ಬ್ರೇಕಿಂಗ್ ನ್ಯೂಸ್
13-03-23 10:28 pm Mangalore Correspondent ಕರಾವಳಿ
ಉಳ್ಳಾಲ, ಮಾ.13 : ಉಳ್ಳಾಲ ದರ್ಗಾದ ನಿರ್ಗಮನ ಸಮಿತಿಯ ಬರೋಬ್ಬರಿ ಏಳು ವರುಷದ ಆಡಳಿತಾವಧಿ ಭ್ರಷ್ಟಾಚಾರದಿಂದ ಕೂಡಿದ್ದು, ಅಧಿಕಾರ ಹಸ್ತಾಂತರ ದಿನದಂದೇ ನಿರ್ಗಮಿತ ಅಧ್ಯಕ್ಷ ಅಬ್ದುಲ್ ರಶೀದ್ ಅವರು ದರ್ಗಾಕ್ಕೆ ವಾಣಿಜ್ಯ ಕಟ್ಟಡದ ಬಾಡಿಗೆ ರೂಪದಲ್ಲಿ ಬಂದ 1 ಲಕ್ಷ 500 ರೂಪಾಯಿಗಳನ್ನ ಮನೆಗೆ ಒಯ್ದಿರುವ ಬಗ್ಗೆ ನಮ್ಮಲ್ಲಿ ಇರುವ ರಶೀದಿಯೇ ಸಾಕ್ಷಿಯಾಗಿದ್ದು ಕಾನೂನು ತಜ್ಞರೊಂದಿಗೆ ಚರ್ಚಿಸಿ ಅವ್ಯವಹಾರದ ಬಗ್ಗೆ ಉನ್ನತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುತ್ತೇವೆಂದು ದರ್ಗಾದ ನೂತನ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಹೇಳಿದ್ದಾರೆ.
ಉಳ್ಳಾಲ ದರ್ಗಾದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ವಕ್ಫ್ ನೀತಿ ಉಲ್ಲಂಘಿಸಿ ದರ್ಗಾಕ್ಕೆ ಹೊಸ ಆಡಳಿತ ಸಮಿತಿ ರಚನೆ ಆಗಿದೆ ಎಂಬ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದ ಮಾತು ಸತ್ಯಕ್ಕೆ ದೂರವಾಗಿದ್ದು, ಉಳ್ಳಾಲ ಜುಮ್ಮಾ ಮಸೀದಿ ಮತ್ತು ಅಧೀನ ಸಂಸ್ಥೆಗಳ ಆಡಳಿತ ಸಮಿತಿಗೆ ವಕ್ಫ್ ಬೋರ್ಡ್ ಕಾನೂನು ಬದ್ಧವಾಗಿ ಚುನಾವಣೆ ನಡೆಸಿ ನೂತನ ಆಡಳಿತ ಸಮಿತಿ ರಚನೆ ಮಾಡಿ ಅಧಿಕಾರ ಹಸ್ತಾಂತರ ಮಾಡಿದೆ ಎಂದವರು ಹೇಳಿದರು.
ಅಧಿಕಾರ ಹಸ್ತಾಂತರ ಸಮಯದಲ್ಲಿ ಸಂಪ್ರದಾಯ ಪ್ರಕಾರ ಹಳೆ ಸಮಿತಿ ಸದಸ್ಯರೆಲ್ಲ ಹಾಜರಿದ್ದು ಅಧಿಕಾರ ಹಸ್ತಾಂತರ ನಡೆಯಬೇಕಿತ್ತು. ಆದರೆ ಮಾ.8 ರಂದು ವಕ್ಫ್ ಬೋರ್ಡ್ ಅಧಿಕಾರಿಗಳು ಚುನಾವಣೆಯಲ್ಲಿ ನೂತನವಾಗಿ ಆಯ್ಕೆ ಆದ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಆಡಳಿತದಲ್ಲಿದ್ದ ಸಮಿತಿಯ ಮೂವರು ಪದಾಧಿಕಾರಿಗಳು ಮಾತ್ರ ಹಾಜರಿದ್ದು, ಅಧ್ಯಕ್ಷ ಸಹಿತ ಉಳಿದವರು ಗೈರು ಆಗಿದ್ದರು. ಅಲ್ಲದೆ ಹೊಸ ಆಡಳಿತ ಸಮಿತಿಗೆ ಈ ಹಿಂದಿನ ಯಾವುದೇ ದಾಖಲೆ ಪತ್ರಗಳನ್ನೂ ನೀಡಿರಲಿಲ್ಲ. ಈ ವೇಳೆ ವಾಹನ ಹಾಗೂ ದರ್ಗಾಕ್ಕೆ ಸಂಬಂಧಪಟ್ಟ ಕೀಲಿ ಕೈ ನೀಡದೇ ಅನ್ಯಾಯ ಮಾಡಿದ್ದಾರೆ. ಚುನಾವಣೆ ದಿನ ದರ್ಗಾಕ್ಕೆ ಸಂಬಂಧಪಟ್ಟ ಕಡತಗಳನ್ನು ಅಪಹರಿಸಲು ಯತ್ನಿಸಿದಾಗ ಸ್ಥಳೀಯರೇ ಪತ್ತೆ ಹಚ್ಚಿ ವಕ್ಫ್ ಬೋರ್ಡ್ ಗೆ ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲಾ ಅವ್ಯವಹಾರ ಮಾಡಿದ ದರ್ಗಾದ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ನೇತೃತ್ವದ ಸಮಿತಿ ಸುದ್ದಿಗೋಷ್ಠಿ ಮೂಲಕ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಇವರು ನೀಡಿದ ಹೇಳಿಕೆಗಳು ನ್ಯಾಯಾಂಗ ನಿಂದನೆ, ಅಪರಾಧ ಆಗಿದೆ. ಇದರ ವಿರುದ್ಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದರ್ಗಾದ ನೂತನ ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ ಏಳು ವರ್ಷಗಳ ಕಾಲ ಅಧಿಕಾರದಲ್ಲಿದ್ದು ಸುಸಜ್ಜಿತ ಆಡಳಿತ ನೀಡದೇ ಕಾನೂನು ಬಾಹಿರವಾಗಿ ಕುರ್ಚಿಯಲ್ಲೇ ಕುಳಿತ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಅವರು ಸುದ್ದಿಗೋಷ್ಠಿ ನಡೆಸಿ ದರ್ಗಾ ಹಾಗೂ ವಕ್ಫ್ ಬೋರ್ಡ್ಗೆ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ಒಂದೇ ಒಂದು ಸಾಮಾನ್ಯ ಸಭೆ ಕರೆಯಲಿಲ್ಲ, ಬಜೆಟ್ ಮಂಡನೆ ಮಾಡಲಿಲ್ಲ. ಏಳು ವರ್ಷ ಕಳೆದರೂ ಹೊಸ ಆಡಳಿತ ರಚನೆಗೆ ಯಾವುದೇ ಪ್ರಯತ್ನ ಮಾಡದೇ ಚುನಾವಣೆಯನ್ನು ಕಾನೂನಿಗೆ ವಿರುದ್ಧ ಎಂದು ಅಪಪ್ರಚಾರ ಮಾಡಿ ಜನರ ನಡುವೆ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಆರಂಭದಲ್ಲಿ ಚುನಾವಣೆಗೆ ಬೆಂಬಲ ನೀಡಿದ್ದ ರಶೀದ್ ಹಾಗೂ ಪದಾಧಿಕಾರಿಗಳು ಗುರುತಿನ ಚೀಟಿ ಮಾಡಿಸಿದ್ದಾರೆ. ದರ್ಗಾ ಕಟ್ಟಡದಲ್ಲೇ ಇದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅಲ್ಲದೆ ವಕ್ಫ್ ಬೋರ್ಡ್ ಚುನಾವಣೆ ಘೋಷಣೆ ಮಾಡಿ ಸದಸ್ಯತನಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಇದಕ್ಕೆ ವಿರುದ್ಧವಾಗಿ ಹೆಚ್ಚಿನ ಕಾಲಾವಕಾಶ ಕೋರಿ ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ರಶೀದ್ ಬಳಗ ಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ವಕ್ಫ್ ಬೋರ್ಡ್ ನಿಯಮಾವಳಿ ಪರಿಶೀಲಿಸಿ ಅರ್ಜಿಯನ್ನು ತಿರಸ್ಕರಿಸಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಲ್ ಮುಕಚೇರಿ , ಉಪಾಧ್ಯಕ್ಷ ಯು.ಎಚ್.ಹಸೈನಾರ್, ಜೊತೆ ಕಾರ್ಯದರ್ಶಿ ಇಸಾಕ್, ಮುಸ್ತಫಾ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Mangalore Former Ullal darga president Rasheed alleges of corruption by new committee formed.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm