ಬ್ರೇಕಿಂಗ್ ನ್ಯೂಸ್
06-01-25 03:59 pm Mangalore Correspondent ಕರಾವಳಿ
ಮಂಗಳೂರು, ಡಿ.6: ಇತ್ತೀಚೆಗೆ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಬಳಿಕ ನಕ್ಸಲರ ಶರಣಾಗತಿ ಬಗ್ಗೆ ಚರ್ಚೆ ಜೋರಾಗಿತ್ತು. ವಿಕ್ರಂ ಗೌಡನ ಸಹವಾಸ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ಆಸೆಯಿಟ್ಟುಕೊಂಡಿದ್ದ ಮುಂಡಗಾರು ಲತಾ ಮತ್ತು ಆಕೆಯ ಜೊತೆಗಿದ್ದವರ ನಿರೀಕ್ಷೆ ಕಡೆಗೂ ಈಡೇರುವ ಹಂತಕ್ಕೆ ಬಂದಿದೆ. ಆರು ಮಂದಿ ನಕ್ಸಲರ ಶರಣಾಗತಿಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಇನ್ನೆರಡು ದಿನದಲ್ಲಿ ಗನ್ ಕೆಳಗಿಟ್ಟು ಪೊಲೀಸರ ಮುಂದೆ ಶರಣಾಗಲಿದ್ದಾರೆ.
ಸುದೀರ್ಘ 15-20 ವರ್ಷಗಳಿಂದ ಕಾಡಿನಲ್ಲೇ ಅವಿತುಕೊಂಡು ಪೊಲೀಸರು ಮತ್ತು ಸರಕಾರಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದ ನಕ್ಸಲರು ಮತ್ತು ಅವರ ಬೆಂಬಲಿಗರಿಗೆ ಈಗ ಬೆಂಬಲ ಸಿಗುತ್ತಿಲ್ಲ. ಒಂದು ವರ್ಷದಿಂದೀಚೆಗೆ ಕೇರಳದಲ್ಲಿ ನಕ್ಸಲ್ ಕಾರ್ಯಾಚರಣೆ ಬಿಗುಗೊಂಡಿದ್ದರಿಂದ ಆ ಕಡೆಯಲ್ಲಿದ್ದ ನಕ್ಸಲರು ಮರಳಿ ಕರ್ನಾಟಕದ ಕಾಡು ಸೇರಿದ್ದರು. ಹೀಗಾಗಿ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಕೊಲ್ಲೂರು, ಕಬ್ಬಿನಾಲೆ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಸಾರ್ವಜನಿಕರ ಮುಂದೆ ಕಾಣಸಿಕ್ಕಿದ್ದೂ ಆಗಿತ್ತು. ಆದರೆ ಎಎನ್ಎಫ್ ಕಾರ್ಯಾಚರಣೆ ನಡೆಸಿದರೂ, ಅವರ ಕೈಗೆ ಸಿಕ್ಕಿರಲಿಲ್ಲ. ಈ ನಡುವೆ, ನಕ್ಸಲ್ ಶರಣಾಗತಿ ತಂಡದ ಸದಸ್ಯರು ಸರ್ಕಾರದ ಜೊತೆ ಮಾತುಕತೆ ನಡೆಸಿ ನಕ್ಸಲ್ ವಾದಿಗಳ ಜೀವನಕ್ಕೆ ಹಾದಿ ಮಾಡಿಕೊಟ್ಟಿದ್ದಾರೆ.
ಇದೀಗ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಆರೋಲಿ, ಕೆ. ವಸಂತ, ಟಿ.ಎನ್ ಜೀಶ್ ಎಂಬವರನ್ನು ಒಳಗೊಂಡ ಆರು ಮಂದಿ ನಕ್ಸಲರು ಕರ್ನಾಟಕ ಸರ್ಕಾರದ ಮುಂದೆ ಶರಣಾಗಲು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳ ಜೊತೆಗೆ ನಕ್ಸಲ್ ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ವೇದಿಕೆ ಸದಸ್ಯರು ಸರಣಿ ಸಭೆಗಳನ್ನು ನಡೆಸಿದ್ದಕ್ಕೆ ಈಗ ಫಲ ಸಿಕ್ಕಿದ್ದು, ಸರ್ಕಾರದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಮುಖ್ಯವಾಹಿನಿಗೆ ಬಂದ ಬಳಿಕ ಜೈಲಿನಲ್ಲಿ ಕೊಳೆಯುವ ಸ್ಥಿತಿ ಇರಬಾರದು ಎಂಬ ಬೇಡಿಕೆಯನ್ನು ಮನ್ನಿಸಿರುವ ಸಿಎಂ ಸಿದ್ದರಾಮಯ್ಯ, ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಕೊಡಿಸುವ ಮತ್ತು ನಕ್ಸಲರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ವಿಶೇಷ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಲು ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಶರಣಾಗುವ ನಕ್ಸಲರ ಎಲ್ಲ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಬೇಕೆಂಬ ಅರ್ಜಿ ಹಾಕಿದಲ್ಲಿ ಕೋರ್ಟ್ ಆದೇಶಕ್ಕೆ ಬದ್ಧರಾಗಿ ಪ್ರಕ್ರಿಯೆಗೆ ಸಹಕರಿಸಲಾಗುವುದು. ಪ್ರವರ್ಗ –ಎಗೆ ಸೇರಿದವರಿಗೆ ಶರಣಾಗತಿ ಪ್ಯಾಕೇಜ್ ಪ್ರಕಾರ 7.50 ಲಕ್ಷ ರೂ., ಪ್ರವರ್ಗ ಬಿಗೆ 4 ಲಕ್ಷ ರೂ. ವಿಶೇಷ ಆರ್ಥಿಕ ನೆರವು ನೀಡುವ ಜೊತೆಗೆ ಕೌಶಲ ತರಬೇತಿಯನ್ನು ಕೊಡಿಸುವ ಆಶ್ವಾಸನೆ ನೀಡಿರುವ ಬಗ್ಗೆಯೂ ತಿಳಿದುಬಂದಿದೆ.
ಚಿಕ್ಕಮಗಳೂರಿನಲ್ಲೇ ಶರಣಾಗತಿ
2014ರಿಂದ 2018ರ ನಡುವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಹಾಲಗಂಜಿ ವೆಂಕಟೇಶ್, ಮಲ್ಲಿಕಾ, ಕೋಮಲಾ, ಹೊರ್ಲೆ ಜಯಾ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಕನ್ಯಾಕುಮಾರಿ, ನೀಲಗುಳಿ ಪದ್ಮನಾಭ, ಭಾರತಿ, ರಿಜ್ವಾನಾ ಬೇಗಂ, ಶಿವು, ಚೆನ್ನಮ್ಮ, ಪರಶುರಾಮ್ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು. ಈಗ ಚಿಕ್ಕಮಗಳೂರಿನಲ್ಲೇ ಒಂದೆರಡು ದಿನದಲ್ಲಿ ಮತ್ತೆ ಆರು ಮಂದಿ ನಕ್ಸಲರು ಶರಣಾಗಲಿದ್ದಾರೆ ಎನ್ನಲಾಗುತ್ತಿದೆ.
As many as six suspected Maoists are said to have expressed a wish to return to the mainstream, following efforts of a State committee to oversee the implementation of the rehabilitation policy to assimilate/surrender Left-wing extremists.Mundagaru Latha, Sundari Kutlur, Vanajakshi Balehole, Mareppa Aroli, Vasanth T.N., and Jeesha are said to have consulted members of the State committee in this regard, sources said. All of them are expected to appear before the Chikkamagaluru district administration in a couple of days and make a statement of their wish to join the mainstream. Of them, four are from Karnataka and one each from Kerala and Tamil Nadu.
04-05-25 01:18 pm
Bangalore Correspondent
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm