ಬ್ರೇಕಿಂಗ್ ನ್ಯೂಸ್
22-08-23 06:17 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 22: ಪ್ರೋಟೋಕಾಲ್ ಹೆಸರಲ್ಲಿ ಬಿಜೆಪಿಯವರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇವರನ್ನು ಜಿಲ್ಲಾಧಿಕಾರಿ ಕಚೇರಿಯ ಒಳಗೆ ಪ್ರತಿಭಟನೆಗೆ ಅವಕಾಶ ನೀಡಿದ್ದೇ ತಪ್ಪು. ಇವರು ಪ್ರತಿಭಟನೆ ಮಾಡಿ ಅಧಿಕಾರಿಗಳನ್ನು ಹೆದರಿಸಲು ಸಾಧ್ಯವಿಲ್ಲ. 135 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು ಯಾವುದೇ ಗೊಡ್ಡು ಬೆದರಿಕೆಗಳಿಗೆ ಅಧಿಕಾರಿಗಳು ಸೊಪ್ಪು ಹಾಕಬೇಕಿಲ್ಲ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿಯವರು ಅಧಿಕಾರ ಇಲ್ಲದೆ ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ. ಹಿಂದೆ ಇವರು ಹೇಳಿದ್ದೆಲ್ಲ ನಡೆಯುತ್ತಿತ್ತು. ಹಿಂದಿನ ಜಿಲ್ಲಾಧಿಕಾರಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕೆಲಸ ಮಾಡಿಸುತ್ತಿದ್ದರು. 71 ಕಡೆ ಅಕ್ರಮ ಸಕ್ರಮ ಪ್ರಕರಣವನ್ನು ಕಾನೂನು ಬಾಹಿರವಾಗಿ ಮಾಡಿದ್ದಾರೆ. ಈಗ ಅದನ್ನು ತನಿಖೆ ಮಾಡಿಸಲು ಜಿಲ್ಲಾಧಿಕಾರಿ ಸಮಿತಿ ಮಾಡಿದ್ದಾರೆ. ಈಗ ಬಿಜೆಪಿಯವರ ಅಹಂಕಾರ, ದಬ್ಬಾಳಿಕೆಗೆ ಕಡಿವಾಣ ಬಿದ್ದಿದೆ. ಹಾಗಾಗಿ ಅಧಿಕಾರಿಗಳನ್ನು ಬೆದರಿಸುವ ತಂತ್ರಕ್ಕೆ ಕೈಹಾಕಿದ್ದಾರೆ ಎಂದರು.
13 ವರ್ಷ ಮಂತ್ರಿಯಾಗಿದ್ದು ಅಧಿಕಾರಿಗಳ ಜೊತೆಗೆ ಯಾವ ರೀತಿ ಕೆಲಸ ಮಾಡಿದ್ದೇನೆಂದು ಎಲ್ಲರಿಗೂ ಗೊತ್ತಿದೆ. ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ನಡೆಯುತ್ತೆ. ಎಲ್ಲರ ಹೆಸರನ್ನೂ ಹಾಕಲಾಗುತ್ತದೆ. ಹಾಗಂತ, ಅಧಿಕಾರಿಗಳನ್ನೇ ಹೆದರಿಸುವ ತಂತ್ರ ಮಾಡಿದರೆ ಇಲ್ಲಿ ಯಾರೂ ಕೇರ್ ಮಾಡಬೇಕಿಲ್ಲ. ಕೆಲವೊಂದು ಕಡೆ ಕಾರ್ಯಕ್ರಮಕ್ಕೆ ಹೋದರೆ ಸ್ಟೇಜಿಗೆ ಹೋಗಬಾರದು ಎಂಬ ಕಂಡೀಶನ್ ಹಾಕುತ್ತಾರೆ. ಮಾಜಿ ಶಾಸಕನ ನೆಲೆಯಲ್ಲಿ ರಿಕ್ಷಾ ಶೆಲ್ಟರ್ ಹಾಕಿದರೂ, ನನ್ನ ಹೆಸರು ಬೇಡ ಎಂದರೂ ಬಿಡದೆ ರಾಜಕೀಯ ಮಾಡಿ ನಿಲ್ಲಿಸಿದ್ದಾರೆ. ಇಂಥ ಕೀಳು ಭಾವನೆ ನನಗಿಲ್ಲ.
ಬಂಟ್ವಾಳ ತಾಲೂಕಿನ ಒಂದು ಪಂಚಾಯತ್ ನಲ್ಲಿ ಪುರುಷರು ಬರಬಾರದೆಂದು ನಾಲ್ವರಿಗೆ ಮಹಿಳಾ ಮೀಸಲಾತಿ ನೀಡಿದ್ದಾರೆ. ಅಧಿಕಾರ ಇದ್ದರೆ ಏನೂ ಮಾಡಬಹುದೆಂದು ಅಂದ್ಕೊಂಡಿದ್ದರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಎಂದು ರಮಾನಾಥ ರೈ ಹೇಳಿದರು. ಕೆಪಿಸಿಸಿ ಪದಾಧಿಕಾರಿಯೊಬ್ಬರು ಜಿಲ್ಲಾಧಿಕಾರಿಗೆ ಶಿಫಾರಸು ಪತ್ರ ಕೊಟ್ಟ ಬಗ್ಗೆ ಕೇಳಿದ ಪ್ರಶ್ನೆಗೆ, ಅದೇನೂ ನನಗೆ ಗೊತ್ತಿಲ್ಲ. ತಿಳಿಯದ ವಿಚಾರದಲ್ಲಿ ಮಾತನಾಡಬಾರದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಬೇಬಿ ಕುಂದರ್, ಕೋಡಿಜಾಲ್ ಇಬ್ರಾಹಿಂ, ವಿಶ್ವಾಸದಾಸ್, ಶುಭೋದಯ ಆಳ್ವ, ಲ್ಯಾನ್ಸಿ ಲಾಟ್ ಪಿಂಟೋ, ಸುಹಾನ್ ಆಳ್ವ, ಅಪ್ಪಿ, ಶಾಹುಲ್ ಹಮೀದ್ ಇದ್ದರು.
Mangalore senior Congress leader ramanath rai Slams BJP leaders for protesting at DC office.
27-06-25 10:42 pm
HK News Desk
Cm Siddaramaiah, Mangalore, Hate speech, Poli...
27-06-25 09:56 pm
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ' ಪದ ತ...
27-06-25 05:38 pm
Five Tigers Die Male Mahadeshwara Forest: ಮಲೆ...
27-06-25 02:46 pm
ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು ; 22ರ...
26-06-25 10:37 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
27-06-25 10:59 pm
HK News Desk
Davanagere News, Crime, Aunty: 25 ವರ್ಷದ ಅಳಿಯನ...
27-06-25 07:50 pm
ಬೇಲಿಯೇ ಎದ್ದು ಹೊಲ ಮೇಯ್ದ ಕತೆ ; ಬ್ಯಾಂಕ್ ಮ್ಯಾನೇಜರ...
27-06-25 07:27 pm
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm