ಬ್ರೇಕಿಂಗ್ ನ್ಯೂಸ್
10-03-23 10:54 pm Mangalore Correspondent ಕರಾವಳಿ
ಮಂಗಳೂರು, ಮಾ.10 : ಕೂಳೂರು ನದಿ ಸೇತುವೆ ಕಾಮಗಾರಿ ಪ್ರಾರಂಭಗೊಂಡು ಮೂರು ವರ್ಷ ಕಳೆದಿದೆ. ಹಳೆ ಸೇತುವೆ ಸಮರ್ಥವಾಗಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ನಾಲ್ಕು ವರ್ಷ ದಾಟಿದೆ. ಮಳೆಗಾಲ ಸಮೀಪಿಸುತ್ತಿದ್ದು ಸೇತುವೆ ಕಾಮಗಾರಿಗೆ ನದಿಗೆ ಹಾಕಿರುವ ಭಾರೀ ಮಣ್ಣಿನಿಂದಾಗಿ ಕೂಳೂರು ನದಿ ಪಾತ್ರದ ಪ್ರದೇಶಕ್ಕೆ ಮಳೆ ನೀರು ನಗ್ಗುವ ಅಪಾಯ ಇದೆ. ಜೊತೆಗೆ, ಹಳೆ ಸೇತುವೆ ಕುಸಿಯುವ ಭೀತಿಯೂ ಇದೆ. ಹೀಗಾಗಿ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಪಂಜಿಮೊಗರು ವಲಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಕೂಳೂರು ಸೇತುವೆ ಕಾಮಗಾರಿ ಮೂರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಇದು ಮತ್ತೊಂದು ಪಂಪ್ವೆಲ್ ಆಗದಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಕೂಳೂರು ಸೇತುವೆ ಕಾಮಗಾರಿ ಬಗ್ಗೆ ಸ್ಥಳೀಯ ಶಾಸಕ ಭರತ್ ಶೆಟ್ಟಿಗಾಗಲಿ, ಸಂಸದರಿಗಾಗಲೀ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಈ ಕಾಮಗಾರಿಯ ಕಮಿಷನ್ ವಿಚಾರವಾಗಿ ಕಾಮಗಾರಿ ನಿಂತಿರಬಹುದೇ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಇದೆ. ಕೋಟಿ ಕೋಟಿ ಕಾಮಗಾರಿ ಬಗ್ಗೆ ಬ್ಯಾನರ್ ಹಾಕುವ ಶಾಸಕರ ಕಾಮಗಾರಿ ಎಲ್ಲಿ ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ. ಮಾತೆತ್ತಿದ್ದರೆ ಗುರುಪುರ ಸೇತುವೆ ಬಗ್ಗೆ ಮಾತನಾಡುವ ಇವರಿಗೆ ಅಪಾಯದ ಅಂಚಿನಲ್ಲಿರುವ ಕೂಳೂರು ಸೇತುವೆ ಬಗ್ಗೆ ಆಸಕ್ತಿ ಇಲ್ಲದಿರುವುದು ವಿಪರ್ಯಾಸ ಎಂದರು.

ಉಡುಪಿ, ಮಂಗಳೂರು ಸಂಪರ್ಕದ ಅತೀ ವಾಹನ ದಟ್ಟಣೆ ಇರುವ ಕೂಳೂರು ಸೇತುವೆ ಕುಸಿದರೆ ಉಂಟಾಗುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ ಸ್ಥಳೀಯ ಶಾಸಕರಿಗೆ ಕಾಮಗಾರಿ ನಡೆಸುವ ಆಸಕ್ತಿ ಇಲ್ಲ. ಸುರತ್ಕಲ್ ಟೋಲ್ ಬಂದ್ ಮಾಡಿ ನೂರು ದಿನಗಳು ಕಳೆದರೂ ಅಲ್ಲಿ ಟೋಲ್ ಗೂಡುಗಳು ಅಸ್ಥಿಪಂಜರದ ರೀತಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಪಂಜಿಮೊಗರು ಘಟಕದ ಮುಖಂಡರಾದ ಅನಿಲ್, ಪ್ರಮೀಳಾ, ಸೌಮ್ಯ, ಬಾವು, ಶೆರೀಫ್, ಬಶೀರ್, ಸಂತೋಷ್, ಕಸ್ತೂರಿ, ಫಾತಿಮಾ ಖಲೀಲ್ , ಡಿವೈಎಫ್ಐ ನ ಶ್ರೀನಾಥ್ ಕುಲಾಲ್, ಮಕ್ಸೂದ್ ಕಾನ, ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ ಸಾಮಾಜಿಕ ಮುಂದಾಳುಗಳಾದ ಕನಕದಾಸ್, ಹನೀಫ್ ಕೂಳೂರು ಮತ್ತಿತರರು ಭಾಗವಹಿಸಿದ್ದರು
Mangalore Dyfi protest over delay by NHAI to complete Kuluru bridge.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm