ಬ್ರೇಕಿಂಗ್ ನ್ಯೂಸ್
27-09-24 09:41 pm Mangalore Correspondent ಕರಾವಳಿ
ಮಂಗಳೂರು, ಸೆ.27: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯ ವಿರುದ್ಧ ಮತ್ತೆ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಜನರು ಘರ್ಜನೆ ಮೊಳಗಿಸಿದ್ದಾರೆ. ಬಲ್ಮಠದ ಸಿಎಸ್ಐ ಚರ್ಚ್ ಕಡೆಯಿಂದ ಮಿನಿ ವಿಧಾನಸೌಧ ವರೆಗೆ ಸಾವಿರಾರು ಜನರು ಪ್ಲೇಕಾರ್ಡ್ ಹಿಡಿದು ಮೆರವಣಿಗೆ ನಡೆಸಿದ್ದು, ಬಳಿಕ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಂಗಳೂರಿನಲ್ಲಿ ಮರಳು ದಂಧೆಯಲ್ಲಿ ತೊಡಗಿಕೊಂಡವರಿಗೆ ಧರ್ಮ ಭೇದ ಇಲ್ಲ. ಸರ್ವಧರ್ಮದ, ಸರ್ವಪಕ್ಷಗಳವರು ಇದ್ದಾರೆ. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರಿಗೆ ಅಕ್ರಮ ನಿಲ್ಲಿಸುವ ಧಮ್ ಇಲ್ಲದಾಗಿದೆ. ರಾತ್ರಿ ಅಕ್ರಮ ಮರಳುಗಾರಿಕೆ ನಡೆಸುವವರೇ ಮರುದಿನ ಶಾಸಕ, ಸಂಸದರ ಜೊತೆಗೆ ಬಿಳಿ ಕೋಟಿನಲ್ಲಿ ಮಿಂಚುತ್ತಾರೆ. ಪೊಲೀಸರೇ ಮಾಮೂಲಿ ಪಡೆದು ಮರಳು ದಂಧೆಕೋರರಿಗೆ ಬೆಂಬಲಕ್ಕೆ ನಿಂತಿದ್ದಾರೆ.
ಮರಳುಗಾರಿಕೆ ಬಗ್ಗೆ ದೂರು ಹೇಳಿದ ವ್ಯಕ್ತಿಯ ಬಗ್ಗೆ ಪೊಲೀಸರೇ ದಂಧೆಕೋರರಿಗೆ ಮಾಹಿತಿ ನೀಡುತ್ತಾರೆ. ಯಾರಾದ್ರೂ ದೂರು ಹೇಳಿದರೆ, ಅದು ಗಣಿ ಇಲಾಖೆಗೆ ಬರುತ್ತದೆ, ನಮ್ಮ ವ್ಯಾಪ್ತಿಗೆ ಬರಲ್ಲ ಅಂತಾರೆ. ಆದರೆ ಅಕ್ರಮ ದಂಧೆಕೋರರಿಗೆ ರಾತ್ರಿ ಪೊಲೀಸರೇ ಎಸ್ಕಾರ್ಟ್ ನೀಡುತ್ತಾರೆ. ಇವರಿಗೆ ಜನರ ಬದುಕು, ದ್ವೀಪದ ಬಗ್ಗೆ ಕಾಳಜಿ ಇಲ್ಲ. ಅಲ್ಲಿ ಸಿಗುವ ಮಾಮೂಲಿ ಹಣದ ಮೇಲಷ್ಟೇ ಕಾಳಜಿ. ಶಾಸಕರು, ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ, 24 ಗಂಟೆಯಲ್ಲಿ ಅಕ್ರಮವನ್ನು ನಿಲ್ಲಿಸಬಹುದು. ಇಲ್ಲಿನ ದಂಧೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಬೇಕಾಗಿದೆ ಎಂದು ಹೇಳಿದರು.
ಎರಡು ತಿಂಗಳ ಹಿಂದೆ ಗಣಿ ಇಲಾಖೆಯವರು ಅಧ್ಯಯನ ನೆಪದಲ್ಲಿ ಸ್ಥಳಕ್ಕೆ ಬಂದಿದ್ದರು. ಆದರೆ, ಮರಳು ದಂಧೆಕೋರರ ದೋಣಿಯಲ್ಲೇ ಸ್ಥಳಕ್ಕೆ ಬಂದು ಏನೂ ಆಗಿಯೇ ಇಲ್ಲ ಎಂದು ಉಲ್ಟಾ ವರದಿ ನೀಡಿದ್ದಾರೆ. ಗಣಿ ಇಲಾಖೆ ಅಧಿಕಾರಿಗಳು ಇರೋದೇ ದಂಧೆಕೋರರ ಪರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಮಾಧ್ಯಮ ಮಂದಿ, ಸಮಾನ ಮನಸ್ಕ ಸಂಘಟನೆಗಳು ಅಲ್ಲಿ ಹೋಗಿದ್ದಾಗಲೇ ಗಣಿ ಇಲಾಖೆ ತಂಡ ದಂಧೆಕೋರರ ಜೊತೆಗೆ ಸಾಗಿದ್ದನ್ನು ನೋಡಿದ್ದೇವೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಸಾಮಾಜಿಕ ಕಾರ್ಯಕರ್ತ ರಾಯ್ ಕ್ಯಾಸ್ಟಲಿನೋ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ದ್ವೀಪಗಳನ್ನು ಪ್ರವಾಸಿ ತಾಣಗಳನ್ನಾಗಿ ಬೆಳೆಸಲಾಗಿದೆ. ಇದು ಮಂಗಳೂರಿನಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ, ಮರಳು ದಂಧೆಗೆ ಯಾಕೆ ಬಲಿ ಕೊಡುತ್ತಿದ್ದಾರೆ ಎಂಬುದು ಗಂಭೀರ ಪ್ರಶ್ನೆ. ಅಡ್ಯಾರಿನಲ್ಲಿ ಈಗಾಗಲೇ ಅಣೆಕಟ್ಟು ಕಟ್ಟಿದ್ದು, ಅಲ್ಲಿ ನೀರು ನಿಲ್ಲಿಸಲು ಮುಂದಾದರೆ ಪಾವೂರು ಉಳಿಯ ದ್ವೀಪ ಮುಳುಗಲಿದೆ. ಇದೇ ಉದ್ದೇಶದಲ್ಲಿ ದ್ವೀಪದ ಸುತ್ತ ಅಗೆದು ಮರಳು ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾ ಸಭೆಯಲ್ಲಿ ಕೆಥೋಲಿಕ್ ಕ್ರಿಸ್ತಿಯನ್ ಮಹಿಳೆಯರು, ಪುರುಷರ ಜೊತೆಗೆ ಸಮಾನ ಮನಸ್ಕ ಸಂಘಟನೆಯ ಸದಸ್ಯರು, ಪಾವೂರು ಉಳಿಯ ದ್ವೀಪದ ಜನರು ಭಾಗವಹಿಸಿದ್ದರು.
Like-minded groups, including Catholic Sabha, ICYM, YCS, and Mother Theresa Vichara Vedike, staged a massive protest against illegal sand mining in the district and the administration’s apathy towards the issue on Friday, September 27, in front of Mini Vidhana Soudha in Mangaluru.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm