ಬ್ರೇಕಿಂಗ್ ನ್ಯೂಸ್
25-03-23 08:12 pm Giridhar Shetty, Mangaluru Corresopondent ಕರಾವಳಿ
ಮಂಗಳೂರು, ಮಾ.25: ಕಳೆದ ಐದಾರು ಅಸೆಂಬ್ಲಿ ಚುನಾವಣೆಗಳಲ್ಲಿ ಕರಾವಳಿಯ ಮಟ್ಟಿಗೆ ಕೇಸರಿ ಪಾಳಯದ ಸೋಲಿಲ್ಲದ ಕಣ, ಬಿಜೆಪಿ ಭದ್ರಕೋಟೆ ಎಂಬ ಹಿರಿಮೆ ಉಳಿಸಿಕೊಂಡಿದ್ದು ಸುಳ್ಯ ವಿಧಾನಸಭೆ ಕ್ಷೇತ್ರ. 1957ರಿಂದಲೂ ಮೊದಲು ಗೌಡ, ಆನಂತರ ಎರಡು ಬಾರಿ ಪರಿಶಿಷ್ಟ ಪಂಗಡ, ಆಮೇಲೆ ಕಳೆದ 45 ವರ್ಷಗಳಿಂದ ಪರಿಶಿಷ್ಟ ಜಾತಿಗೆ ಮೀಸಲಾದ ಸುಳ್ಯ ಕ್ಷೇತ್ರದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿರುವುದು ಗೌಡ ಸಮುದಾಯದ ಜನ. ಆದರೆ ಅದೇನು ದುರಾದೃಷ್ಟವೋ, ತಮ್ಮದೇ ಸಮುದಾಯದ ಶೇಕಡಾ 60ಕ್ಕಿಂತಲೂ ಹೆಚ್ಚು ಜನಸಂಖ್ಯೆಯಿರುವ ಸುಳ್ಯವನ್ನು ಆಳ್ವಿಕೆ ನಡೆಸುವುದರಲ್ಲಿ ಗೌಡರು ಸೋತಿದ್ದಾರೆ. ಹಾಗಿದ್ದರೂ, ಸುಳ್ಯದಲ್ಲಿ ಯಾರು ಶಾಸಕರಾಗಬೇಕು ಅನ್ನುವುದನ್ನು ಆಯ್ಕೆ ಮಾಡುವುದು ಮಾತ್ರ ಇದೇ ಗೌಡರು.
ನಿರಂತರ ಆರು ಬಾರಿ ಗೆಲ್ಲುತ್ತ ಬಂದಿರುವ ಎಸ್.ಅಂಗಾರ ಅವರ ಸೌಮ್ಯ ಸ್ವಭಾವ, ಸರಳ ವ್ಯಕ್ತಿತ್ವ, ಗುತ್ತಿನ ಗೌಡರು ಹೇಳಿದ ರೀತಿಯಲ್ಲೇ ವರ್ತಿಸುತ್ತಾರೆ ಎಂದೋ ಏನೋ ಇವರು ಒತ್ತುವ ಮತಗಳಿಂದಲೇ ಅಂಗಾರ ಗೆದ್ದುಕೊಂಡು ಬಂದಿದ್ದಾರೆ. ಈ ಬಾರಿಯೂ ಹಿಂದಿನ ರೀತಿಯ ಫಲಿತಾಂಶವೇ ಬರಬಹುದು ಅನ್ನೋದನ್ನು ಹೇಳಲಾಗದು. ಯಾಕಂದ್ರೆ, ಆರು ಬಾರಿ ಶಾಸಕ, ಈ ಬಾರಿ ಸಚಿವರಾದ್ರೂ ಅಂಗಾರ ಸುಳ್ಯ ಕ್ಷೇತ್ರದ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಮೂಲಸೌಕರ್ಯ ನೆರವೇರಿಲ್ಲ ಎಂಬ ಕೂಗು ಎದ್ದಿದೆ. ಇದರ ಪರಿಣಾಮ ಹತ್ತಕ್ಕೂ ಹೆಚ್ಚು ಕಡೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಕಾಣಿಸಿಕೊಂಡಿದೆ. ಬಿಜೆಪಿ ಕಾರ್ಯಕರ್ತರ ಒಳಗಡೆಯೇ ಅಂಗಾರ ಬದಲಿಸಬೇಕೆಂಬ ಒತ್ತಾಯವೂ ಬಲಗೊಂಡಿದೆ.
ಕಾರ್ಯಕರ್ತರ ಒತ್ತಾಯ, ಚುನಾವಣಾ ಬಹಿಷ್ಕಾರದ ಬೆದರಿಕೆ ಇರುವುದು ಬಿಜೆಪಿ ರಾಜ್ಯ ನಾಯಕರಿಗೆ ಮತ್ತು ಹೈಕಮಾಂಡ್ ಮಟ್ಟಕ್ಕೂ ಹೋಗಿದೆ. ಹೀಗಾಗಿ ಈ ಬಾರಿ ಅಂಗಾರ ಬದಲು ಹೊಸ ಮುಖ ಶಾಸಕ ಸ್ಥಾನಕ್ಕೆ ಬರಲಿದೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. ಬಿಜೆಪಿ ಜಿಪಂ ಸದಸ್ಯರಾಗಿ ಗುರುತಿಸಿರುವ ಭಾಗೀರಥಿ ಮುರುಳ್ಯ, ಈ ಹಿಂದೆ ಜಿಪಂ ಅಧ್ಯಕ್ಷೆಯಾಗಿದ್ದ ಮೀನಾಕ್ಷಿ ಶಾಂತಿಗೋಡು ಹೆಸರು ರೇಸಿನಲ್ಲಿ ಕೇಳಿಬರುತ್ತಿದೆ. ಅದರ ನಡುವೆ, ಆರೆಸ್ಸೆಸ್ ಹಿನ್ನೆಲೆಯ ಪದ್ಮನಾಭ, ಶಿವಪ್ರಸಾದ್ ಎಂಬವರ ಹೆಸರುಗಳೂ ರೇಸಿನಲ್ಲಿದೆ.
ಕಾಂಗ್ರೆಸಿನಿಂದ ಜಿಗಣಿ ಕೃಷ್ಣಪ್ಪ ಕಣಕ್ಕೆ
ಸುಳ್ಯ ಕಾಂಗ್ರೆಸ್ ಒಳಗಡೆ ಎಸ್ಸಿ ಮೀಸಲಿನಿಂದ ಪ್ರತಿನಿಧಿಸುವ ಪ್ರಭಾವಿ ಅಭ್ಯರ್ಥಿಗಳಿಲ್ಲ. ಹೀಗಾಗಿ ಮಡಿಕೇರಿ ಮೂಲದ ನಂದಕುಮಾರ್ ಮತ್ತು ಬೆಂಗಳೂರು ಮೂಲದ ಜಿಗಣಿ ಕೃಷ್ಣಪ್ಪ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದರು. ಇವರಿಬ್ಬರು ಕೂಡ ಕಳೆದ ಎರಡು ವರ್ಷಗಳಿಂದ ಸುಳ್ಯದಲ್ಲಿ ಸಾಕಷ್ಟು ಹಣ ಸುರಿದು ಕೆಲಸ ಮಾಡಿದ್ದಾರೆ ಎಂದು ಅಲ್ಲಿನ ಕಾಂಗ್ರೆಸಿಗರೇ ಹೇಳುತ್ತಾರೆ. ಇದೀಗ ಕಾಂಗ್ರೆಸ್ ಚುನಾವಣಾ ಸಮಿತಿ ಬೆಂಗಳೂರಿನ ಜಿಗಣಿಯಲ್ಲಿ ಉದ್ಯಮ ಹೊಂದಿರುವ ಕೃಷ್ಣಪ್ಪ ಅವರನ್ನು ಸುಳ್ಯ ಕ್ಷೇತ್ರದಿಂದ ಅಂತಿಮಗೊಳಿಸಿದೆ. ಜಿಗಣಿ ಕೃಷ್ಣಪ್ಪ ಅವರ ಪತ್ನಿಯ ಮನೆ ಇದೇ ಸುಳ್ಯ ಕ್ಷೇತ್ರದಲ್ಲಿರುವುದು, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಒಡನಾಟ ಹೊಂದಿದ್ದಾರೆ ಎನ್ನುವುದು ಮತ್ತು ಕಾಂಗ್ರೆಸಿನ ರಾಜ್ಯ ನಾಯಕರ ಜೊತೆಗೆ ಆಪ್ತವಾಗಿರುವುದು ಇವರ ಪ್ಲಸ್ ಪಾಯಿಂಟ್.
ಆಪ್ ಅಭ್ಯರ್ಥಿ ಮಾಜಿ ಶಾಸಕರ ಪುತ್ರಿ ಕಣಕ್ಕೆ
ಆಮ್ ಆದ್ಮಿ ಪಕ್ಷದಿಂದ ಮಾಜಿ ಕಾಂಗ್ರೆಸ್ ಶಾಸಕ ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಹೆಸರನ್ನು ಈಗಾಗಲೇ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಒಂದು ರೀತಿಯಲ್ಲಿ ನೋಡಿದರೆ, ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಬಗ್ಗೆ, ಶಾಸಕ ಅಂಗಾರ ಬಗ್ಗೆ ಅಸಮಾಧಾನ ಇದ್ದವರು ಆಮ್ ಆದ್ಮಿ ಪರ ಇದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಒಳಗಿಂದೊಳಗೆ ಆಪ್ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಅವರು ಕೂಡ ಸುಳ್ಯದವರಾಗಿದ್ದು, ಪ್ರಭಾವಿ ಗೌಡ ಸಮುದಾಯದವರು. ಈ ಕಾರಣದಿಂದ ಆಪ್ ಈ ಬಾರಿ ಸುಳ್ಯದಲ್ಲಿ ಒಂದಷ್ಟು ಮತ ದಕ್ಕಿಸಿಕೊಳ್ಳುತ್ತಾ ಎಂಬ ನಿರೀಕ್ಷೆ ಗರಿಗೆದರಿದೆ. ಈ ರೀತಿಯ ಬೆಳವಣಿಗೆ ಬಿಜೆಪಿ ಒಳಗಡೆಯೂ ಸ್ವಲ್ಪಮಟ್ಟಿಗೆ ನಡುಕಕ್ಕೂ ಕಾರಣವಾಗಿದೆ.
ಸುಳ್ಯದಲ್ಲಿ 60 ಶೇಕಡಾ ಗೌಡರದ್ದೇ ಮತ
ಸುಳ್ಯ ಕ್ಷೇತ್ರದಲ್ಲಿ ಸದ್ಯಕ್ಕೆ ಒಟ್ಟು 2,04252 ಮತದಾರರಿದ್ದು ಅದರಲ್ಲಿ 1,01023 ಪುರುಷರು ಮತ್ತು 1,03227 ಮಹಿಳೆಯರಿದ್ದಾರೆ. ಜಾತಿವಾರು ಅಂದಾಜು ಮತಗಳನ್ನು ನೋಡಿದರೆ, ಗೌಡ ಸಮುದಾಯದ ಮತಗಳೇ 1 ಲಕ್ಷದ 10 ಸಾವಿರದಷ್ಟಿದ್ದಾರೆ. ಉಳಿದಂತೆ, 36 ಸಾವಿರ ಮುಸ್ಲಿಂ, 35 ಸಾವಿರ ಎಸ್ಸಿ-ಎಸ್ಟಿ, ಬಂಟರು 7500, ಇತರೇ 18 ಸಾವಿರ ಮತಗಳಿವೆ. ಬಲಾಬಲ ನೋಡಿದರೆ, ಇಲ್ಲಿ ಗೌಡ ಸಮುದಾಯ ಯಾರಿಗೆ ಓಟು ಕೊಡುತ್ತೋ ಅವರೇ ಗೆಲ್ಲುತ್ತಾರೆ. ಕಳೆದ 2018ರ ಚುನಾವಣೆಯಲ್ಲಿ ಅಂಗಾರ 26 ಸಾವಿರ ಮತಗಳಿಂದ ಮುನ್ನಡೆ ಪಡೆದಿದ್ದರೆ, 2013ರ ಚುನಾವಣೆಯಲ್ಲಿ ಅಂಗಾರ ಕೇವಲ 1300 ಮತಗಳ ಅಲ್ಪ ಅಂತರವನ್ನಷ್ಟೇ ಪಡೆದಿದ್ದರು. 2008ರ ಚುನಾವಣೆಯಲ್ಲಿ ಕೇವಲ ನಾಲ್ಕು ಸಾವಿರ ಮತಗಳನ್ನಷ್ಟೇ ಅಂಗಾರ ಮುನ್ನಡೆ ಗಳಿಸಿದ್ದರು.
ಕಾಂಗ್ರೆಸ್ ಸೋತಿದ್ದು ಪಕ್ಷದ ನಾಯಕರಿಂದಲೇ
2008 ಮತ್ತು 2013ರ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿನ ಹತ್ತಿರ ಬಂದಿತ್ತು. ಆದರೆ, ಪಕ್ಷದೊಳಗಿನ ಗೌಡ ಸಮುದಾಯದ ಕೆಲವು ಮುಖಂಡರ ಒಳಜಗಳ, ಚುನಾವಣೆ ವೇಳೆಗೆ ನಿರ್ಲಿಪ್ತನಾಗುವ ವರ್ತನೆಯಿಂದ ಕಾಂಗ್ರೆಸ್ ಎರಡು ಬಾರಿಯೂ ಸೋತಿತ್ತು. ಅವರೆಡು ಚುನಾವಣೆಯಲ್ಲೂ ವೆಂಕಪ್ಪ ಗೌಡರು ಚುನಾವಣಾ ಕಣದಲ್ಲಿ ಮುಂಚೂಣಿಯಲ್ಲಿದ್ದು ಗೌಡರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿದ್ದರು. ಈ ಬಾರಿ ಜಿಗಣಿ ಕೃಷ್ಣಪ್ಪ ಅವರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಒಳಗಿಂದೊಳಗೆ ಅಸಮಾಧಾನವೂ ಎದ್ದಿದೆ. ಕಡಬದಲ್ಲಿ ನಂದಕುಮಾರ್ ಪರ ಇದ್ದ ಗುಂಪು ಪ್ರತ್ಯೇಕವಾಗಿ ಸಭೆಯನ್ನೂ ನಡೆಸಿದ್ದಾರೆ. ಈ ಕಾರಣದಿಂದ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಜನವಿರೋಧ ನಡುವೆ ಅಂಗಾರ ಸ್ಪರ್ಧಿಸಿದರೂ, ಹೊಸ ಮುಖ ಕಾಣಿಸಿಕೊಂಡರೂ, ಕಾಂಗ್ರೆಸ್- ಬಿಜೆಪಿ ನಡುವೆ ನೇರ ಪೈಪೋಟಿ ಅಂತೂ ನಿರೀಕ್ಷಿತ.
Will BJP Angara from Sullia contest against congress leader Krishnappa G overcoming gowda community, Political report. In coastal region, U T Khader is offered ticket from Mangaluru, Mithun Rai from Moodbidri, Rakshit Shivaram from Beltangady, Ramanath Rai from Bantwal, Krishnappa G from Sullia, Gopal Poojary from Byndoor, Vinay Kumar Sorake from Kaup and Dinesh Hegde Molahalli from Kundapur legislative constituency.
26-08-25 07:07 pm
Bangalore Correspondent
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm