ಬ್ರೇಕಿಂಗ್ ನ್ಯೂಸ್
04-09-23 07:12 pm Udupi Correspondent ಕರಾವಳಿ
ಉಡುಪಿ, ಸೆ.4: ಕಾಂತಾರ ಚಿತ್ರ ಸಂಪೂರ್ಣ ದೈವ ಪ್ರೇರಣೆಯಿಂದಲೇ ಆಗಿರುವುದು, ನಾನು ಮಾಡಿದ್ದಲ್ಲ. ದೈವದ ಬಲದಿಂದಲೇ ಆ ಚಿತ್ರ ಹಿಟ್ ಆಗಿರುವುದು. ದೈವದ ಚಾಕರಿ ಮಾಡುವ ಪಾಣಾರ, ನಲಿಕೆ ಸಮುದಾಯದ ಎಲ್ಲರಿಗೂ ನಮಿಸುತ್ತೇನೆ. ಪಂಜುರ್ಲಿ ದೈವದ ಸಿನಿಮಾ ಮಾಡುವ ಮೂಲಕ ದೈವದ ಸೇವೆ ಮಾಡುವ ಅವಕಾಶ ನನಗೂ ಸಿಕ್ಕಿದೆ. ಆಮೂಲಕ ನಿಮ್ಮ ಸಮುದಾಯಕ್ಕೇ ಸೇರಿಕೊಂಡಿದ್ದೇನೆ. ಮುಂದೊಂದು ಜನ್ಮ ಇದ್ದರೆ ಪಾಣಾರ ಸಮುದಾಯದಲ್ಲೇ ಹುಟ್ಟಿ ದೈವದ ಚಾಕರಿ ಮಾಡಲು ಬಯಸುತ್ತೇನೆ ಎಂದು ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಉಡುಪಿಯಲ್ಲಿ ಪಾಣಾರ ಯಾನೆ ನಲಿಕೆಯವರ ಜಿಲ್ಲಾ ಸೇವಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಮೆರಿಕದ ಮ್ಯೂಸಿಯಂನಲ್ಲಿ ಪಂಜುರ್ಲಿ ದೈವದ ಅತ್ಯಾಕರ್ಷಕ ಮೊಗ ಇದೆ. ಅಮೆರಿಕ ಅನ್ನುವುದು ನಮ್ಮ ಸಂಸ್ಕೃತಿಗೆ ತದ್ವಿರುದ್ಧ ಇರುವ ಜಾಗ. ಅಂಥ ಜಾಗದಲ್ಲಿ ನಾವು ನಂಬುವ ಪಂಜುರ್ಲಿ ದೈವದ ಮೊಗ ಇದೆಯಂದ್ರೆ ನಾವೆಲ್ಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರು ಖುಷಿ ಪಡಬೇಕು.


ನಾನು ಅಂಥ ದೊಡ್ಡ ನಟ, ನಿರ್ದೇಶಕ ಅಲ್ಲ. ದೊಡ್ಡ ಫ್ಯಾನ್ ವರ್ಗವನ್ನು ಇಟ್ಟುಕೊಂಡವನೂ ಅಲ್ಲ. ಒಂದೆರಡು ಚಿತ್ರದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದೇನೆ ಅಷ್ಟೇ. ಆದರೆ ಈ ಮಟ್ಟದ ಯಶಸ್ಸು ಸಿಕ್ಕಿದ್ದಕ್ಕೆ ದೈವದ ಆಶೀರ್ವಾದವೇ ಕಾರಣ ಅಂತೇನೆ. ದೈವಗಳನ್ನು ನಂಬದವರಿಗೂ ಅವುಗಳ ಶಕ್ತಿಯ ಬಗ್ಗೆ ನಾನೇ ನಿದರ್ಶನ ಎಂದು ಹೇಳುತ್ತೇನೆ. ದೈವದ ಶಕ್ತಿಯನ್ನು ಪ್ರಪಂಚದ ಎತ್ತರಕ್ಕೆ ತೋರಿಸಲು ಸಾಧ್ಯವಾಗಿದ್ದು ದೈವದ ಶಕ್ತಿಯ ಕಾರಣದಿಂದ. ತುಳುನಾಡಿನ ಸಾಕಷ್ಟು ಇತಿಹಾಸವನ್ನು ಓದಿಕೊಂಡಿದ್ದೇನೆ. ಸಾವಿರಾರು ವರ್ಷಗಳ ಇತಿಹಾಸ ನಮ್ಮ ಜಿಲ್ಲೆಗೆ ಇದೆ. ಇಲ್ಲಿ ದೇವಸ್ಥಾನಗಳು ಬರುವ ಮೊದಲೇ ಇಲ್ಲಿ ದೈವಸ್ಥಾನಗಳು ಇದ್ದವು ಎನ್ನುವ ವಿಚಾರ ಕಂಡುಬರುತ್ತದೆ. ಇಲ್ಲಿ ದೈವಾರಾಧನೆ, ಪ್ರಕೃತಿಯ ಆರಾಧನೆ ಇತ್ತು. ಈ ಸಮುದಾಯದ ಜನರು ಸಾವಿರಾರು ವರ್ಷಗಳಿಂದ ಈ ಕಲೆಯನ್ನು ಮಾಡಿಕೊಂಡು ಬಂದಿದ್ದಾರೆ. ಈ ಕಲೆ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ಒಂದಷ್ಟು ಮಂದಿ ಮಾತ್ರ ಪರಿಪೂರ್ಣ ಸಾಧನೆ ಮಾಡಲು ಸಾಧ್ಯ.
ಚಿತ್ರದ ಯಶಸ್ಸಿನ ಬಳಿಕ ನನ್ನ ಪತ್ನಿಯ ಸಲಹೆಯಂತೆ ಒಂದು ಟ್ರಸ್ಟ್ ಮಾಡಿಕೊಂಡಿದ್ದೇವೆ. ಈ ಟ್ರಸ್ಟ್ ಮೂಲಕ ಇಡೀ ಸಮಾಜಕ್ಕೆ ಬೆಂಬಲ ಕೊಡುವ, ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದೇವೆ. ನಿಮ್ಮ ಸಮುದಾಯದಲ್ಲಿ ಓದುವಂಥ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ನಾವು ಬೆಂಬಲ ನೀಡುತ್ತೇವೆ. ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದ ಜೊತೆಗೆ ನಮ್ಮ ಆಚಾರ, ವಿಚಾರ ಬೆಳೆಸಿಕೊಂಡು ಹೋಗಬೇಕಾಗಿದೆ. ನಿಮ್ಮ ಸಂಘದ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ಏನೇನು ಬೇಕು, ಅದಕ್ಕಾಗಿ ಜೊತೆಗೆ ನಿಲ್ಲುತ್ತೇನೆ. ಸರಕಾರದ ಜೊತೆಗೆ ನಿಂತು ಈ ಕೆಲಸ ಮಾಡಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
If there is any rebirth, I wish to be born in Panara community says Rishab Shetty in Udupi. He was speaking at the annual day celebrations of Udupi District Panara Sangha under the aegis of Udupi District Pana Yane Nalikeyavara Samaja Seva Sangha and Paryaya Krishnapura Mutt at Sri Krishna Mutt Rajangana in Udupi. Kantara movie revolved around the life of the Panara community and Daivaradhana (spirit worship).
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am