ಬ್ರೇಕಿಂಗ್ ನ್ಯೂಸ್
09-03-23 03:33 pm Mangalore Correspondent ಕರಾವಳಿ
ಮಂಗಳೂರು, ಮಾ.9: ಬಿಹಾರ ರಾಜಧಾನಿ ಪಾಟ್ನಾದ ಫುಲ್ವಾರಿ ಶರೀಫ್ ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಕರ್ನಾಟಕ ಮತ್ತು ಕೇರಳದಲ್ಲಿ ತನಿಖೆ ಮುಂದುವರಿಸಿದ್ದಾರೆ. ಎರಡು ವರ್ಷಗಳ ಹಿಂದೆಯೇ ಪಿಎಫ್ಐ ಮತ್ತು ಭಯೋತ್ಪಾದಕ ಚಟುವಟಿಕೆಗೆ ಹವಾಲಾ ಹಣದ ರವಾನೆ ಆಗುತ್ತಿರುವ ಬಗ್ಗೆ ತನಿಖೆ ನಡೆದಿತ್ತು.
ಇದೀಗ ಬಂಟ್ವಾಳ, ಮಂಗಳೂರು, ಕಾಸರಗೋಡು ಭಾಗದಿಂದಲೇ 25 ಕೋಟಿಗೂ ಹೆಚ್ಚು ಹಣ ರವಾನೆ ಆಗಿರುವ ಬಗ್ಗೆ ಶಂಕೆ ಮೂಡಿದ್ದು ಅಧಿಕಾರಿಗಳು ಖಚಿತ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮಾ.5ರಂದು ಬಂಟ್ವಾಳ, ಪುತ್ತೂರು ಮತ್ತು ಮಂಜೇಶ್ವರದ ಕುಂಜತ್ತೂರಿನಿಂದ ಐವರು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅದರಲ್ಲಿ ಮಹಮ್ಮದ್ ಸಿನಾನ್ ಮತ್ತು ನವಾಜ್ ಪ್ರಮುಖರಾಗಿದ್ದು, ವಿದೇಶದಿಂದ ರವಾನೆಯಾಗುತ್ತಿದ್ದ ನಗದು ಹಣವನ್ನು ಬೇರೆ ಬೇರೆ ಯುವಕರಿಗೆ ತಲುಪಿಸಿ ಭಯೋತ್ಪಾದಕರ ಬೇನಾಮಿ ಖಾತೆಗಳಿಗೆ ರವಾನೆ ಮಾಡುತ್ತಿದ್ದರು. ಅದಕ್ಕಾಗಿ ನಿರ್ದಿಷ್ಟ ಕಮಿಷನ್ ಪಡೆಯುತ್ತಿದ್ದರು.
ಇದೊಂದು ಬಹುರಾಜ್ಯ ಹವಾಲಾ ನೆಟ್ವರ್ಕ್ ಆಗಿದ್ದು, ಪಿಎಫ್ಎ ಸಂಘಟನೆಯ ನಾಯಕರು ಮತ್ತು ನಿರ್ದಿಷ್ಟ ಖಾತೆಗಳಿಗೆ ಹಣವನ್ನು ರವಾನೆ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹವಾಲಾ ನೆಟ್ವರ್ಕ್ ಜಾಲದ ಪ್ರಮುಖ ಬೇರು ಕರಾವಳಿಯಲ್ಲೇ ಇರುವುದನ್ನು ಪತ್ತೆ ಮಾಡಿದ್ದಾರೆ. ಇದಲ್ಲದೆ, ಇವರು ಕೆಲವು ನಿರ್ದಿಷ್ಟ ಶಂಕಿತ ಭಯೋತ್ಪಾದಕರ ಬ್ಯಾಂಕ್ ಖಾತೆಗಳಿಗೆ ಹಣವನ್ನು ರವಾನೆ ಮಾಡುತ್ತಿದ್ದರು. ಬಿಹಾರದ ಫುಲ್ವಾರಿ ಶರೀಫ್ ಹಾಗೂ ಮೋತಿಹಾರಿ ಪ್ರದೇಶಗಳಲ್ಲಿ ಪಿಎಫ್ಐ ಕಾರ್ಯಕರ್ತರು ಗುಪ್ತ ಚಟುವಟಿಕೆ ನಡೆಸುತ್ತಿದ್ದರು. ಅದೇ ವೇಳೆ, ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಗಳನ್ನು ಕೊಲ್ಲಲು ಸಂಚು ನಡೆದಿತ್ತು. ಇದಕ್ಕಾಗಿ ಮದ್ದುಗುಂಡು, ಬಂದೂಕು ರೆಡಿ ಮಾಡಿಕೊಂಡಿದ್ದನ್ನು ಬಿಹಾರದ ಭಯೋತ್ಪಾದನಾ ನಿಗ್ರಹ ದಳ ಪತ್ತೆ ಮಾಡಿತ್ತು.
ಇವರ ಹಣದ ಮೂಲದ ಬಗ್ಗೆ ಕಣ್ಣಿಟ್ಟಿದ್ದ ಎನ್ಐಎ ಅಧಿಕಾರಿಗಳು ಗಲ್ಫ್ ರಾಷ್ಟ್ರಗಳಲ್ಲಿ ಫಂಡಿಂಗ್ ಆಗುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಕರಾವಳಿಯಿಂದ ಹೋಗಿ ಗಲ್ಫ್ ರಾಷ್ಟ್ರದಲ್ಲಿ ನೆಲೆಸಿದವರೇ ಈ ರೀತಿಯ ಕೃತ್ಯಗಳಿಗೆ ಅಕ್ರಮ ಹಣ ರವಾನೆ ಮಾಡುತ್ತಿದ್ದಾರೆ ಎನ್ನುವುದನ್ನೂ ಪತ್ತೆ ಮಾಡಿದ್ದಾರೆ. ಹೀಗಾಗಿ ಎನ್ಐಎ ಅಧಿಕಾರಿಗಳು ಈ ಭಾಗದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ. ಬೇರೆ ಬೇರೆ ಖಾತೆಗಳ ಮೂಲಕ ಆರೋಪಿಗಳು ಹಣವನ್ನು ಭಯೋತ್ಪಾದಕರ ಖಾತೆಗಳಿಗೆ ಹಾಕಿರುವುದು ತನಿಖೆಯಲ್ಲಿ ಕಂಡುಬಂದಿದ್ದು ಆರೋಪಿಗಳು ಬಾಯ್ಬಿಟ್ಟರೆ ಇನ್ನಷ್ಟು ಮಂದಿ ಅಪಾಯಕ್ಕೀಡಾಗುವ ಸಾಧ್ಯತೆಯಿದೆ.
NIA arrest over hawala case, 25 crores transferred from Mangalore suspected. The National Investigation Agency (NIA) arrested five hawala operatives from Dakshina Kannada in Karnataka and Kasargod in Kerala in the Phulwari Sharif PFI case.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm