ವೆನ್ಝ್ ಅಬ್ದುಲ್ಲಾ ಕೊಲೆಯತ್ನ ಪ್ರಕರಣಕ್ಕೆ ತಿಂಗಳು ; ಆರೋಪಿಗಳ ಬಂಧಿಸದ ಪೊಲೀಸರ ವಿರುದ್ಧ ಪ್ರತಿಭಟನೆ

11-12-20 05:42 pm       Mangalore Correspondent   ಕರಾವಳಿ

ವೆನ್ಝ್ ಅಬ್ದುಲ್ಲಾ ಅಝೀಝ್ ಕೊಲೆಯತ್ನ ಪ್ರಕರಣ ಆರೋಪಿಗಳ ಬಂಧನ ಆಗದಿರುವುದನ್ನು ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ಮಂಗಳೂರು, ಡಿ.11 : ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳ ನಾಯಕ ವೆನ್ಝ್ ಅಬ್ದುಲ್ಲಾ ಅಝೀಝ್ ಕೊಲೆಯತ್ನ ಪ್ರಕರಣ ನಡೆದು ತಿಂಗಳಾಗುತ್ತಾ ಬಂದರೂ, ಆರೋಪಿಗಳ ಬಂಧನ ಆಗದಿರುವುದನ್ನು ಖಂಡಿಸಿ ಕೈಕಂಬದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಎಸ್‌ವೈಎಸ್ ರಾಜ್ಯ ನಾಯಕ ಅಶ್ರಫ್ ಕಿನಾರ, ವೆನ್ಝ್ ಅಬ್ದುಲ್ ಅಝೀಝ್ ಅವರ ಮೇಲೆ ನ.15ರಂದು ರಾತ್ರಿ ಕೊಲೆಗೆ ಯತ್ನಿಸಲಾಗಿತ್ತು. ಬಳಿಕ ಅವರು ಚಿಕಿತ್ಸೆಗೆ ದಾಖಲಾಗಿದ್ದ ಮಂಗಳೂರಿನ ಆಸ್ಪತ್ರೆ ಬಳಿ ಅಳಿಯ ನೌಶಾದ್‌ ಮೇಲೂ ಹಲ್ಲೆ ನಡೆದಿದೆ. ಶಂಕಿತರ ಬಗ್ಗೆ ಮಾಹಿತಿ ನೀಡಿದ್ದರೂ ಪೊಲೀಸರು ಯಾವುದೋ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಬಂಧಿಸದೆ ಮೀನಮೇಷ ಮಾಡುತ್ತಿದ್ದಾರೆ. ಇದು ಖಂಡನೀಯ. ಪೊಲೀಸರು ಗಂಭೀರ ಪರಿಗಣಿಸಿ, ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ವೈಎಸ್ ರಾಜ್ಯ ನಾಯಕರಾದ ಜಿಎಂ ಕಾಮಿಲ್ ಸಖಾಫಿ, ಯಾಕೂಬ್ ಸಅದಿ ನಾವೂರು, ಮುನೀರ್ ಸಖಾಫಿ, ಅಲಿ ತುರ್ಕಳಿಕೆ, ಇಬ್ರಾಹಿಂ ಸಖಾಫಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನೂರಾರು ಮಂದಿ ಪ್ರತಿಭಟನೆಯಲ್ಲಿ ಸೇರಿದ್ದರು.

As the police have failed in arresting even a single person in Murderous attack on Businessman Venza Abdul Azeez the SYS staged protest near the clock tower in Mangalore demanding for quick arrest of the culprits.