ಬ್ರೇಕಿಂಗ್ ನ್ಯೂಸ್
12-03-24 07:16 pm Mangalore Correspondent ಕರಾವಳಿ
ಮಂಗಳೂರು, ಮಾ.12: ಅನಂತ ಕುಮಾರ್ ಹೆಗಡೆ ಒಬ್ಬ ಮಾನಸಿಕ ಅಸ್ವಸ್ಥರಾಗಿದ್ದು ಒಳ್ಳೆಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಾಗಿದೆ. ಆಗ ಬಿಜೆಪಿಯವರಿಗೆ ಚುನಾವಣೆ ವರೆಗಾದರೂ ಶಾಂತಿ ಸಿಗಬಹುದು. ಸಂವಿಧಾನ ತಿದ್ದುಪಡಿಯ ಹೇಳಿಕೆ ನೀಡಿದ್ದಕ್ಕಾಗಿ ಅನಂತ ಕುಮಾರ್ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್ಸಿ ಐವಾನ್ ಡಿಸೋಜ ಆಗ್ರಹ ಮಾಡಿದ್ದಾರೆ.
ಸಂವಿಧಾನ ತಿದ್ದುಪಡಿ ಮಾಡುವ ಅನಂತ ಹೆಗಡೆ ಹೇಳಿಕೆ ಅವರ ವೈಯಕ್ತಿಕ ಅಲ್ಲ. ಅದು ಬಿಜೆಪಿ ಮತ್ತು ಆರೆಸ್ಸೆಸ್ಸಿನ ಒಳಗಿನ ನಿರ್ಧಾರ. ಅದನ್ನು ಅನಂತ ಹೆಗಡೆಯವರು ಬಹಿರಂಗ ಮಾಡಿದ್ದಾರೆ. ಅದು ವೈಯಕ್ತಿಕ ಎಂದು ದೂರ ನಿಲ್ಲಲು ನೋಡುತ್ತಿದೆ. ವೈಯಕ್ತಿಕ ಹೇಳಿಕೆಯಾದರೆ, ಬಿಜೆಪಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಸುಮ್ಮನಿರುತ್ತಾರೆ ಅಂದ್ರೆ, ಅದು ಇವರದ್ದೇ ಒಳಗಿನ ಮಾತು ಅಂತಾಗುತ್ತದೆ. ದೇಶದ ಜನರು ಸಂವಿಧಾನ ಒಪ್ಪಿ ಅವರಿಗೆ ಮತ ಹಾಕಿದ್ದಾರೆ. ಆದರೆ ಅವರು ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ಜಾರಿಗೆ ಬಂದು 75 ವರ್ಷಾಚರಣೆ ಸಂದರ್ಭದಲ್ಲಿ ಸಂಸತ್ತಿನಲ್ಲಿ ನೀಡಿದ್ದ ಸಂವಿಧಾನದ ಕೈಪಿಡಿಯಲ್ಲಿ ಸೆಕ್ಯುಲರ್ ಪದವನ್ನೇ ಕೈಬಿಟ್ಟಿದ್ದರು. ಆನಂತರ, ತಪ್ಪಾಗಿದೆ ಎಂದು ಸರಿಪಡಿಸುವ ಕೆಲಸ ಮಾಡಿದ್ದರು. ಇದೆಲ್ಲ ಎಡವಟ್ಟಿನಿಂದ ಆಗುವ ತಪ್ಪುಗಳಲ್ಲ. ಆರೆಸ್ಸೆಸ್ ಅಜೆಂಡಾವನ್ನೇ ಇವರು ಹೇಳುತ್ತಿದ್ದಾರೆ. ದೇಶದಲ್ಲಿ ಇವರದೇ ಸಂವಿಧಾನ ಜಾರಿಗೊಳಿಸಲು ಹೊರಟಿದ್ದಾರೆ. ಇವರಿಗೆ ಅಂಬೇಡ್ಕರ್, ಸಂವಿಧಾನ ಎಲ್ಲ ಬರೀ ಮಾತಿಗೆ ಮಾತ್ರ. ಇವರ ನಿಗೂಢ ಸಂಚು ಬೇರೆಯದ್ದೇ ಇದೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ 2019ರಲ್ಲಿ ಸಂಸತ್ತಿನಲ್ಲಿ ಜಾರಿಯಾಗಿತ್ತು. ಆರು ತಿಂಗಳ ಒಳಗೆ ಅದನ್ನು ಜಾರಿ ಮಾಡಬೇಕಿತ್ತು. ಆದರೆ ಕಾನೂನು ಸ್ವರೂಪದ ಬಗ್ಗೆ ಮುಂದೂಡುತ್ತಲೇ ಬಂದಿದ್ದರು. ಈಗ ಚುನಾವಣೆಗೆ ಕೆಲವು ದಿನಗಳಿರುವಾಗ ಕಾನೂನು ಜಾರಿ ಮಾಡಿದ್ದಾರೆ. ಅಂದರೆ, ಇವರಿಗೆ ತಮ್ಮ ಅಭಿವೃದ್ಧಿ ಕಾರ್ಯ ಮುಂದಿಟ್ಟು ಚುನಾವಣೆ ಎದುರಿಸಲು ಧೈರ್ಯ ಇಲ್ಲ. ಪೌರತ್ವ ಕಾಯ್ದೆ ವಿಚಾರವನ್ನು ಜನರಲ್ಲಿ ಚರ್ಚೆಯಾಗಿಸಿ, ಮತ ಕೀಳಲು ನೋಡುತ್ತಿದ್ದಾರೆ ಎಂದು ಐವಾನ್ ಡಿಸೋಜ ಹೇಳಿದರು.
15 ಲಕ್ಷ ಕೋಟಿ ಸಾಲ ರೈಟ್ ಆಫ್ ಮಾಡಿದ್ದೇಕೆ
ರಾಜ್ಯದಲ್ಲಿ ನಾವು ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ. ವ್ಯಯ ಮಾಡಿದಾಗ ಅದು ಬಿಟ್ಟಿ ಭಾಗ್ಯ ಎಂದು ಹೇಳುತ್ತೀರಿ. ಶ್ರೀಮಂತರ, ಕಾರ್ಪೊರೇಟ್ ಕಂಪನಿಗಳ 15 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡುವಾಗ ಬಿಜೆಪಿಯವರಿಗೆ ಏನಾಗಲ್ಲ. ಬಡವರಿಗೆ ಕೊಟ್ಟರೆ ಮಾತ್ರ ಬಿಟ್ಟಿ ಭಾಗ್ಯ ಅಂತೀರಿ. ಬಿಜೆಪಿ ಸರಕಾರ ಈ ರೀತಿ ಬೊಕ್ಕಸ ಲೂಟಿ ಮಾಡುವಾಗ 25 ಸಂಸದರಲ್ಲಿ ಒಬ್ಬರೂ ಮಾತನಾಡಿಲ್ಲ. ಇವರೆಲ್ಲ ನಾಲಾಯಕ್ ಎಂದು ಈಗ ಪಕ್ಷದ ಕಾರ್ಯಕರ್ತರಿಗೆ ಗೊತ್ತಾಗಿದೆ. ಗೋ ಬ್ಯಾಕ್ ಶೋಭಾ, ಗೋಬ್ಯಾಕ್ ನಳಿನ್, ಗೋಬ್ಯಾಕ್ ಸೋಮಣ್ಣ ಎಂದು ಶುರು ಮಾಡಿದ್ದಾರೆ. ಇದಕ್ಕಾಗಿ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಹೇಳುತ್ತೇನೆ, ಅವರ ನಡೆ ಮೆಚ್ಚುವಂಥದ್ದು. ಈ ಹಿಂದೆ ಹಲವಾರು ಮಂದಿ ಎಂಪಿ ಆಗಿದ್ದರು. ಯಾರಿಗೂ ನೀವು ಬರಲೇಬೇಡಿ ಎಂದದ್ದು ಇಲ್ಲ. ಇವರೆಲ್ಲ ನಂಬರ್ ವನ್ ಸಂಸದರಾಗಿದ್ದು ಕೊನೆಯಿಂದ ಮೊದಲು ಆಗಿರಬೇಕು ಎಂದು ಛೇಡಿಸಿದರು. ಸುದ್ದಿಗೋಷ್ಟಿಯಲ್ಲಿ ಪಿವಿ ಮೋಹನ್, ಮನೋರಾಜ್ ರಾಜೀವ, ಭರತ್ ಮುಂಡೋಡಿ ಮತ್ತಿತರರಿದ್ದರು.
Mangalore Congress leader ivan dsouza slams Nalin kateel and, Ananth Kumar Hedge and Shoba. Says the need medical treatment. Former MLA Ivan D'Souza criticised MP Ananthkumar Hegde for his remarks about changing the constitution and labelled him as someone who is suffering from depression and in need of treatment.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm