ಬ್ರೇಕಿಂಗ್ ನ್ಯೂಸ್
07-03-23 09:13 pm Mangalore Correspondent ಕರಾವಳಿ
ಮಂಗಳೂರು, ಮಾ.7: ಸುಶಿಕ್ಷಿತರ ನಾಡು ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಮತ್ತೊಂದು ಕರ್ಮಕಾಂಡ ಹೊರಬಂದಿದೆ. ಬಲ್ಮಠದಲ್ಲಿರುವ ಸಿಎಸ್ಐ ಬಿಷಪ್ ಹೌಸ್ ನಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಚರ್ಚ್ ಪಾದ್ರಿಗಳೇ ಲೈಂಗಿಕವಾಗಿ ಕಿರುಕುಳ ಕೊಟ್ಟು ಬೀದಿಗೆ ತಳ್ಳಿದ ಘಟನೆ ಬೆಳಕಿಗೆ ಬಂದಿದ್ದು, ಇಬ್ಬರು ಚರ್ಚ್ ಪ್ರಮುಖರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಮಂಗಳೂರಿನ ಸಿಎಸ್ಐ ವಿಭಾಗದ ಚರ್ಚ್ ಗಳ ಮುಖ್ಯಸ್ಥ ಸ್ಥಾನದಲ್ಲಿರುವ ಬಲ್ಮಠದ ಬಿಷಪ್ ಹೌಸ್ ನಲ್ಲಿ ಹತ್ತು ವರ್ಷಗಳಿಂದ ಸೆಕ್ರಟರಿಯಾಗಿ ಕೆಲಸಕ್ಕಿದ್ದ ಮಹಿಳೆಗೆ ಚರ್ಚ್ ಪಾದ್ರಿಗಳೇ ಲೈಂಗಿಕ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಆಕೆ ಮದುವೆಯಾಗಿ ವಿಚ್ಛೇದಿತ ಮಹಿಳೆಯಾಗಿದ್ದು, ಬಿಷಪ್ ಹೌಸ್ ನಲ್ಲಿ ಹತ್ತು ವರ್ಷಗಳಿಂದ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಳೆದ ಜೂನ್ ತಿಂಗಳಿನಿಂದ ಮಹಿಳೆಯನ್ನು ಕೆಲಸದಿಂದ ಬಿಟ್ಟು ಹೋಗುವಂತೆ ಬಿಷಪ್ ಮತ್ತು ಅಲ್ಲಿರುವ ಅಧಿಕಾರಸ್ಥರು ಒತ್ತಡ ಹೇರಿದ್ದಾರೆಂದು ಆರೋಪಿಸಲಾಗಿದೆ. ಇದಲ್ಲದೆ, ಮಹಿಳೆ ಕೆಲಸ ಮಾಡುತ್ತಿದ್ದ ಬಿಷಪ್ ಸೆಕ್ರಟರಿ ಕಚೇರಿಗೆ ಬಲವಂತದಿಂದ ಬೀಗ ಹಾಕಲಾಗಿದ್ದು ಮಹಿಳೆ ಕಳೆದ 200 ದಿನಗಳಿಂದ ಕಚೇರಿಯ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಸರಗೋಡು ಮೂಲದ ವಿನ್ಸೆಂಟ್ ಪಾಲನ್ ಮತ್ತು ಮಂಗಳೂರಿನ ಚರ್ಚ್ ಪಾದ್ರಿ ನೋಯಲ್ ಕರ್ಕಡ ಎಂಬಿಬ್ಬರು ಸೇರಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.


ಈ ಬಗ್ಗೆ ಸಿಎಸ್ಐ ಬಿಷಪ್ ಅವರಿಗೆ ಮಹಿಳೆ ದೂರು ನೀಡಿದ್ದರು. ಆದರೆ ಬಿಷಪ್ಪರು ಆರೋಪಿಗಳ ಪರವಾಗಿಯೇ ವಕಾಲತ್ತು ನಡೆಸುತ್ತಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ಅಲ್ಲದೆ, ಈ ಹಿಂದೆ ಮಂಗಳೂರು ಪೊಲೀಸರಿಗೆ ದೂರು ನೀಡಲು ಹೋಗಿದ್ದರೂ, ಅದನ್ನು ಸ್ವೀಕರಿಸಲು ಪೊಲೀಸರು ರೆಡಿ ಇರಲಿಲ್ವಂತೆ. ಹೀಗಾಗಿ ಬಿಷಪ್ ಸೆಕ್ರಟರಿ ಕಚೇರಿಯ ಹೊರಗಡೆ ಕುಳಿತುಕೊಂಡೇ ಮಾನಸಿಕ ವೇದನೆ ಅನುಭವಿಸಿದ್ದಾರೆ. ಮಹಿಳೆಯನ್ನು ವಿನ್ಸೆಂಟ್ ಪಾಲನ್ ಮತ್ತು ನೋಯಲ್ ಕರ್ಕಡ ಎಂಬವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಪೀಡಿಸಿದ್ದರು. ಅಲ್ಲದೆ, ಹತ್ತು ವರ್ಷಗಳಿಂದ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದರೂ, ಒಂದು ವರ್ಷದಿಂದ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಹೊರಿಸಿ ತನ್ನನ್ನು ಕೆಲಸದಲ್ಲಿ ಇರದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.


ವಿನ್ಸೆಂಟ್ ಪಾಲನ್ ಮಂಗಳೂರು ವಲಯದ ಸಿಎಸ್ಐ ಬಿಷಪ್ ವ್ಯಾಪ್ತಿಯಲ್ಲಿ ಚುನಾಯಿತ ಪ್ರತಿನಿಧಿಯಾಗಿದ್ದು, ಹತ್ತು ಜಿಲ್ಲೆಗಳಲ್ಲಿ ಇರುವ ನೂರೈವತ್ತಕ್ಕೂ ಹೆಚ್ಚು ಚರ್ಚ್ ಆಡಳಿತಕ್ಕೆ ಉಸ್ತುವಾರಿ ಹೊಂದಿದ್ದಾನೆ. ತನಗಾದ ಕಿರುಕುಳದ ಬಗ್ಗೆ ತಿರುವನಂತಪುರದ ಬಿಷಪರಿಗೆ ದೂರು ನೀಡಿದ್ದರೂ, ವಿನ್ಸಂಟ್ ಪಾಲನ್ ಅಲ್ಲಿಯೂ ಕೈಯಾಡಿಸಿದ್ದಾನೆ. ತನ್ನ ಬಗ್ಗೆಯೇ ಏನೆಲ್ಲಾ ಆರೋಪ ಹೊರಿಸಿ ತೇಜೋವಧೆ ಮಾಡಿದ್ದಾನೆಂದು ಮಹಿಳೆ ತಿಳಿಸಿದ್ದಾರೆ. ಇನ್ನೊಬ್ಬ ಆರೋಪಿ ನೋಯಲ್ ಕರ್ಕಡ ಎನ್ನುವ ವ್ಯಕ್ತಿ ಮಂಗಳೂರಿನ ನೆಹರು ಮೈದಾನ ಬಳಿಯ ಚರ್ಚ್ ನಲ್ಲಿ ಪಾದ್ರಿ ಆಗಿದ್ದಾನೆ. 15 ದಿನಗಳ ಹಿಂದೆ ಮೈಸೂರಿನ ಒಡನಾಡಿ ಸಂಸ್ಥೆಯವರನ್ನು ಮಹಿಳೆ ಸಂಪರ್ಕಿಸಿದ್ದು ಅದರ ಮುಖ್ಯಸ್ಥ ಸ್ಟ್ಯಾನ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ, ಮಂಗಳವಾರ ಮಂಗಳೂರಿನ ಮಹಿಳಾ ಠಾಣೆಗೆ ತೆರಳಿ ಪೊಲೀಸ್ ದೂರು ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ.
Mangalore Balmatta CSI Bishop secretary alleges of sexual and mental harassment by Vincent Palanna who is the treasurer of CSI Diocesan office in Balmatta and Rev Fr Noel P Karkada who is a priest at CSI Anglican St Paul’s Church at Hampankatta in Mangalore. The woman has sought help from Stanly Kv , Mysore who is the Founder Director at Odanadi Seva Samsthe. A complaint has been filed at Woman police station in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm