ಬ್ರೇಕಿಂಗ್ ನ್ಯೂಸ್
15-02-25 09:38 pm Mangalore Correspondent ಕರಾವಳಿ
ಮಂಗಳೂರು, ಫೆ.15: ಶಿಷ್ಟಾಚಾರ ಪಾಲನೆ ಮಾಡಬೇಕಾದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು. ನಾವು ಮಾಡಿರೋದಲ್ಲ. ಮಹಾನಗರ ಪಾಲಿಕೆಯಿಂದ ಅಧಿಕೃತ ಕಾರ್ಯಕ್ರಮ ಆಯೋಜಿಸಿ ಉಸ್ತುವಾರಿ ಸಚಿವರಿಂದ ಹಿಡಿದು ಐವಾನ್ ಡಿಸೋಜ ಸೇರಿ ಎಲ್ಲರ ಹೆಸರು ಸೇರಿಸಿ ಆಮಂತ್ರಣ ಪತ್ರಿಕೆ ಮಾಡಲಾಗಿತ್ತು. ಉಸ್ತುವಾರಿ ಸಚಿವರಿಗೆ ಆಹ್ವಾನ ತಲುಪಿಲ್ಲ ಎಂದು ಆರೋಗ್ಯ ಕೇಂದ್ರವನ್ನು ಬಂದ್ ಮಾಡಿ ಮತ್ತೆ ಉದ್ಘಾಟನೆ ಮಾಡಿರುವುದು ಉಸ್ತುವಾರಿ ಸಾಧನೆಯಾ.. ಇದು ಪರಿಶಿಷ್ಟ ಜಾತಿಯ ಮಂಗಳೂರಿನ ಮೇಯರ್ ಗೆ ಮಾಡಿದ ಅವಮಾನ. ಪರಿಶಿಷ್ಟ ವ್ಯಕ್ತಿ ಉದ್ಘಾಟನೆ ಮಾಡಿದ್ದಾರೆಂದು ಇವರು ಮರು ಉದ್ಘಾಟನೆ ಮಾಡಿದ್ದಾರೆಯೇ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ.
ನಗರದ ಜಪ್ಪಿನಮೊಗರಿನಲ್ಲಿ ಆರೋಗ್ಯ ಕೇಂದ್ರವನ್ನು ಬಿಜೆಪಿ- ಕಾಂಗ್ರೆಸ್ ರಾಜಕೀಯ ಮೇಲಾಟದಿಂದಾಗಿ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎರಡನೇ ಬಾರಿ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ, ಶಾಸಕ ವೇದವ್ಯಾಸ ಕಾಮತ್ ಡರ್ಟಿ ಪಾಲಿಟಿಕ್ಸ್ ಮಾಡಿದ್ದಾರೆಂದು ಹೀಗಳೆದಿದ್ದರು. ಈ ಬಗ್ಗೆ ತಿರುಗೇಟು ನೀಡಿರುವ ಶಾಸಕ ಕಾಮತ್, ಕಾರ್ಯಕ್ರಮ ಆಯೋಜಿಸುವ ಬಗ್ಗೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಮೇಯರ್ ತಿಳಿಸಿದ್ದಾರೆ. ಶಿಷ್ಟಾಚಾರ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಲಾಗಿತ್ತು. ಇವರದೇ ಸರಕಾರದ ಅಧಿಕಾರಿಗಳು ಇವರಿಗೆ ತಿಳಿಸಿಲ್ಲ ಎಂದರೆ ಅದು ನಮ್ಮ ತಪ್ಪಾ ಎಂದು ಪ್ರಶ್ನಿಸಿದರು.
ಉಸ್ತುವಾರಿ ಸಚಿವರು ಎರಡು ತಿಂಗಳಿಗೊಮ್ಮೆ ವಿಮಾನದಲ್ಲಿ ಮಂಗಳೂರಿಗೆ ಬಂದು ಹೋಗುತ್ತಾರೆ. ನಿನ್ನೆ ರಾತ್ರಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ನನ್ನ ಕಚೇರಿಗೆ ಅಟೆಂಡರ್ ಮೂಲಕ ಆಮಂತ್ರಣ ತಲುಪಿಸಿದ್ದಾರೆ. ಇವರ ಹಾಗೆ ನಾವು ತರಾತುರಿಯಲ್ಲಿ ಕಾರ್ಯಕ್ರಮ ಮಾಡಿರಲಿಲ್ಲ. ಆಮಂತ್ರಣ ಪತ್ರಿಕೆಯನ್ನೂ ನಾವು ಪ್ರಿಂಟ್ ಮಾಡಿಸಿಲ್ಲ. ಇವರದೇ ಸರಕಾರದ ಅಧಿಕಾರಿ ವರ್ಗ ಮಾಡಿರುವುದು. ಅದಕ್ಕೆ ರಾಜಕೀಯ ಯಾಕೆ ಮಾಡಬೇಕು.
ಇದೇನಿದ್ದರೂ ಮೂರು ದಿನಗಳ ಹಿಂದೆ ಬಡ ರೋಗಿಗಳನ್ನು ಹೊರಕ್ಕಟ್ಟಿ ಆರಂಭಗೊಂಡಿದ್ದ ಆರೋಗ್ಯ ಕೇಂದ್ರವನ್ನು ಅರ್ಧದಲ್ಲಿ ಬಂದ್ ಮಾಡಿಸಿದ್ದು ಯಾಕೆ..? ಆರೋಗ್ಯ ಕೇಂದ್ರವನ್ನು ಆರಂಭಿಸಬೇಕಿರುವ ಸಚಿವರು, ಅದನ್ನು ಬಂದ್ ಮಾಡುತ್ತಾರೆ ಎಂದಾದರೆ ಮಂಗಳೂರಿನ ಜನ ಇವರಿಂದ ಏನನ್ನು ನಿರೀಕ್ಷೆ ಮಾಡಬಹುದು. ಒಮ್ಮೆ ಉದ್ಘಾಟನೆ ಮಾಡಿದ್ದಕ್ಕೆ ಬೀಗ ಹಾಕುವುದು ಸರಿಯಲ್ಲ ಎಂದು ಕಾಂಗ್ರೆಸಿಗರೇ ಹೇಳುತ್ತಿದ್ದಾರೆ. ಮೊನ್ನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಕಾಂಗ್ರೆಸಿರು, ನಾಮನಿರ್ದೇಶಿತ ಕಾರ್ಪೊರೇಟರುಗಳು ಬಂಧಿದ್ದಾರೆ. ಅವರೆಲ್ಲ ನಾವು ಹೇಳಿ ಬಂದಿದ್ದಾ ಎಂದು ಪ್ರಶ್ನಿಸಿದರು.
ದಿನೇಶ್ ಗುಂಡೂರಾವ್ ಉಸ್ತುವಾರಿಯಾದ ಮೇಲೆ ಈ ಜಿಲ್ಲೆಯಲ್ಲಿ ಒಂದು ರೂಪಾಯಿ ಅನುದಾನ ತಂದು ತೆಂಗಿನ ಕಾಯಿ ಒಡೆದಿದ್ದರೆ ಹೇಳಲಿ ನೋಡೋಣ. ಇವತ್ತು ಸರಕಾರಿ ಕಾರ್ಯಕ್ರಮದ ಉದ್ಘಾಟನೆಗೆ ಕಾಂಗ್ರೆಸ್ ಬ್ಯಾನರ್ ಹಾಕಿಸಿದ್ದಾರೆ. ನಾಚಿಕೆಯಾಗಬೇಕು ಇವರಿಗೆ. ಆರೋಗ್ಯ ಕೇಂದ್ರಕ್ಕೆ ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಲ್ಲ. ನಮ್ಮ ಸರಕಾರ ಇದ್ದಾಗ ಕೊಟ್ಟಿದ್ದ ಅನುದಾನ. ಹಿಂದಿನ ಸರಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡುವುದಕ್ಕೆ ಕಾಂಗ್ರೆಸ್ ಬಾವುಟ ಹಾರಿಸಿದ್ದೇ ಇವರ ಸಾಧನೆಯಾ ಎಂದು ಶಾಸಕ ಕಾಮತ್ ಹೆಡ್ ಲೈನ್ ಕರ್ನಾಟಕ ಜೊತೆಗೆ ಮಾತನಾಡುತ್ತ ಪ್ರಶ್ನೆ ಮಾಡಿದ್ದಾರೆ.
Mangalore MLA Vedavyas Kamath slams Dinesh Gundu Rao over second inauguration of health centre at jeppu. Mangaluru City South MLA Kamath said it was on the invitation of Mayor that he and the MP took part in the programme. The facilities have come up in the land of MCC and it has come up using ₹7.85 crore of Mangaluru Smart City Limited funds, for which Central government has major share.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am