ಬ್ರೇಕಿಂಗ್ ನ್ಯೂಸ್
19-02-24 09:04 pm Mangalore Correspondent ಕರಾವಳಿ
ವಿಜಯಪುರ, ಫೆ.19: ರಾಜ್ಯದಲ್ಲಿ 3600 ಲಂಬಾಣಿ ತಾಂಡಾಗಳಿದ್ದು, ಇವುಗಳಲ್ಲಿ ಶೇ.50ರಷ್ಟು ಕ್ರಿಶ್ಚಿಯನ್ನರು ನುಗ್ಗಿದ್ದಾರೆ. ಅಲ್ಲಿನ ಜನರನ್ನು ಮೋಸ ಮಾಡಿ ಮತಾಂತರ ಮಾಡುತ್ತಿದ್ದಾರೆ. ಕ್ರಿಶ್ಚಿಯನ್ ಮತಾಂತರಿ ಪಾದ್ರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಮೋಸದ ಮತಾಂತರ ನಿಲ್ಲಿಸದಿದ್ದರೆ ನಮ್ಮ ವಿಶೇಷ ಫೋರ್ಸ್ ನಿಮ್ಮನ್ನು ಒದ್ದು ಓಡಿಸಲಿದೆ. ಅನಧಿಕೃತ ಚರ್ಚ್ ಗಳನ್ನು ತೆರವು ಮಾಡಲಿದೆ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಿಮ್ಮ ನೀಚ ಕೆಲಸವನ್ನು ಯೇಸು ಒಪ್ಪಲ್ಲ. ಮತಾಂತರ ನಿಷೇಧ ಕಾನೂನಡಿ ಈ ಕೃತ್ಯ ತಡೆಯಬೇಕು. ತಾಂಡಾಗಳ ಬಡತನ, ಅನಕ್ಷರತೆಯನ್ನೇ ಬಳಸಿಕೊಂಡು, ಆಸೆ ತೋರಿಸಿ ಮತಾಂತರ ಮಾಡುತ್ತಿದ್ದಾರೆ. ನಮ್ಮ ಧರ್ಮ, ನಮ್ಮ ದೇವರು ನಮಗೆಲ್ಲ ಶಾಂತಿ, ಸುಖ ಕೊಡುತ್ತಿದ್ದಾನೆ. ಏನೇನೋ ತಪ್ಪು ಮಾಹಿತಿ ನೀಡಿ ಈ ರೀತಿ ಮತಾಂತರ ಮಾಡುವುದನ್ನು ಸರ್ಕಾರ ಹತ್ತಿಕ್ಕಬೇಕು. ಮತಾಂತರ ನಿಷೇಧ ಕಾಯ್ದೆ ಈಗಲೂ ಜಾರಿಯಲ್ಲಿದ್ದು, ಅದನ್ನು ಪಾಲಿಸಬೇಕು’ ಎಂದು ಮುತಾಲಿಕ್ ಹೇಳಿದರು.
ಜನಸಂಘದ ಪ್ರಣಾಳಿಕೆಯಲ್ಲಿಯೇ ಹಿಂದುತ್ವ, ಗೋಹತ್ಯೆ, ಮತಾಂತರ ನಿಷೇಧಗಳನ್ನು ಹಾಕಿಕೊಂಡಿದೆ. ಬಿಜೆಪಿ ಅದನ್ನು ಮುಂದುವರೆಸಿದೆ. ಹಿಂದು ರಾಷ್ಟ್ರದ ಆಲೋಚನೆಯೂ ಜನಸಂಘದ ಕಲ್ಪನೆ. ಚುನಾವಣೆ ಬಂದಾಗ ಮಾತ್ರ ಅದರ ಆಲೋಚನೆ ಬರುವುದಲ್ಲ. ಪ್ರಧಾನಿ ಮೋದಿ ಅವರು ಹಿಂದುರಾಷ್ಟ್ರದ ಕಡೆ ಹೆಜ್ಜೆ ಇಡುತ್ತಿದ್ದಾರೆ. 2024ರ ನಂತರ ನೂರಕ್ಕೆ ನೂರು ಹಿಂದು ರಾಷ್ಟ್ರವಾಗುತ್ತದೆ. ಹಾಗೆಂದು ಯಾರೂ ದೇಶ ಬಿಟ್ಟು ಹೋಗಬೇಕಾಗಿಲ್ಲ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಂಸ್ಕೃತಿಯನ್ನು ಒಪ್ಪಿ ಎಲ್ಲರೂ ಬದುಕು ನಡೆಸಬಹುದು ಎಂದು ಹೇಳಿದರು.
2014ರ ಹಿಂದಿನ ಪ್ರಧಾನಿಗಳು ಒಬ್ಬರೂ ಒಂದೂ ದೇವಸ್ಥಾನಕ್ಕೆ ಹೋಗಿರಲಿಲ್ಲ. ಮದರಸಾಗಳಿಗೆ ಹೋಗುತ್ತಿದ್ದರು. ಬಾಬರ್‌ನನ್ನು ಹೊತ್ತು ಮೆರೆಸುತ್ತಿದ್ದರು. ಆದರೆ, 2014ರ ಬಳಿಕ ಪ್ರಧಾನಿಯಾದ ಮೋದಿಯವರು ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಕಾಂಗ್ರೆಸಿನವರು ನಾವೂ ರಾಮ ಮಂದಿರ ಮಾಡುತ್ತೇವೆ ಎನ್ನುವುದು ಬೊಗಳೆ. ಅವರು ಮಾಡೋದಿದ್ದರೆ ರಾಮನ ಮಂದಿರಕ್ಕೆ ಬಜೆಟಲ್ಲಿ ಹಣ ಇಡಬೇಕಿತ್ತು. ಅವರಿಗೆ ಕ್ರೈಸ್ತ ನಿಗಮ, ಹಜ್ ಭವನಕ್ಕೆ ನೀಡಲು ಕೋಟಿ ಕೋಟಿ ಹಣ ಇದೆ. ರಾಮನಿಗೆ ಕೊಡಲು ಹಣ ಇಲ್ಲ ಎಂದರು.
We will destroy unauthorised churches in Karnataka by bulldozer says Pramod Muthalik. Many of the lambani community have been targeted by Christian missionaries for conversion. We ourselves will destroy unauthorised churches in Karnataka if government does not take any action.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm