ಬ್ರೇಕಿಂಗ್ ನ್ಯೂಸ್
20-03-23 10:52 pm Mangalore Correspondent ಕರಾವಳಿ
ಮಂಗಳೂರು, ಮಾ.20: ಮಂಗಳೂರು ನಗರಕ್ಕೆ ವಿಐಪಿಗಳು ಯಾರಾದ್ರೂ ಬಂದಲ್ಲಿ ಉಳಿದುಕೊಳ್ಳುವುದು ಸರಕಾರಿ ಅತಿಥಿ ಬಂಗಲೆಯಲ್ಲಿ. ರಾಜ್ಯಪಾಲರು, ಮುಖ್ಯಮಂತ್ರಿ ಕೆಲವೊಮ್ಮೆ ಉಳಿದುಕೊಳ್ಳುವುದಿದ್ದರೂ, ಇದೇ ಅತಿಥಿ ಬಂಗಲೆಯನ್ನು ಆಶ್ರಯಿಸುತ್ತಾರೆ. ಆದರೆ, ಮಂಗಳೂರಿನ ಸರಕಾರಿ ಅತಿಥಿ ಬಂಗಲೆಯ ದುಸ್ಥಿತಿ ಎಲ್ಲಿ ಮುಟ್ಟಿದೆ ಎಂದರೆ, ಅಲ್ಲಿ ಕೆಲಸ ಮಾಡುವ ನೌಕರರಿಗೆ ಆರು ತಿಂಗಳಿನಿಂದ ವೇತನವನ್ನೇ ನೀಡದೆ ದುಡಿಸುತ್ತಿದ್ದಾರೆ.
ನಗರದ ಕದ್ರಿಯ ಸರ್ಕಿಟ್ ಹೌಸ್ ನಲ್ಲಿ ಹೊಸತು ಮತ್ತು ಹಳತು ಎಂಬ ಎರಡು ಅತಿಥಿ ಬಂಗಲೆಗಳಿವೆ. ಮತ್ತೊಂದು ಮಲ್ಲಿಕಟ್ಟೆಯಲ್ಲಿ ಸರಕಾರಿ ಅತಿಥಿ ಬಂಗಲೆ ಇದೆ. ಪ್ರತಿ ಬಂಗಲೆಯಲ್ಲಿ 8-10 ಐಷಾರಾಮಿ ಕೊಠಡಿಗಳಿದ್ದು, ಅವನ್ನು ದಿನವೂ ನಿರ್ವಹಣೆ ಮಾಡಲು ಕೆಲಸಗಾರರಿದ್ದಾರೆ. ಆದರೆ ಇವರನ್ನು ವರ್ಷದಿಂದ ವರ್ಷಕ್ಕೆ ನೇಮಕಾತಿಯಂತೆ ಕಂಟ್ರಾಕ್ಟ್ ಬೇಸಿಸಲ್ಲಿ ತೆಗೆದುಕೊಳ್ಳುತ್ತಾರೆ. ಹೆಲ್ಪರ್, ಕ್ಲೀನರ್, ಅಡುಗೆಯವರು, ರಿಸೆಪ್ಶನಿಸ್ಟ್ ಎಂದು ಮೂರು ಬಂಗಲೆಯಲ್ಲಿ ಒಟ್ಟು 20ರಷ್ಟು ಸಿಬಂದಿ ಇದ್ದಾರೆ.
ಸರಕಾರಿ ಅತಿಥಿ ಬಂಗಲೆಯನ್ನು ಪಿಡಬ್ಲ್ಯುಡಿ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತದೆ. ಮಂಗಳೂರಿನಲ್ಲಿ ಪಿಡಬ್ಲ್ಯುಡಿ ಜೆಇ ಆಗಿರುವ ಸಂಜೀವ ಎಂಬ ಅಧಿಕಾರಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಅಲ್ಲಿ ಕೊಠಡಿ ಬುಕ್ ಮಾಡಬೇಕಿದ್ದರೆ, ಇದೇ ಅಧಿಕಾರಿಯನ್ನು ಸಂಪರ್ಕಿಸಬೇಕು. ಆದರೆ, ಆ ಅಧಿಕಾರಿ ಮಾತ್ರ ಅಲ್ಲಿನ ಸ್ಥಿತಿ ಹೇಗಿದೆ ಎಂದು ನೋಡುವುದಕ್ಕೂ ತಲೆ ಹಾಕುವುದಿಲ್ಲ. ಸಿಬಂದಿ ಹೇಗಿದ್ದಾರೆ, ಕೆಲಸ ಮಾಡುತ್ತಿದ್ದಾರೆಯೇ, ಬದುಕಿದ್ದಾರೆಯೇ ಎಂದು ಕೂಡ ನೋಡಲು ಬರುವುದಿಲ್ಲವಂತೆ. ಕಳೆದ ಆರು ತಿಂಗಳಿಂದ ಸಂಬಳವನ್ನೇ ಕೊಡದೆ ಸತಾಯಿಸುತ್ತಿದ್ದಾರೆ. ತಿಂಗಳಿಗೆ ಹತ್ತು ಸಾವಿರ ರೂ. ವೇತನಕ್ಕೆ ಕೆಲಸ ಮಾಡುವ ಈ ಸಿಬಂದಿಯ ಕಷ್ಟ ಯಾರು ಕೇಳಬೇಕು ಎಂದು ಕಾಂಗ್ರೆಸ್ ಮುಖಂಡ ಕಳ್ಳಿಗೆ ತಾರನಾಥ ಶೆಟ್ಟಿ ಪ್ರಶ್ನೆ ಮಾಡುತ್ತಾರೆ.
ಹೇಳುವುದಕ್ಕೆ ಸರಕಾರಿ ಅತಿಥಿ ಬಂಗಲೆ. ಶಾಸಕರು, ಸಂಸದರು, ದೊಡ್ಡ ದೊಡ್ಡ ಅಧಿಕಾರಿಗಳು ಬಂದು ಉಳಿದುಕೊಳ್ಳುತ್ತಾರೆ. ಆದರೆ ಯಾರು ಕೂಡ ಅಲ್ಲಿನ ಸಿಬಂದಿಯ ಯೋಗ ಕ್ಷೇಮ ಕೇಳುವುದಿಲ್ಲ. ಶಾಸಕರಾದ್ರೂ ಅವರ ಕೈಗೆ ಒಂದಿಷ್ಟು ಇರಲಿ ಅಂತ ಭಕ್ಷೀಸನ್ನೂ ನೀಡುವುದಿಲ್ಲ. ಹಿಂದೆ ಜನಾರ್ದನ ಪೂಜಾರಿಗಳಿದ್ದ ಕಾಲದಲ್ಲಿ ಸಿಬಂದಿ ಕೈಗೂ ಬಿಡಿಗಾಸು ನೀಡುತ್ತಿದ್ದರು ಎಂದು ಸ್ಮರಿಸುತ್ತಾರೆ ಕಳ್ಳಿಗೆ ತಾರನಾಥ ಶೆಟ್ಟಿ. ಇದರ ಬಗ್ಗೆ ಕೇಳಲು ಜೆಇ ಸಂಜೀವ ಅವರಲ್ಲಿ ಕೇಳಲು ಫೋನ್ ಮಾಡಿದರೆ, ಆ ಮನುಷ್ಯ ಫೋನನ್ನೇ ಸ್ವೀಕರಿಸುತ್ತಿಲ್ಲ.
ಜಿಲ್ಲಾಧಿಕಾರಿ ರವಿಕುಮಾರ್ ಬಳಿ ಕೇಳಿದಾಗ, ತನಗೇನು ಸಮಸ್ಯೆ ಅರಿವಿಗೆ ಬಂದಿಲ್ಲ. ಕೂಡಲೇ ಸಂಬಂಧಪಟ್ಟವರಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರು, ವಿಪಕ್ಷದ ನಾಯಕರು, ಶಾಸಕರು ಎಲ್ಲರಾದಿಯಾಗಿ ವಿಐಪಿಗಳು ಬಂದು ಉಳಿದುಕೊಳ್ಳುತ್ತಾರೆ. ತಮಗೆ ಬೇಕಾದಾಗೆಲ್ಲ ಉಳಿದು ಎದ್ದು ಹೋಗುತ್ತಾರೆ. ಅಲ್ಲಿನ ಸಿಬಂದಿಯ ಅಳಲನ್ನು ಯಾಕೆ ಕೇಳುತ್ತಿಲ್ಲ. ಕೆಲವು ಸಿಬಂದಿ ಶಾಸಕರಲ್ಲಿಯೂ ತಮ್ಮ ಕಷ್ಟ ಹೇಳಿಕೊಂಡಿದ್ದಾರಂತೆ. ಕನಿಷ್ಠ ವೇತನವನ್ನೂ ನೀಡದೆ ಯಾಕೆ ಸತಾಯಿಸುತ್ತಿದ್ದಾರೆ ಎನ್ನುವುದು ಕಳ್ಳಿಗೆಯವರ ಪ್ರಶ್ನೆ.
ಪಿಡಬ್ಲ್ಯುಡಿ ಇಂಜಿನಿಯರ್ ಬಳಿ ಸಿಬಂದಿ ಕೇಳಿದರೆ, ನಾವು ನಮ್ಮ ಕೈಯಿಂದ ಹಣ ಕೊಡಬೇಕಷ್ಟೇ. ಸರಕಾರದಿಂದ ಹಣ ಬಂದಿಲ್ಲ ಎನ್ನುತ್ತಾರಂತೆ. ಸರಕಾರಿ ಅತಿಥಿ ಬಂಗಲೆ ಮತ್ತು ಪಿಡಬ್ಲ್ಯುಡಿ ಇಲಾಖೆಯ ಕಚೇರಿ ಇನ್ನಿತರ ವಹಿವಾಟುಗಳಿಗೆಂದು ಪ್ರತಿ ವರ್ಷ ಇಂತಿಷ್ಟು ಕೋಟಿ ಎಂದು ಅನುದಾನ ಸರಕಾರದಿಂದ ಬರುತ್ತದೆ. ಆ ಹಣವನ್ನು ಅಧಿಕಾರಿಗಳು ಇನ್ನಾವುದೋ ಬಿಲ್ ತೋರಿಸಿ ಪಾವತಿ ಮಾಡಿಕೊಂಡಿರುತ್ತಾರೆ. ಕೆಳಹಂತದ ಸಿಬಂದಿಗೆ ಇಲಾಖೆಯಿಂದಲೇ ಪಾವತಿ ಆಗಬೇಕು. ಆದರೆ ಇದನ್ನು ಅಧಿಕಾರಿ ಹುದ್ದೆಯಲ್ಲಿದ್ದವರು ಮಾಡದೆ ಬೇಕಾಬಿಟ್ಟಿ ವರ್ತಿಸುತ್ತಾರೆ. ಇದರಿಂದ ಕಷ್ಟ ಪಡುವುದು ತಳಮಟ್ಟದ ನೌಕರರು ಅನ್ನುವ ಅತಿಥಿ ಬಂಗಲೆಯದ್ದು. ಮಾರ್ಚ್ ಅಂತ್ಯಕ್ಕೆ ಆರು ತಿಂಗಳ ವೇತನ ಬರಬಹುದೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಸಿಬಂದಿ.
Mangalore Circuit House mess, employees suffer without salary from six months. More than 20 workers are facing serious issue. Headline Karnataka contacts Dc Ravi Kumar, but DC himself has no idea about it.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm