ಬ್ರೇಕಿಂಗ್ ನ್ಯೂಸ್
29-08-23 11:04 pm Mangalore Correspondent ಕರಾವಳಿ
ಪುತ್ತೂರು, ಆಗಸ್ಟ್ 29: ಪುತ್ತೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರು ಮನೆ, ಅನ್ನ, ಬಟ್ಟೆ, ಬೆಳಕು ಇಲ್ಲದೆ ಕೊರಗಬಾರದು. ಈ ನಿಟ್ಟಿನಲ್ಲಿ ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನಿಂದ ಈಗಾಗಲೇ ನೋಂದಣಿ ಮಾಡಿಸಿರುವ 600 ಮಂದಿ ಬಡವರಿಗೆ ನಿವೇಶನ ನೀಡಲಾಗುವುದು. ಇದಕ್ಕಾಗಿ ವಿಟ್ಲ ಭಾಗದಲ್ಲಿ 5 ಎಕರೆ ಭೂಮಿ ಖರೀದಿ ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಪುತ್ತೂರು ನಗರಸಭೆಯ ಹಳೆಯ ಕಚೇರಿ ಕಟ್ಟಡದಲ್ಲಿ ಶಾಸಕರ ಕಚೇರಿ ಉದ್ಘಾಟಿಸಿದ ಬಳಿಕ ಅವರು ಫಲಾನುಭವಿಗಳಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದರು. ಪ್ರತಿ ಕುಟುಂಬಕ್ಕೆ 3 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಜತೆಗೆ, ಗ್ರಾಮೀಣ ಭಾಗದಲ್ಲಿ 1 ಸಾವಿರ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ನಿವೇಶನ ಕಾದಿರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದವರು ತಿಳಿಸಿದರು.
ಕಚೇರಿ ಸಹಾಯಕರಿಗೆ ₹2.25 ಲಕ್ಷ ಸಂಬಳ
ವಿವಿಧ ಕೆಲಸಗಳಿಗಾಗಿ ಶಾಸಕರ ಕಚೇರಿಗೆ ಬರುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಆಪ್ತ ಸಹಾಯಕರು ಮಾತ್ರವಲ್ಲದೆ ಇತರ 7 ಮಂದಿ ಸಹಾಯಕರನ್ನು ಕಚೇರಿಯಲ್ಲಿ ನಿಯೋಜಿಸಲಾಗಿದೆ. ವೈದ್ಯಕೀಯ, ಕಂದಾಯ, ನಗರ ಸಮಸ್ಯೆ ಸೇರಿ ಪ್ರತಿ ಇಲಾಖೆಗೆ ಸಂಬಂಧಿಸಿ ಜನರ ಕೆಲಸಗಳನ್ನು ಇವರು ಮಾಡಲಿದ್ದಾರೆ. ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ಗೆ ಸಂಬಂಧಿಸಿ ಇಬ್ಬರು ಸಹಾಯಕರಿದ್ದಾರೆ. ತಮ್ಮ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗುವವರಿಗೆ ಅನುಕೂಲವಾಗುವಂತೆ ಅಲ್ಲಿಯೂ ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ತಿಂಗಳು ಸಹಾಯಕರಿಗೆ ಒಟ್ಟು ₹2.25 ಲಕ್ಷವನ್ನು ವೈಯಕ್ತಿಕವಾಗಿ ನೀಡುತ್ತಿದ್ದೇನೆ ಎಂದು ಅಶೋಕ್ ರೈ ಹೇಳಿದ್ದಾರೆ.
The poor in Puttur assembly constituency should not suffer without houses, food, clothes and light. In this regard, 600 poor people who have already registered with Rai Estate Educational and Charitable Trust will be given plots. Mla Ashok Kumar Rai said that five acres of land has been purchased in Vitla area for this purpose.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 08:14 pm
Mangalore Correspondent
Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ...
07-02-26 06:44 pm
Bangalore Cat Kidnap: ಬೆಂಗಳೂರಿನಲ್ಲಿ ಠಾಣೆ ಮೆಟ್...
07-02-26 05:21 pm
ಬೆಂಗಳೂರು ಏರ್ಪೋರ್ಟ್ ನಲ್ಲಿ ಕೋಟ್ಯಂತರ ಮೌಲ್ಯದ ಚಿನ್...
07-02-26 12:31 pm
MLA Vedavyas Kamath, Mangalore: ಶಾಸಕ ವೇದವ್ಯಾಸ...
07-02-26 11:47 am