ಬ್ರೇಕಿಂಗ್ ನ್ಯೂಸ್
26-03-25 10:02 pm Mangalore Correspondent ಕರಾವಳಿ
ಮಂಗಳೂರು, ಮಾ.26 : ನಗರದ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ಎನಿಸಿರುವ ʻಅನಿರ್ವೇದʼವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ʻನೆರವಿನ ಶನಿವಾರʼ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.
ಇಫ್ತಿಕಾರ್ ಆಲಿ, ಅಧ್ಯಕ್ಷರು, ಕರ್ನಾಟಕದ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್, ಇವರು ಮಂಗಳವಾರ ಸಂಜೆ ನಗರದಲ್ಲಿ ಅನಿರ್ವೇದದ ವಿಶೇಷ ಅಗತ್ಯತೆಯ ಮಕ್ಕಳ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿಷ್ಠಾನದ ನಿರ್ದೇಶಕಿ ಡಾ.ಕೆ.ಟಿ ಶ್ವೇತಾ ಅವರು ಈ ಕುರಿತು ಮಾಹಿತಿ ನೀಡಿ, ʻನೆರವಿನ ಶನಿವಾರʼ ಉಪಕ್ರಮವು 2025ರ ಮಾರ್ಚ್ 29ರಿಂದ ಪ್ರತಿ ಶನಿವಾರ ಮೋರ್ಗನ್ಸ್ ಗೇಟ್ ನಲ್ಲಿರುವ ಅನಿರ್ವೇದ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ʻನೆರವಿನ ಶನಿವಾರʼ ಉಪಕ್ರಮವು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎ.ಎಸ್.ಡಿ), ಎ.ಡಿ.ಎಚ್.ಡಿ, ಕಲಿಕಾ ನ್ಯೂನತೆಗಳು, ಬೌದ್ಧಿಕ ವೈಕಲ್ಯತೆಗಳು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಇತರ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆಗೆ ಒತ್ತು ನೀಡುವ ಪರಿಸರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು.
ಪೋಷಕರು, ಆರೈಕೆ ಒದಗಿಸುವವರು ಮತ್ತು ಸಮುದಾಯದ ಸದಸ್ಯರು ಈ ಉಪಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಪೋಷಕರ ತರಬೇತಿ ಮತ್ತು ಸಮಾನಸ್ಕಂಧ ನೆರವು ಸಹ ಈ ಮೂಲಕ ಲಭ್ಯವಿದ್ದು, ಸಹಯೋಗದಿಂದ ಕೂಡಿದ ನೆರವು ಜಾಲವನ್ನು ಈ ಮೂಲಕ ರೂಪಿಸಲಾಗುವುದು.
ಮಂಗಳೂರಿನ ವಿಶೇಷ ಅಗತ್ಯತೆಯ ಮಕ್ಕಳ ಸಬಲೀಕರಣಕ್ಕಾಗಿ ನುರಿತ ವೃತ್ತಿಪರರೊಂದಿಗೆ ಕೈಜೋಡಿಸುವುದಕ್ಕಾಗಿ ಸ್ವಯಂಸೇವಕರಾಗಿ ಸೇವೆ ನೀಡಲು ʻನೆರವಿನ ಶನಿವಾರʼ ಉಪಕ್ರಮವು ಸಮುದಾಯದ ಸದಸ್ಯರಿಗೆ ಕರೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ 9482186289 ಕ್ಕೆ ಕರೆ ಮಾಡಿರಿ ಅಥವಾ officialanirvedha@gmail.com ಗೆ ಸಂಪರ್ಕಿಸಬಹುದು.
In a significant move to support children with special needs, the Mental Wellness Resource Center of the city has partnered with the non-governmental organization Anirvedha to launch an innovative program called ‘Neravina Shanivara.’ This initiative aims to provide free and inclusive activities for children with special requirements, promoting their physical, emotional, and social well-being.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm