ಬ್ರೇಕಿಂಗ್ ನ್ಯೂಸ್
17-03-23 04:12 pm Mangalore Correspondent ಕರಾವಳಿ
ಮಂಗಳೂರು, ಮಾ.17: ಕಳೆದ ಬಾರಿ ಕಾಂಗ್ರೆಸ್ ರಾಜ್ಯ ನಾಯಕರು ಎಸ್ಡಿಪಿಐ ಜೊತೆಗೆ ಒಳಮೈತ್ರಿ ಮಾಡಿಕೊಂಡಿದ್ದರು ಎನ್ನುವ ಅಚ್ಚರಿಯ ಹೇಳಿಕೆಯನ್ನು ಎಸ್ಡಿಪಿಐ ನಾಯಕರು ನೀಡಿದ್ದಾರೆ. ಕಳೆದ ಬಾರಿ ಚುನಾವಣೆ ಹೊತ್ತಿಗೆ ಕಾಂಗ್ರೆಸಿನ ರಾಜ್ಯ ಮಟ್ಟದ ಹಿರಿಯ ತಲೆಗಳೇ ನಮ್ಮಲ್ಲಿ ಬಂದು ಕೆಲವು ಕ್ಷೇತ್ರಗಳಲ್ಲಿ ನೀವು ಸ್ಪರ್ಧಿಸಬಾರದು ಎಂದು ಅಂಗಲಾಚಿದ್ದರು ಎಂಬುದಾಗಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿಕೆ ನೀಡಿದ್ದು ಕಾಂಗ್ರೆಸ್ ನಾಯಕರನ್ನು ಇರಿಸು ಮುರಿಸಿಗೆ ನೂಕಿದೆ.
ಖಟ್ಟರ್ ಮುಸ್ಲಿಮರನ್ನೇ ಗುರಿಯಾಗಿಸ್ಕೊಂಡಿರುವ ಎಸ್ಡಿಪಿಐ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತಬ್ಯಾಂಕನ್ನು ಸೆಳೆಯಲು ಮುಂದಾಗಿದೆ. ಇದಕ್ಕಾಗಿ ಚುನಾವಣೆಗೆ ಮೂರು ತಿಂಗಳು ಇರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದೆ. ಬಂಟ್ವಾಳದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಯೆಂದು ಗುರುತಿಸ್ಕೊಂಡಿರುವ ಇಲ್ಯಾಸ್ ಮಹಮ್ಮದ್ ತುಂಬೆ ಸ್ಪರ್ಧಿಸುತ್ತಿದ್ದಾರೆ. ಈ ನಡುವೆ, ಹಿಂದಿನ ಬಾರಿ ಇದೇ ರೀತಿ ಚುನಾವಣಾ ಕಣಕ್ಕಿಳಿದು ಕೊನೆ ಕ್ಷಣದಲ್ಲಿ ಹಿಂಪಡೆದಿದ್ದೀರಲ್ಲಾ ಎಂಬ ಪ್ರಶ್ನೆಗೆ, ಇಲ್ಯಾಸ್ ತುಂಬೆ ಮಾರ್ಮಿಕ ಉತ್ತರವನ್ನೇ ನೀಡಿದ್ದಾರೆ.
2018ರ ಚುನಾವಣೆಯಲ್ಲಿ ಎಸ್ಡಿಪಿಐ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿ ನಡೆಸಿತ್ತು. ಆದರೆ ಕಾಂಗ್ರೆಸಿನ ಹಿರಿಯ ತಲೆಗಳು ಕೆಲವು ಕ್ಷೇತ್ರಗಳಲ್ಲಿ ನೀವು ಸ್ಪರ್ಧಿಸಬಾರದೆಂದು ಮಾತುಕತೆ ನಡೆಸಿದ್ದರು. ಇದರಿಂದಾಗಿ ಬಂಟ್ವಾಳದಲ್ಲಿ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದೆವು. ಈ ಬಾರಿ ಹಾಗೆ ಆಗೋದಿಲ್ಲ. ನಾವು ಆ ಚುನಾವಣೆಯಿಂದ ಒಂದಷ್ಟು ಬುದ್ಧಿ ಕಲಿತು ಪ್ರಬುದ್ಧರಾಗಿದ್ದೇವೆ ಎಂದು ಇಲ್ಯಾಸ್ ಹೇಳಿದ್ದಾರೆ. ಕಳೆದ ಬಾರಿ ಬಂಟ್ವಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಭಾರೀ ಅಂತರದಿಂದ ಸೋಲುವುದಕ್ಕೆ ಎಸ್ಡಿಪಿಐ ಬೆಂಬಲ ನೀಡಿದ್ದೂ ಕಾರಣವಾಗಿತ್ತು. ಕರಾವಳಿಯಲ್ಲಿ ಕೊಲೆ ಸರಣಿಗೆ ಕಾರಣ ಎಂದು ನೇರ ಆರೋಪಕ್ಕೆ ಗುರಿಯಾಗಿದ್ದ ಎಸ್ಡಿಪಿಐ ಚುನಾವಣೆಯಲ್ಲಿ ನೇರವಾಗಿ ಕಾಂಗ್ರೆಸ್ ಬೆಂಬಲಿಸಿದ್ದನ್ನು ಬಿಜೆಪಿ ನಾಯಕರು ಬೇರೆ ರೀತಿಯಲ್ಲಿ ಬಿಂಬಿಸಿದ್ದರು. ಇದರಿಂದ ಮತ್ತಷ್ಟು ಕೋಮು ಧ್ರುವೀಕರಣ ಆಗುವಂತಾಗಿ ಕಾಂಗ್ರೆಸ್ ಸೋಲಿನ ಅಂತರ ಹೆಚ್ಚಿತ್ತು ಎನ್ನಲಾಗಿತ್ತು.
ಕಾಂಗ್ರೆಸ್ ಗೆಲುವಿಗೆ ತೊಡಕಾಗುತ್ತಾ ಎಸ್ಡಿಪಿಐ
ಕರಾವಳಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಉಳ್ಳಾಲ, ಬಂಟ್ವಾಳ, ಮಂಗಳೂರು ಉತ್ತರ, ಪುತ್ತೂರು ಕ್ಷೇತ್ರಗಳಲ್ಲಿ ಎಸ್ಡಿಪಿಐ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಆದರೆ ಎಸ್ಡಿಪಿಐಗೆ ಬೆಂಬಲ ಇರುವುದು ಖಟ್ಟರ್ ಮುಸ್ಲಿಮರದ್ದು ಮಾತ್ರ. ಚುನಾವಣೆಯಲ್ಲಿ ಸ್ಪರ್ಧಿಸಿ ನಾಲ್ಕೈದು ಸಾವಿರ ಮುಸ್ಲಿಮ್ ಮತಗಳನ್ನು ಕಿತ್ತುಕೊಂಡರೂ, ಆ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಲು ಕಾಂಗ್ರೆಸ್ ತಯಾರಿಲ್ಲ. ಹೀಗಾಗಿ ಎಸ್ಡಿಪಿಐ ಜೊತೆಗೆ ನಿಲ್ಲೋದು ಅಂದರೆ, ಕಾಂಗ್ರೆಸಿಗೆ ನಷ್ಟವೇ ಅನ್ನೋದು ನಾಯಕರಿಗೂ ತಿಳಿದಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಲ್ಲೂ ಎಸ್ಡಿಪಿಐ ಪಾತ್ರವಿದೆ ಎಂದು ಎನ್ಐಐ ತನಿಖೆಯಲ್ಲಿ ತಿಳಿದುಬಂದಿತ್ತು. ಅಲ್ಲದೆ, ಎಸ್ಡಿಪಿಐ ಪ್ರಮುಖ ನಾಯಕರನ್ನೇ ಪ್ರಕರಣದಲ್ಲಿ ಬಂಧಿಸಿದೆ.
ಆದರೆ ಇವೆಲ್ಲದರ ಮಧ್ಯೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಾಯಕರೇ ಹಿಂದಿನ ಚುನಾವಣೆಯಲ್ಲಿ ನಮ್ಮ ಜೊತೆ ಒಳಮೈತ್ರಿ ಮಾಡಿಕೊಂಡಿದ್ದರು, ಆ ನಾಯಕರು ಯಾರ್ಯಾರು ಹೇಳಲಾಗದು ಎಂದು ಎಸ್ಡಿಪಿಐ ನಾಯಕರು ನೀಡಿರುವ ಹೇಳಿಕೆ ಕಾಂಗ್ರೆಸ್ ನಾಯಕರಲ್ಲೇ ಇರಿಸು ಮುರಿಸು ತರಿಸಿದೆ. ಇದರ ಜೊತೆಗೆ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ಎಸ್ಡಿಪಿಐ ಒಳ ಒಪ್ಪಂದ ಮಾತುಗಳೇ ಹಿನ್ನಡೆಗೆ ಕಾರಣವಾಗುತ್ತದೆ. ಎಸ್ಡಿಪಿಐ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಯಾವ ರೀತಿ ಹಿಮ್ಮೆಟ್ಟಿಸುತ್ತಾರೋ, ನಿರ್ಲಕ್ಷ್ಯ ಮಾಡುತ್ತಾರೋ ನೋಡಬೇಕಷ್ಟೇ.
#SDPI and #Congress are two sides of the same coin says SDPI #IlyasMohammed sparks controversy in #Mangalore #BreakingNews #bjpkarnataka pic.twitter.com/1ZXsFVPPwd
— Headline Karnataka (@hknewsonline) March 17, 2023
.@INCKarnataka &SDPI ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಭಾರತ, ಭಾರತೀಯತೆ, ಬಿಜೆಪಿಯೇ ಶತ್ರು.
— BJP Karnataka (@BJP4Karnataka) March 16, 2023
ಕಾಂಗ್ರೆಸ್-SDPI ಮೈತ್ರಿಯ ಬಗ್ಗೆ ಖುದ್ದು SDPI ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹೇಳಿದ್ದಾರೆ ಕೇಳಿ.
ಜನರ ಕಿವಿ ಮೇಲೆ ಹೂ ಇಡುವ ಕಾಲ ಮುಗಿದಿದೆ @DKShivakumarರವರೇ. ಸತ್ಯ ಹೆಚ್ಚುದಿನ ಮುಚ್ಚಿಡಲಾಗದು, ಅದು ಹೊರ ಬರಲೇಬೇಕು, ಬಂದಿದೆ. pic.twitter.com/sPs5F8vZv5
SDPI and Congress are two sides of the same coin says SDPI Ilyas Mohammed sparks controversy in Mangalore. The BJP Karnataka wing shared a video of SDPI National Secretary Mohammed Ilyas Thumbe and took a jibe at the Congress, saying "SDPI and Congress are two sides of the same coin. India, Indianness, and the BJP are enemies for both of them
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm