ಬ್ರೇಕಿಂಗ್ ನ್ಯೂಸ್
15-03-24 08:30 pm Mangalore Correspondent ಕರಾವಳಿ
ಪುತ್ತೂರು, ಮಾ.15: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದ ಅರುಣ್ ಪುತ್ತಿಲ ತಣ್ಣಗಾಗಿದ್ದಾರೆ. ಶುಕ್ರವಾರ ಸಂಜೆ ಮಂಗಳೂರಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಅರುಣ್ ಪುತ್ತಿಲ ಮತ್ತು ಬೆಂಬಲಿಗರು ಅಧಿಕೃತವಾಗಿ ಬಿಜೆಪಿ ಸೇರುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿತ್ತು. ಆದರೆ ಅಷ್ಟರಲ್ಲೇ ಪುತ್ತೂರಿನ ಕೆಲವು ಕಾರ್ಯಕರ್ತರು ಸಿಡಿದು ನಿಂತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಈ ಬಗ್ಗೆ ವಿಚಾರ ತಿಳಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪುತ್ತೂರಿಗೆ ತೆರಳಿದ್ದು, ಬಿಜೆಪಿ ಕಚೇರಿಯಲ್ಲೇ ಬಾಗಿಲು ಹಾಕಿ ಕಾರ್ಯಕರ್ತರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ ಕೆಲವು ಕಾರ್ಯಕರ್ತರು ಅರುಣ್ ಪುತ್ತಿಲರನ್ನು ಮರಳಿ ಬಿಜೆಪಿ ಸೇರಿಸಬಾರದು ಎಂದೇ ಪಟ್ಟು ಹಿಡಿದಿದ್ದಾರಂತೆ. ಪಕ್ಷಕ್ಕೆ ಸೇರಿಸಿದರೂ ಪ್ರಮುಖ ಜವಾಬ್ದಾರಿ ನೀಡಬಾರದು ಎಂದು ಒತ್ತಾಯ ಮಾಡಿದ್ದಾರಂತೆ. ಸಂಜೆ 5 ಗಂಟೆಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶುರುವಾದ ಸಭೆ ರಾತ್ರಿ ಗಂಟೆ ಎಂಟಾದರೂ ಮುಗಿದಿಲ್ಲ. ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರಾದ ಕೆಲವು ಕಾರ್ಯಕರ್ತರು ಜಿಲ್ಲಾಧ್ಯಕ್ಷರನ್ನೇ ಕಚೇರಿಯಲ್ಲಿ ಕೂಡಿಹಾಕಿ ಬೆದರಿಸುವ ಕೆಲಸ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಅರುಣ್ ಪುತ್ತಿಲ ಮತ್ತು ಪ್ರಸನ್ನ ಮಾರ್ತ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಆನಂತರ, ರಾಜ್ಯ ಕಾರ್ಯದರ್ಶಿ ಸುನಿಲ್ ಕುಮಾರ್ ಮತ್ತು ಅರುಣ್ ಪುತ್ತಿಲ ಮಾಧ್ಯಮಕ್ಕೂ ಹೇಳಿಕೆಯನ್ನು ನೀಡಿದ್ದರು. ಶುಕ್ರವಾರ ಸಂಜೆ ಅರುಣ್ ಪುತ್ತಿಲ ತನ್ನ 250ಕ್ಕೂ ಹೆಚ್ಚು ಬೆಂಬಲಿಗರ ಜೊತೆ ಮಂಗಳೂರಿನಲ್ಲಿ ಪಕ್ಷ ಸೇರ್ಪಡೆಗೆ ಸಿದ್ದತೆಯನ್ನೂ ನಡೆಸಿದ್ದರು. ಆದರೆ, ಲೋಕಸಭೆ ಟಿಕೆಟ್ ನಳಿನ್ ಕುಮಾರ್ ಕೈತಪ್ಪಿದ ಬೆನ್ನಲ್ಲೇ ಅರುಣ್ ಪುತ್ತಿಲ ಬಿಜೆಪಿ ಸೇರಿದ್ದು ಹೇಗೆ ಎನ್ನುವ ಪ್ರಶ್ನೆ ಮುಂದಿಟ್ಟು ಕೆಲವು ಕಾರ್ಯಕರ್ತರು ತಗಾದೆ ತೆಗೆದಿದ್ದಾರೆ. ಸೌಮ್ಯ ಸ್ವಭಾವದ ಜಿಲ್ಲಾಧ್ಯಕ್ಷರನ್ನೇ ಎದುರಿಗಿಟ್ಟು ಬೆದರಿಸುವ ತಂತ್ರಗಾರಿಕೆ ಮಾಡಿದ್ದಾರೆ. ಸತೀಶ್ ಕುಂಪಲ ಮತ್ತು ಜಿಲ್ಲಾ ಕಾರ್ಯದರ್ಶಿ ಯತೀಶ್ ಆರ್ವಾರ್ ಸೇರಿ ಕಾರ್ಯಕರ್ತರನ್ನು ಸಂತೈಸುವ ಕೆಲಸ ಮಾಡಿದ್ದಾರೆ. ಸಂಜೀವ ಮಠಂದೂರು, ಸಂತೋಷ್ ರೈ ಕೈಕಾರ ಸೇರಿದಂತೆ ಪ್ರಮುಖರು ಜೊತೆಗಿದ್ದರು. ವಿರೋಧ ಮಾಡಿರುವವರಲ್ಲಿ ಪುತ್ತೂರು ಬಿಜೆಪಿಯ ಪದಾಧಿಕಾರಿಗಳು ಇರಲಿಲ್ಲ ಎನ್ನುವ ಮಾತನ್ನು ಅಲ್ಲಿದ್ದವರು ತಿಳಿಸಿದ್ದಾರೆ.
Arun Puthila joins BJP, party leaders oppose decesion, keep district president out of BJP Office at Puttur
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm