ಬ್ರೇಕಿಂಗ್ ನ್ಯೂಸ್
24-09-24 10:28 am Mangalore Correspondent ಕರಾವಳಿ
ಮಂಗಳೂರು, ಸೆ.24: ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಗೊಳ್ಳಲು ಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 3 ಕೊನೆಯ ದಿನವಾಗಿದೆ. ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಕರಾವಳಿಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲು ಸೋಮವಾರ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಿಟಿ ರವಿ, ನಿರ್ಮಲ್ ಕುಮಾರ್ ಸುರಾನ, ಅಶ್ವತ್ಥ ನಾರಾಯಣ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದಾರೆ. ವಿಶೇಷ ಅಂದ್ರೆ, ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದು, ಅವರ ಉಪಸ್ಥಿತಿಯಲ್ಲೇ ಕೋರ್ ಕಮಿಟಿ ಮೀಟಿಂಗ್ ಆಗಿದೆ. ರಾಜ್ಯಾಧ್ಯಕ್ಷ ಬದಲಾಗಿದ್ದರೂ ಕೋರ್ ಕಮಿಟಿಗೆ ಹೊಸ ಸದಸ್ಯರ ಆಯ್ಕೆ ಆಗಿಲ್ಲ. ಹಳೆ ಕಮಿಟಿ ಸದಸ್ಯರೇ ಸೇರಿ ಚರ್ಚೆ ನಡೆಸಿದ್ದಾರೆ.
ಕಳೆದ ಮೂರು ಅವಧಿಯಲ್ಲಿ ಈ ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ ಗೆದ್ದಿದ್ದರು. ಈ ಬಾರಿ ಪರಿಷತ್ ಸದಸ್ಯರಾಗಿ ಎರಡು ವರ್ಷ ಕಳೆಯುವಷ್ಟರಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸುವುದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. 2028ರ ವರೆಗೆ ಪರಿಷತ್ ಸದಸ್ವತ್ವ ಅವಧಿಯಿದ್ದು, ಉಳಿದ ನಾಲ್ಕು ವರ್ಷಕ್ಕೆ ಸ್ಥಾನ ತುಂಬಲು ಚುನಾವಣೆ ನಡೆಯುತ್ತಿದೆ. ದ್ವಿಸದಸ್ಯ ಕ್ಷೇತ್ರ ಆಗಿರುವುದರಿಂದ ಒಟ್ಟಿಗೆ ಚುನಾವಣೆ ನಡೆದಲ್ಲಿ ಬಿಜೆಪಿ ಮತ್ತು ಕಾಂಗ್ರೆಸಿನ ಇಬ್ಬರು ಅಭ್ಯರ್ಥಿಗಳು ನಿರಾಯಾಸ ಗೆಲುವು ಸಾಧಿಸುತ್ತಾರೆ. ಮೇಲ್ನೋಟಕ್ಕೆ ಬಿಜೆಪಿ ಬೆಂಬಲಿತ ಸದಸ್ಯರೇ ಮತಕ್ಷೇತ್ರದಲ್ಲಿ ಹೆಚ್ಚಿದ್ದು, ಕಳೆದ ಬಾರಿ ಶ್ರೀನಿವಾಸ ಪೂಜಾರಿ ಎರಡು ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಹೀಗಾಗಿ ಈ ಬಾರಿಯೂ ಬಿಜೆಪಿ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಇದೆ.
ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್, ನಗರ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಗ್ರಾಪಂ ಸದಸ್ಯರು ಮತದಾನಕ್ಕೆ ಅರ್ಹರು. ಆದರೆ, ಜಿಪಂ ಮತ್ತು ಹೆಚ್ಚಿನ ನಪಂ, ನಗರಸಭೆಗಳು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಒಟ್ಟು 6037 ಮಂದಿ ಮತದಾರರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3264 ಗ್ರಾಪಂ ಸದಸ್ಯರು, ಮಹಾನಗರ ಪಾಲಿಕೆ 60 ಸದಸ್ಯರು, ಎರಡು ನಗರಸಭೆಗಳ 62 ಸದಸ್ಯರು, 3 ಪುರಸಭೆಗಳ 73, 5 ಪಪಂ ವ್ಯಾಪ್ತಿಯ 81 ಸದಸ್ಯರು ಹಾಗೂ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು 11 ಸೇರಿ ಒಟ್ಟು 3551 ಸದಸ್ಯರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2361 ಗ್ರಾಪಂ ಸದಸ್ಯರು, ಒಂದು ನಗರಸಭೆಯ 35, ಮೂರು ಪುರಸಭೆಯ 69, ಒಂದು ಪಟ್ಟಣ ಪಂಚಾಯತಿನ 16 ಸದಸ್ಯರು, ಒಂದು ಸಂಸದ, ನಾಲ್ಕು ಶಾಸಕರು ಸೇರಿ 2486 ಸದಸ್ಯರಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಬಿಜೆಪಿ ಸದಸ್ಯರಿದ್ದಾರೆ ಎಂಬ ಅಂದಾಜಿದೆ.
ಬಿಜೆಪಿಯಿಂದ ಈ ಕ್ಷೇತ್ರಕ್ಕೆ ಉಡುಪಿ ಭಾಗದವರೇ ಹಿಂದೆ ಸದಸ್ಯರಾಗಿದ್ದಾರೆ. ಈ ನೆಲೆಯಲ್ಲಿ ಉಡುಪಿಯಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಶ್ಯಾಮಲಾ ಕುಂದರ್ ಹೆಸರು ಮುಂಚೂಣಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾಜಿ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ರೇಸಿನಲ್ಲಿದೆ. ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವರಾಗಿರುವುದರಿಂದ ಅದೇ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂಬ ಒತ್ತಾಯ ಇದೆ. ಆ ರೀತಿಯಾದಲ್ಲಿ ಸತೀಶ್ ಕುಂಪಲ ಲಕ್ ಹೊಡೆಯಲಿದ್ದಾರೆ. ಬಂಟರಿಗೆ ಮತ್ತೆ ಮಣೆ ಹಾಕಿದರೆ, ನಳಿನ್ ಕುಮಾರ್ ಮತ್ತೆ ರಾಜ್ಯ ರಾಜಕಾರಣಕ್ಕೆ ಪ್ರವೇಶ ಪಡೆದಂತಾಗುತ್ತದೆ. ಇವೆರಡು ಜಾತಿಯನ್ನು ಬಿಟ್ಟು ಬಿಜೆಪಿ ಪರವಾಗಿ ಗಟ್ಟಿಯಾಗಿ ನಿಂತಿರುವ ಮೊಗವೀರ ಸಮುದಾಯದ ಪ್ರಮೋದ್ ಮಧ್ವರಾಜ್ ಗೆ ಟಿಕೆಟ್ ಕೊಡಬೇಕೆಂಬ ಒತ್ತಾಯವೂ ಇದೆ. ಪ್ರಮೋದ್ ಮಧ್ವರಾಜ್ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಅದೃಷ್ಟ ಕೈಹಿಡಿದಿರಲಿಲ್ಲ. ಈ ಬಾರಿ ಲಕ್ ಹೊಡೆಯುತ್ತಾ ಎನ್ನುವ ಕುತೂಹಲ ಇದೆ.
ಬಿಜೆಪಿ ಮೂಲಗಳ ಪ್ರಕಾರ, ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಪ್ರಮೋದ್ ಮಧ್ವರಾಜ್, ನಳಿನ್ ಕುಮಾರ್, ಸತೀಶ್ ಕುಂಪಲ ಈ ಮೂವರ ಹೆಸರನ್ನು ಫೈನಲ್ ಮಾಡಿ ಕೇಂದ್ರ ತಂಡಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಹೈಕಮಾಂಡ್ ಈ ಹಿಂದೆ ರಾಜ್ಯದ ವಿಧಾನ ಪರಿಷತ್ತಿಗೆ ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು. ಈ ಬಾರಿಯೂ ಅಂಥಹದ್ದೇ ಅಚ್ಚರಿ ಅಭ್ಯರ್ಥಿ ಹೆಸರು ಘೋಷಣೆಯಾದರೂ ಅಚ್ಚರಿಯಿಲ್ಲ. ಕಾಂಗ್ರೆಸಿನಲ್ಲಿ ಮತ ಕಡಿಮೆಯಿದ್ದರೂ, ಗೆಲ್ಲುವ ಛಾತಿಯಿರುವ ಗಟ್ಟಿಕುಳದ ಅಭ್ಯರ್ಥಿಯ ಹುಡುಕಾಟ ಆಗಿದೆ. ಸದ್ಯಕ್ಕೆ ಕಾಂಗ್ರೆಸಿನ ಬೆಳವಣಿಗೆ ಏನೆಂದು ಗೊತ್ತಾಗಿಲ್ಲ. ಬಿಜೆಪಿ ಅಭ್ಯರ್ಥಿ ನೋಡಿ ದಾಳ ಉರುಳಿಸುವ ಸಾಧ್ಯತೆ ಹೆಚ್ಚಿದೆ.
The core committee of the Karnataka unit of Bharatiya Janata Party (BJP) on Monday held a meeting here at the state party headquarters to discuss the strategy for the upcoming by-elections in three Assembly constituencies.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm