೆಂದು ಹಿಂದು ಕೋಡ್ ಬಿಲ್ ತರುವಂತೆ ಅಂಬೇಡ್ಕರ್ ಹೇಳಿದ್ದರು. ಆದರೆ ನೆಹರು ಅದಕ್ಕೆ ಒಪ್ಪಲಿಲ್ಲ. ಎಸ್ಸಿ-ಎಸ್ಟಿಯವರ ರೀತಿಯಲ್ಲೇ ಹಿಂದುಳಿದ ವರ್ಗದವರಿಗೂ ಮೀಸಲು ಕೊಡಬೇಕೆಂದು ಕೇಳಿದ್ದರು. ಅದಕ್ಕೂ ನೆಹರು ಮಾನ್ಯತೆ ನೀಡಿರಲಿಲ್ಲ. ಅಂಬೇಡ್ಕರ್ ರಾಜಿನಾಮೆ ನೀಡಿದ ಬಳಿಕ ಪರಿಶೀಲನೆಗೆ ಆಯೋಗ ಮಾಡಿತ್ತಾದರೂ ಫಲ ಸಿಗಲಿಲ್ಲ. ಆಬಳಿಕ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗ ಇದಕ್ಕಾಗಿ ಮಂಡಲ್ ಆಯೋಗ ರಚಿಸಲಾಗಿತ್ತು. ಮಂಡಲ್ ಆಯೋಗ ವರದಿ ಕೊಟ್ಟರೂ, ಅದನ್ನು ಮತ್ತೆ ಜಾರಿಗೆ ತರಲಿಲ್ಲ. ಅದನ್ನು ಜಾರಿಗೆ ತಂದಿದ್ದು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರ.
ಮುಸ್ಲಿಮರು ಮಾತ್ರ ಕಾಂಗ್ರೆಸಿನ ಆದ್ಯತೆ
ಇದಲ್ಲದೆ, ಕಾಂಗ್ರೆಸ್ಸಿನ ಪ್ರಯಾರಿಟಿ ಎಸ್ಸಿ- ಎಸ್ಟಿಯಲ್ಲ, ಹಿಂದುಳಿದವರೂ ಅಲ್ಲ. ಅಲ್ಪಸಂಖ್ಯಾತ ಮುಸ್ಲಿಮರು ಕಾಂಗ್ರೆಸಿನ ಆದ್ಯತೆ ಎಂದು ಅಂಬೇಡ್ಕರ್ ತಮ್ಮ ರಾಜಿನಾಮೆ ಪತ್ರದಲ್ಲಿ ಹೇಳಿದ್ದಾರೆ. ಇದನ್ನೇ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದಿದ್ದರು. ನೆಹರು ಕಾಲದಿಂದ ಈವತ್ತಿನ ವರೆಗೂ ಕಾಂಗ್ರೆಸ್ ಆದ್ಯತೆ ಮುಸ್ಲಿಮರು ಮಾತ್ರ. ಲಂಡನ್ನಲ್ಲಿ ಕಲಿತು ಬಂದಿದ್ದ ಅಂಬೇಡ್ಕರ್, ದೇಶದಲ್ಲಿ ಎಕನಾಮಿಕ್ಸ್ ನಲ್ಲಿ ಮೊದಲ ಬಾರಿಗೆ ಪಿಎಚ್ ಡಿ ಪಡೆದವರು. ಆದರೆ ಅವರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡಿತ್ತು ಅನ್ನುವುದಕ್ಕೆ ಬಹಳಷ್ಟು ಉದಾಹರಣೆ ಸಿಗುತ್ತದೆ.
ಅಂಬೇಡ್ಕರ್ ತನಗೆ ಯೋಜನಾ ವಿಭಾಗದಲ್ಲಿ ಅವಕಾಶ ಕೊಡಿ ಎಂದು ಕೇಳಿಕೊಂಡರೂ ನೆಹರು ಕೊಡಲಿಲ್ಲ. ಹಣಕಾಸು, ಫಾರಿನ್ ಕಮಿಟಿ ಯಾವುದರಲ್ಲೂ ಅವಕಾಶ ಸಿಗದ ಹಾಗೆ ನೋಡಿಕೊಂಡರು. ನೆಹರು ಒಮ್ಮೆ ವಿದೇಶಕ್ಕೆ ತೆರಳಿದ್ದಾಗ ಅಂಬೇಡ್ಕರ್ ಅವರನ್ನು ಒಂದು ಕಮಿಟಿಗೆ ಸೇರಿಸಿದ್ರೂ ಅವರು ಮತ್ತೆ ವಾಪಸ್ ಬರುತ್ತಲೇ ಆ ಹುದ್ದೆಯಿಂದ ತೆಗೆಯುತ್ತಾರೆ. ಇದರಿಂದ ಅಂಬೇಡ್ಕರ್ ತೀವ್ರ ನೊಂದುಕೊಳ್ತಾರೆ.
ಅಂಬೇಡ್ಕರ್ ದೇಶದಲ್ಲಿ ಎಲ್ಲರಿಗೂ ಸಮಾನ ರೀತಿಯ ಮತದಾನದ ಹಕ್ಕು ನೀಡಬೇಕೆಂದು ಹೇಳಿದ್ದರು. ಆದರೆ ಕಾಂಗ್ರೆಸ್ ನಾಯಕರು ವಿದ್ಯಾವಂತ ಆಗಿರಬೇಕು ಸೇರಿದಂತೆ ಮತದಾನಕ್ಕೆ ಏನಾದರೂ ಮಾನದಂಡ ಇರಬೇಕೆಂದು ಹೇಳ್ತಾ ಬಂದಿತ್ತು. ಎರಡನೇ ಜಾಗತಿಕ ಯುದ್ಧದಲ್ಲಿ ಸೋತಿದ್ದರಿಂದ ಇಂಗ್ಲೆಂಡ್ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಮುಂದಾಗಿತ್ತು. ಪ್ರಜಾಪ್ರಭುತ್ವ ರೂಪಿಸಲು ಕಾನೂನು ವ್ಯವಸ್ಥೆಗಾಗಿ ಸಂವಿಧಾನ ರಚನಾ ಸಭೆಗೆ ಚುನಾವಣೆ ನಡೆಸಿತ್ತು. ದೇಶಾದ್ಯಂತ ಕಾನೂನು ಪಂಡಿತರು ಸೇರಿ 300 ಕ್ಕೂ ಹೆಚ್ಚು ಮಂದಿ ಸ್ಪರ್ಧಿಸಿದ್ದರು. ಆಗ ಅಂಬೇಡ್ಕರ್ ಕೂಡ ಸಮಿತಿಗೆ ಸೇರಲು ಮುಂಬೈನಲ್ಲಿ ಕಂಟೆಸ್ಟ್ ಮಾಡಿದ್ದರು. ಆದರೆ ಅಂಬೇಡ್ಕರ್ ಸಂವಿಧಾನ ಸಮಿತಿಗೆ ಬರದಂತೆ ತಡೆಯಲು ಕಾಂಗ್ರೆಸ್ ಅವರನ್ನು ಸೋಲಿಸಿತ್ತು.
ಆನಂತರ ಈಗಿನ ಬಾಂಗ್ಲಾ ಭಾಗದಲ್ಲಿದ್ದ ಜೋಗೇಂದ್ರನಾಥ ಮಂಡಲ್, ಅಂಬೇಡ್ಕರ್ ಗೆ ತಮ್ಮ ಪ್ರದೇಶದಿಂದ ಸ್ಪರ್ಧಿಸಲು ಆಹ್ವಾನ ಕೊಟ್ಟರು. ಅಲ್ಲಿ ಹೋಗಿ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಇದರಿಂದ ಕಾಂಗ್ರೆಸಿಗೆ ತಡೆದುಕೊಳ್ಳಲು ಆಗಲಿಲ್ಲ. ಅವರು ಸ್ಪರ್ಧಿಸಿದ್ದ ಜೈಲ್ಸೂರ್ ಜಿಲ್ಲೆಯ ಭಾಗದಲ್ಲಿ 50 ಶೇಕಡಾ ಬಹುಸಂಖ್ಯಾತ ಹಿಂದುಗಳೇ ಇದ್ದರೂ ಆ ಭಾಗವನ್ನು ಪಾಕಿಸ್ತಾನ ಎಂದು ಮಾಡಿ ಇವರ ಆಯ್ಕೆಯನ್ನು ಅಸಿಂಧು ಮಾಡುವ ಷಡ್ಯಂತ್ರ ಮಾಡಿದ್ದರು. ಅಲ್ಲಿಂದಲೂ ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಗೆ ಬರಲು ಆಗಿರಲಿಲ್ಲ. ಆನಂತರ, ಹಿಂದು ಮಹಾಸಭಾದವರು ಪುಣೆಗೆ ಕರೆಸಿ ಅಂಬೇಡ್ಕರನ್ನು ಗೆಲ್ಲಿಸಿ, ಕರಡು ಸಮಿತಿಯ ಅಧ್ಯಕ್ಷರಾಗುವಂತೆ ಮಾಡಿದ್ದರು.
370 ವಿಧಿ ಸೃಷ್ಟಿ ಮಾಡಿದ್ದೇ ನೆಹರು!
ಈಗಿನ ಕಾಶ್ಮೀರ ಸಮಸ್ಯೆಯ ಮೂಲಬೀಜವೇ ನೆಹರು ಕಾಲದ್ದು. ಸ್ವಾತಂತ್ರ್ಯ ಸಿಕ್ಕಾಗ ಗುಜರಾತಿನ ಜುನಾಗಢ, ಹೈದರಾಬಾದ್ ನವಾಬ, ಕಾಶ್ಮೀರ ಭಾರತ ಒಕ್ಕೂಟ ಸೇರಲು ಬಾಕಿ ಇತ್ತು. ಪಟೇಲರು ಗುಜರಾತ್, ಹೈದ್ರಾಬಾದನ್ನು ಸೇನೆ ನುಗ್ಗಿಸಿ ಒಟ್ಟಿಗೆ ಸೇರಿಸಿಕೊಂಡರು. ಆದರೆ ಕಾಶ್ಮೀರವನ್ನು ಜೊತೆಗೆ ಸೇರಿಸಲು ನೆಹರು ಅಲ್ಲಿಗೆ ಆರ್ಟಿಕಲ್ 370 ಎನ್ನುವ ವಿಶೇಷ ಸ್ಥಾನಮಾನ ಕೊಟ್ಟರು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷ ಅಂಬೇಡ್ಕರ್ ಇದಕ್ಕೆ ಒಪ್ಪಿರಲಿಲ್ಲ. ಆನಂತರ, ಅಂಬೇಡ್ಕರ್ ಇಲ್ಲದ ಹೊತ್ತಿನಲ್ಲಿ ಗೋಪಾಲಸ್ವಾಮಿ ಅಯ್ಯಂಗಾರ್ ಮೂಲಕ ನೆಹರು ಚಿತಾವಣೆಯಿಂದ ಈ ವಿಧಿಯನ್ನು ಸಂವಿಧಾನಕ್ಕೆ ಸೇರಿಸುವಂತೆ ಮಾಡಿದ್ದರು. ಆನಂತರ, ಇದಕ್ಕೆ ವಿರೋಧ ಬಂದಾಗ ಇದು ತಾತ್ಕಾಲಿಕ ಏರ್ಪಾಡು ಅಂತ ಹೇಳಿದ್ದರು.
370 ವಿಧಿಯ ಪ್ರಕಾರ ಎಸ್ಸಿ-ಎಸ್ಟಿಯಾಗಲೀ, ಹಿಂದುಳಿದ ವರ್ಗಕ್ಕಾಗಲೀ ಮೀಸಲು ಕೂಡ ಇರಲಿಲ್ಲ. ಸಂಸತ್ತಿನಲ್ಲಿ ಜಾರಿಯಾದ ಮಸೂದೆ ಅಲ್ಲಿನ ವಿಧಾನಸಭೆ ಅಂಕಿತ ಇಲ್ಲದೆ ಆ ರಾಜ್ಯದಲ್ಲಿ ಜಾರಿಯಾಗಲ್ಲ. 1996ರ ವರೆಗೂ ಎಸ್ಸಿ ಮೀಸಲು ಅಲ್ಲಿ ಇರಲಿಲ್ಲ, 2011 ರಲ್ಲಿ ಎಸ್ಟಿ ವಿಭಾಗಕ್ಕೆ ಮೀಸಲು ಬಂದಿತ್ತು. 2016ರಲ್ಲಿ ಓಬಿಸಿ ಮೀಸಲು ಜಾರಿಗೆ ಬಂದಿದ್ದು. ಅಲ್ಲಿ ವರೆಗೂ ಕಾಶ್ಮೀರದಲ್ಲಿ ದಲಿತ, ಹಿಂದುಳಿದ ವರ್ಗಕ್ಕೆ ಮೀಸಲು ಇರಲಿಲ್ಲ. ಕಾಂಗ್ರೆಸಿಗೆ ಓಬಿಸಿ, ದಲಿತರ ಬಗ್ಗೆ ಪ್ರೀತಿ ಇರುತ್ತಿದ್ದರೆ ಹೀಗೆ ಮಾಡುತ್ತಿತ್ತೇ ಎಂದು ವಾದಿರಾಜ್ ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲೂ ಸೋಲಿಸಿದ್ದರು!
ಆನಂತರ, ಅಂಬೇಡ್ಕರ್ ಮುಂಬೈ ಉತ್ತರ ಕ್ಷೇತ್ರದಲ್ಲಿ ಲೋಕಸಭೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಗೆಲ್ಲಲು ಬಿಡಲಿಲ್ಲ. ಅವರ ಕಚೇರಿಯ ಸಿಬಂದಿ ಒಬ್ಬರನ್ನೇ ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದರು. ಕಚೇರಿ ಅಸಿಸ್ಟೆಂಟ್ ನನ್ನು ಕಂಟೆಸ್ಟ್ ಮಾಡಿಸಿ, ಪ್ರಧಾನಿಯಾಗಿದ್ದ ನೆಹರು ಒಂದೇ ಕ್ಷೇತ್ರದಲ್ಲಿ ಎರಡೆರಡು ಬಾರಿ ಪ್ರಚಾರಕ್ಕೆ ಬಂದಿದ್ದರು. ಯಾಕಂದ್ರೆ, ಅಂಬೇಡ್ಕರ್ ಅವರಂಥ ವ್ಯಕ್ತಿ ಪಾರ್ಲಿಮೆಂಟ್ ಹೊಸ್ತಿಲು ತುಳಿಯಲೇಬಾರದು ಅಂತ ಇತ್ತು. ಫಲಿತಾಂಶ ನೋಡಿದರೆ 70 ಸಾವಿರ ಮತಗಳು ಅಸಿಂಧು ಆಗಿದ್ದವು. 14 ಸಾವಿರ ಓಟಲ್ಲಿ ಅಂಬೇಡ್ಕರ್ ಸೋತಿದ್ದರು. ಅಂಬೇಡ್ಕರ್ ಅವರಿಗೆ ಅನುಮಾನ ನೆಹರು ಮೇಲೆ ಅನುಮಾನ ಇತ್ತು. ಸರ್ಕಾರ ಯಂತ್ರ ದುರುಪಯೋಗ ಮಾಡಿ ಅಸಿಂಧು ಮಾಡಿಸಿದ್ದಾರೆ ಎಂದು ಬಹಿರಂಗವಾಗೇ ಹೇಳಿದ್ದರು. ಅಂಬೇಡ್ಕರ್ ಅವರನ್ನು ಚುನಾವಣೆಯ್ಲಲಿ ಸೋಲಿಸಿದ ಕಾರಣಕ್ಕೆ 1970ರಲ್ಲಿ ಪ್ರತಿಸ್ಪರ್ಧಿಯಾಗಿದ್ದ ನಾರಾಯಣ ಸಡೋಬಾ ಕಾಜೋಳ್ಕರ್ ಅವರಿಗೆ ಕಾಂಗ್ರೆಸ್ ಪದ್ಮಭೂಷಣ ಕೊಟ್ಟಿತ್ತು.
ಆನಂತರ, ನೆಹರು ತನಗೆ ತಾನೇ ಭಾರತ ರತ್ನ ಕೊಟ್ಟುಕೊಂಡಿದ್ದರು. ಇಂದಿರಾ ಅವರಿಗೂ ಕೊಡಲಾಗಿತ್ತು. ಸಂವಿಧಾನ ರಚಿಸಿದ್ದ ಅಂಬೇಡ್ಕರ್ ಅವರಿಗೆ ಮಾತ್ರ ಭಾರತ ರತ್ನ ಕೊಡಲಿಲ್ಲ. ಆನಂತರ, ವಿಪಿ ಸಿಂಗ್ ಬಿಜೆಪಿ ಬೆಂಬಲದಲ್ಲಿ ಸರ್ಕಾರ ರಚಿಸಿದಾಗಲೇ ಬಾಬಾರಿಗೆ ಭಾರತ ರತ್ನ ಕೊಡಲಾಯಿತು. ಆನಂತರ ಅವರ ಫೋಟೊವನ್ನೂ ಸಂಸತ್ತಿನಲ್ಲಿ ಹಾಕಲಾಗಿತ್ತು. ಹಾಗಾಗಿ ತನ್ನ ಕೊನೆಗಾಲದಲ್ಲಿ ಸಾರ್ವಜನಿಕ ಭಾಷಣ ಮಾಡುತ್ತಿದ್ದಾಗಲೇ ಅಂಬೇಡ್ಕರ್ ಅವರು, ಕಾಂಗ್ರೆಸ್ ಒಂದು ಸುಡುವ ಮನೆ. ನನ್ನಂತಹ ವ್ಯಕ್ತಿಯನ್ನೇ ಬಳಸಿಕೊಂಡು ಎಸೆಯುತ್ತಾರೆ ಅಂದ್ರೆ ನಿಮ್ಮನ್ನು ಬಿಡುತ್ತಾರೆಯೇ ಎಂದು ದಲಿತರನ್ನುದ್ದೇಶಿಸಿ ಹೇಳಿದ್ದರು. ಅದು ಮರುದಿನ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಬಂದಿತ್ತು. ಕಾಂಗ್ರೆಸ್ ಸೇರೋದು ಅಂದ್ರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದೂ ದಲಿತರಿಗೆ ಹೇಳಿದ್ದರು ಎಂದು ತನ್ನ ಉಪನ್ಯಾಸದಲ್ಲಿ ಸ್ಮರಿಸಿದರು ವಾದಿರಾಜ್.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರಾಜ್ಯ ಸಮಿತಿ ಅಧ್ಯಕ್ಷ ಜಗದೀಶ ಹಾರಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಇದ್ದರು.
Dr. B.R. Ambedkar, who served as the Law Minister in Nehru’s cabinet, resigned just ten years after joining the Congress government, disillusioned by the party's functioning. In 1956, when he submitted his resignation, he cited five specific reasons for his decision. Social thinker Vadiraj Samarasya stated that it was only after the Modi government came to power that this long-suppressed letter was finally brought to light.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm