ಬ್ರೇಕಿಂಗ್ ನ್ಯೂಸ್
30-09-24 03:45 pm Mangalore Correspondent ಕರಾವಳಿ
ಮಂಗಳೂರು, ಸೆ.30: ತಿರುಪತಿ ಸೇರಿದಂತೆ ದೇಶದಲ್ಲಿರುವ ಎಲ್ಲ ಹಿಂದು ದೇವಸ್ಥಾನಗಳನ್ನ ಹಿಂದೂಗಳಿಗೇ ಬಿಟ್ಟುಕೊಡಬೇಕು ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಗ್ರಹಿಸಿದ್ದಾರೆ.
ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಪತ್ತೆಯಾದ ಘಟನೆ ಖಂಡಿಸಿ, ಒಟ್ಟು ಘಟನೆಯ ಬಗ್ಗೆ ಸಿಬಿಐ ತನಿಖೆ ಮಾಡಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಗರದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಧರ್ಮಾಗ್ರಹ ಸಭೆಯ ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಸಾವಿರಾರು ವರ್ಷಗಳ ಹಿಂದೆ ದೇವಸ್ಥಾನಗಳ ನಿರ್ವಹಣೆಯನ್ನು ಹಿಂದುಗಳೇ ಮಾಡುತ್ತ ಬಂದಿದ್ದರು. ಬ್ರಿಟಿಷ್ ಸರಕಾರ ದೇವಾಲಯದ ಸಂಪತ್ತನ್ನ ಕೊಳ್ಳೆ ಹೊಡೆಯುವ ಉದ್ದೇಶದಿಂದ ಸರಕಾರದ ಅಧೀನಕ್ಕೆ ತಂದಿತ್ತು. ಆದರೆ ಮುಸಲ್ಮಾನರಿಗೆ ಮಸೀದಿ ನಡೆಸಲು ಹಾಗೂ ಕ್ರೈಸ್ತರಿಗೆ ಚರ್ಚ್ ನಡೆಸಲು ಅವಕಾಶ ನೀಡಿದ್ದಾರೆ. ಅದು ಒಳ್ಳೆಯದೇ, ಅದೇ ರೀತಿಯಲ್ಲಿ ನಮಗೂ ಅವಕಾಶ ನೀಡಬೇಕು. ಹಿಂದೂಗಳ ದೇವಸ್ಥಾನವನ್ನ ಸರಕಾರ ಯಾಕೆ ಅಧೀನಕ್ಕೆ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ ಕಲ್ಲಡ್ಕ ಭಟ್, ದೇವಸ್ಥಾನದ ಭೂಮಿಗಳನ್ನ ಕಬಳಿಸಿದ್ದೀರಾ.. ಭಕ್ತರು ಹಾಕಿದ ಕಾಣಿಕೆಯನ್ನ ನೀವು ತೆಗೆದುಕೊಂಡು ಹೋಗಿದ್ದೀರಿ. ಅದನ್ನು ಹಿಂದು ಸಮಾಜಕ್ಕೆ ಬಳಸುವುದಿಲ್ಲ. ಆ ದುಡ್ಡನ್ನು ಅಹಿಂದುಗಳಿಗೆ ಬಳಸುತ್ತಿದ್ದೀರಿ. ಈಗ ನಮ್ಮ ದೇವಸ್ಥಾನದ ಪ್ರಸಾದಕ್ಕೂ ಕೈ ಹಾಕಿದ್ದೀರಿ. ಇದಕ್ಕಿಂತ ದೊಡ್ಡ ಅನ್ಯಾಯ ಅಪಮಾನ ಬೇರೇನಿದೆ? ಎಂದರು.
ಹಾಗಾಗಿ ತಿರುಪತಿ ದೇವಸ್ಥಾನವನ್ನ ನಮಗೆ ಬಿಟ್ಟುಕೊಡಬೇಕು. ಪ್ರಸ್ತುತ ಕರ್ನಾಟಕ ಸರಕಾರ ದೇವಾಲಯದ ಆಡಳಿತ ಮಂಡಳಿಯಲ್ಲಿ ಮುಸಲ್ಮಾನರನ್ನ ಸೇರಿಸುವ ಪ್ರಯತ್ನ ನಡೆಸುತ್ತಿದೆ. ಅದು ಸರಕಾರದ ಹುಚ್ಚು ನಿರ್ಧಾರ. ಹಾಗಾದರೆ ಮಸೀದಿಯ ಆಡಳಿತ ಮಂಡಳಿಯಲ್ಲಿ ಹಿಂದುಗಳನ್ನ ಸೇರಿಸುತ್ತಿರಾ? ಕ್ರೈಸ್ತರ ಆಡಳಿತ ಮಂಡಳಿಯಲ್ಲಿ ಹಿಂದುಗಳನ್ನ ಸೇರಿಸುತ್ತೀರ?ಯಾರಿಗೆ ದೇವರ ಮೇಲೆ ಭಕ್ತಿ ಇಲ್ಲವೋ ಅಂತವರನ್ನು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸೇರಿಸೋದು ದೇವಸ್ಥಾನಕ್ಕೆ ನಷ್ಟ. ಹಾಗಾಗಿ ಹಿಂದೂ ದೇವಾಲಯವನ್ನ ಹಿಂದೂಗಳಿಗೆ ಬಿಟ್ಟು ಕೊಡಲು ಅಗ್ರಹಪೂರ್ವಕವಾಗಿ ಒತ್ತಾಯಿಸುತ್ತಿದ್ದೇವೆ. ಸರಕಾರ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ದೇವಸ್ಥಾನದ ಹುಂಡಿಗೆ ಹಾಕಿದ ದುಡ್ಡನ್ನ ಸರಕಾರ ಅಹಿಂದೂಗಳಿಗಾಗಿ ಉಪಯೋಗಿಸುತ್ತಿದೆ. ಹಿಂದೂಗಳು ಒಗ್ಗಟ್ಟಾಗಿದ್ದಾರೆ ಎಂದು ತೋರಿಸಬೇಕಾದರೆ ಹೋರಾಟಗಳು ನಡೆಯಬೇಕು. ಯಾವ ರೀತಿಯಲ್ಲೂ ಹೋರಾಟ ಮಾಡಬಹುದು, ಆದರೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಹಿಂದೂಗಳ ದೇವಸ್ಥಾನ, ಹಿಂದುಗಳ ಹಕ್ಕುಗಳ ರಕ್ಷಣೆಗೆ ಪ್ರತ್ಯೇಕ ಸನಾತನ ಹಿಂದೂ ರಕ್ಷಣಾ ಬೋರ್ಡ್ ಅಗತ್ಯವಿದೆ. ಹಿಂದೂ ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಪ್ರತ್ಯೇಕ ಬೋರ್ಡ್ ರಚನೆಯಾಗಬೇಕು. ಅದು ಭಕ್ತರಿಂದಲೇ ಆಗಬೇಕು, ಯಾವುದೇ ರಾಜಕಾರಣಿಗಳು ಬೇಡ. ಚಂದ್ರಬಾಬು ನಾಯ್ದು, ಸಿದ್ದರಾಮಯ್ಯ, ಜಗನ್ ಯಾರೂ ಬೇಡ. ಹಿಂದು ಭಕ್ತರಿಂದಲೇ ಆಡಳಿತ ಮಂಡಳಿ ರಚಿತವಾಗಬೇಕು ಎಂದರು.
ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಇಂತಹ ಹುಚ್ಚರು ಮೊದಲಿನಿಂದಲೂ ಇದ್ದಾರೆ. ಆಗಲೂ ಇದ್ದರು ಈಗಲೂ ಇದ್ದಾರೆ. ಅದೊಂದು ರಾಕ್ಷಸಿ ವಂಶ, ಅದಕ್ಕೋಸ್ಕರ ರಾಕ್ಷಸರನ್ನ ಆರಾಧನೆ ಮಾಡುತ್ತಾರೆ. ಯಾರು ಮನುಷ್ಯರಾಗಿದ್ದರೋ ಅವರು ರಾಕ್ಷಸರನ್ನ ಪೂಜಿಸೋದಿಲ್ಲ. ರಾಕ್ಷಸರು ರಾಕ್ಷಸರನ್ನೇ ಪೂಜಿಸುತ್ತಾರೆ. ರಾಕ್ಷಸರು ಒಂದು ದಿನ ನಾಶವಾಗುತ್ತಾರೆ.
ಭಗವಾನ್ ಈ ಹಿಂದಿನಿಂದಲೂ ಹುಚ್ಚು ಹುಚ್ಚು ರೀತಿ ಮಾತನಾಡುತ್ತಿದ್ದ. ಅವನು ಎಲ್ಲಿ ಹುಟ್ಟಿದ್ದಾನೆ ಅನ್ನೋದು ಅವನಿಗೆ ಗೊತ್ತಿಲ್ಲ. ಅವನಪ್ಪ ಅಮ್ಮ ಯಾರೂ ಅಂತನೂ ಗೊತ್ತಿಲ್ಲ. ಅದಕ್ಕಾಗಿ ಈ ರೀತಿ ಮಾತನಾಡುತ್ತಾನೆ. ಅವನ ಅಪ್ಪ ಅಮ್ಮ ಅವನಿಗೆ ಒಳ್ಳೆಯದಾಗಲಿ ಅಂತ ಭಗವಾನ್ ಎಂದು ಹೆಸರಿಟ್ಟರು. ಇವ ನೋಡಿದರೆ ರಾಕ್ಷಸಿ ದೃಷ್ಟಿಯಲ್ಲಿ ಯೋಚಿಸುತ್ತಾನೆ. ಹಿಂದೆ ರಾಕ್ಷಸರೂ ಇದ್ದರು ಸಜ್ಜನರು ಇದ್ದರು. ಕೊನೆಗೆ ಗೆಲುವಾಗಿದ್ದು ಸಜ್ಜನರಿಗೆ ಎಂದು ಟಾಂಗ್ ಕೊಟ್ಟರು.
Hindu temple property should be given to hindus including Tirupati says Dr Kalladka Prabhakar Bhat in Mangalore. Or will christian or muslim organisations will give their properties to hindus questioned Bhat.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm