ಬ್ರೇಕಿಂಗ್ ನ್ಯೂಸ್
27-02-23 10:58 pm Mangaluru Correspondent ಕರಾವಳಿ
ಮಂಗಳೂರು, ಫೆ.27: ಐತಿಹಾಸಿಕ ಉಳ್ಳಾಲ ದರ್ಗಾ ಕಮಿಟಿಯಲ್ಲಿ ಎಂಟು ವರ್ಷಗಳ ಹೋರಾಟದ ಬಳಿಕ ಎಸ್ಸೆಸ್ಸೆಎಫ್ ಕಡೆಯವರು ಅಧಿಕಾರ ಹಿಡಿದಿದ್ದಾರೆ. ಫೆ.25ರಂದು ಉಳ್ಳಾಲ ದರ್ಗಾ ಕಮಿಟಿಗೆ ಚುನಾವಣೆ ನಡೆದಿದ್ದು, ಎಲ್ಲ 55 ಸ್ಥಾನಗಳಿಗೂ ವಕ್ಫ್ ಕಮಿಟಿ ಅಧ್ಯಕ್ಷ ಶಾಫಿ ಸಾದಿ ಪರವಾಗಿರುವ ಎಸ್ಸೆಸ್ಸೆಫ್ ಸಂಘಟನೆಯ ಸದಸ್ಯರು ಆಯ್ಕೆಯಾಗಿದ್ದಾರೆ.
ಉಳ್ಳಾಲ ದರ್ಗಾದಲ್ಲಿ ಎಂಟು ವರ್ಷಗಳಿಂದ ಚುನಾವಣೆ ನಡೆಯದೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಗೆ ಸೇರಿದ ಅಬ್ದುಲ್ ರಶೀದ್ ಹಾಜಿ ಮತ್ತು ಇತರರು ಆಡಳಿತ ನಡೆಸುತ್ತಿದ್ದರು. ಇವರ ಆಡಳಿತದಲ್ಲಿ ಭಾರೀ ಅವ್ಯವಹಾರ ಆಗಿದೆಯೆಂದು ವಿರೋಧಿ ಬಣ ಆರೋಪಿಸಿತ್ತು. ಈ ಬಗ್ಗೆ ವಕ್ಫ್ ಕಮಿಟಿಗೂ ದೂರು ನೀಡಲಾಗಿತ್ತು. ಈ ನಡುವೆ, ವಕ್ಫ್ ಕಮಿಟಿಯ ಬೈಲಾ ಪ್ರಕಾರ ಚುನಾವಣೆ ನಡೆಸಬೇಕು ಎಂದು ವಕ್ಫ್ ಇಲಾಖೆಯಿಂದ ಉಳ್ಳಾಲ ದರ್ಗಾ ಆಡಳಿತಕ್ಕೆ ನೋಟೀಸ್ ಮಾಡಲಾಗಿತ್ತು. ಆದರೆ, ಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಮತ್ತು ವಕ್ಫ್ ಕಮಿಟಿಯ ಬೈಲಾವನ್ನು ವಿರೋಧಿಸಿ ರಶೀದ್ ಹಾಜಿಯ ತಂಡ ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿತ್ತು. ಇತ್ತೀಚೆಗೆ, ಹೈಕೋರ್ಟಿನಲ್ಲಿದ್ದ ತಡೆ ತೆರವಾಗಿದ್ದು, ವಕ್ಫ್ ಇಲಾಖೆಯ ಬೈಲಾವನ್ನು ಹೈಕೋರ್ಟ್ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಕ್ಫ್ ಇಲಾಖೆಯಿಂದ ಚುನಾವಣಾಧಿಕಾರಿಯನ್ನು ನೇಮಿಸಿ, ಚುನಾವಣೆಗೆ ತಯಾರಿ ನಡೆಸಲಾಗಿತ್ತು. ಹೊಸ ಮತದಾರ ಪಟ್ಟಿಯನ್ನು ಮಾಡಿ, ಉಳ್ಳಾಲ ದರ್ಗಾ ವ್ಯಾಪ್ತಿಯ ಐದು ವಿಭಾಗದಲ್ಲಿ ತಲಾ 11 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಒಂಬತ್ತುಕೆರೆಯ ಶಾಲೆಯಲ್ಲಿ ಫೆ.25ರಂದು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಚುನಾವಣೆಗೆ 80 ಮಂದಿ ಸ್ಪರ್ಧಿಸಿದ್ದು 55 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಅಬ್ದುಲ್ ರಶೀದ್ ಅವರಲ್ಲಿ ಕೇಳಿದಾಗ, ಇಡೀ ಚುನಾವಣೆ ಪ್ರಕ್ರಿಯೆಯೇ ಅಕ್ರಮ. ಚುನಾವಣೆಗೆ ಕಾಲಾವಕಾಶ ಕೇಳಿದ್ದೆವು. ಆದರೆ ನಮ್ಮ ಮನವಿಗೆ ಒಪ್ಪದೆ ತರಾತುರಿಯಲ್ಲಿ 3056 ಮಂದಿ ಮತದಾರರನ್ನು ಹೊಸತಾಗಿ ನೋಂದಣಿ ಮಾಡಿ, ಚುನಾವಣೆ ನಡೆಸಲಾಗಿದೆ. ಈ ರೀತಿ ಚುನಾವಣೆ ನಡೆಸಿರುವುದು ಅಕ್ಷಮ್ಯ, ಅಧಿಕಾರದ ದುರುಪಯೋಗ ಎಂದು ಹೇಳಿದ್ದಾರೆ.
ಬಿಜೆಪಿ ಹೆಸರಲ್ಲಿ ಕಾಂಗ್ರೆಸಿಗರ ಆಡಳಿತ
ನಮ್ಮ ಕಮಿಟಿಯನ್ನು ಸ್ವಯಂಘೋಷಿತ ಕಮಿಟಿಯೆಂದು ದೂರುತ್ತಾರೆ. ಆದರೆ, 2022ರ ಫೆಬ್ರವರಿಯಲ್ಲಿ ನಡೆದ ಉಳ್ಳಾಲ ದರ್ಗಾ ಉರೂಸಿಗೆ ಶಾಫಿ ಸಾದಿಯವರು ಬಂದಿದ್ದರು. ಇಲ್ಲಿನದ್ದು ಅತ್ಯುತ್ತಮ ಆಡಳಿತ ಎಂದು ಕೊಂಡಾಡಿದ್ದರ ದಾಖಲೆ ನಮ್ಮಲ್ಲಿದೆ. ಅಲ್ಲದೆ, ವಕ್ಫ್ ಇಲಾಖೆಯಿಂದ ಒಂದು ಕೋಟಿ ರೂಪಾಯಿ ಅನುದಾನ ನೀಡಿದ್ದರು. ನಮ್ಮದು ಆಡಳಿತ ಸರಿಯಿಲ್ಲ ಎಂದಾದಲ್ಲಿ ಅನುದಾನ ನೀಡುತ್ತಿದ್ದರೇ.. ಈಗ ಬಿಜೆಪಿ ಹೆಸರಲ್ಲಿ ಕಾಂಗ್ರೆಸಿನಲ್ಲಿದ್ದ ಜಮೀರ್ ಖಾನ್, ತನ್ವೀರ್ ಸೇಠ್ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ, ಚುನಾವಣೆ ನಡೆದ ಮರುದಿನವೇ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿಯವರು ದರ್ಗಾದ ಕಚೇರಿಯಿಂದ ದಾಖಲೆ ಪತ್ರಗಳನ್ನು ಕದ್ದೊಯ್ದಿದ್ದಾರೆಂದು ಆರೋಪ ಕೇಳಿಬಂದಿದೆ. ದಾಖಲೆ ಪುಸ್ತಕಗಳನ್ನು ಒಯ್ಯುತ್ತಿದ್ದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದಾಖಲೆಗಳನ್ನು ಪಡೆದು ತಹಶೀಲ್ದಾರ್ ವಶಕ್ಕೆ ಒಪ್ಪಿಸಿದ್ದಾರೆ.
ನಮ್ಮದು ಅಕ್ರಮ ಅಲ್ಲ ಎನ್ನಲು ದಾಖಲೆ ಬೇಕಲ್ಲ..
ಈ ಬಗ್ಗೆ ಅಬ್ದುಲ್ ರಶೀದ್ ಅವರಲ್ಲಿ ಕೇಳಿದಾಗ, ನಮ್ಮಲ್ಲಿದ್ದ ದಾಖಲೆಯನ್ನು ನಾವು ಒಯ್ದಿದ್ದೇವೆ. ನಮ್ಮ ಆಡಳಿತ ಅಕ್ರಮ ಅಲ್ಲ ಎಂಬುದನ್ನು ತೋರಿಸಲು ಅಕೌಂಟ್ ಪುಸ್ತಕ, ಸೆನ್ಸಸ್ ಪುಸ್ತಕ ಬೇಕಲ್ಲವೇ. ಅದನ್ನು ನಮ್ಮ ಕಾರಿನ ಚಾಲಕ ಹಿಡಿದುಕೊಂಡು ಹೋಗುತ್ತಿದ್ದಾಗ ಯಾರೋ ಹಿಂಬಾಲಿಸಿ ಬಂದು ಅಡ್ಡಹಾಕಿ ಪೊಲೀಸರಿಗೆ ಕೊಡಿಸಿದ್ದಾರೆ. ನಾವೇನು ಅಕ್ರಮ ಮಾಡಿಲ್ಲ. ನಮ್ಮ ಪ್ರಕಾರ, ಉಳ್ಳಾಲದಲ್ಲಿ 22 ಸಾವಿರ ಮತದಾರರಿದ್ದಾರೆ. ಇವರು ಕೆಲವರನ್ನು ಮಾತ್ರ ಸೇರಿಸಿ, ಚುನಾವಣೆ ನಡೆಸಿದ್ದು ಅಕ್ರಮ ಅಲ್ಲವೇ ಎಂದು ಕಿಡಿಕಾರಿದ್ದಾರೆ. ವಕ್ಫ್ ಕಮಿಟಿಯಿಂದ ನಡೆದಿರುವ ಚುನಾವಣೆಯನ್ನು ಮತ್ತೆ ಅಬ್ದುಲ್ ರಶೀದ್ ಹಾಜಿ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದು, ಫೆ.28ರಂದು ವಿಚಾರಣೆ ಇದೆ. ಆಡಳಿತಕ್ಕೆ ಮತ್ತೆ ತಡೆಯಾಜ್ಞೆ ಬೀಳುತ್ತಾ ಅನ್ನುವ ಶಂಕೆಯೂ ಇದೆ.
ನಿಯಮದಂತೆ ಚುನಾವಣೆ ನಡೆಸಿದ್ದೇವೆ
ಈ ಬಗ್ಗೆ ವಕ್ಫ್ ಇಲಾಖೆಯ ಚುನಾವಣಾಧಿಕಾರಿ ಸೈಯದ್ ಮಂಜುಂ ಪಾಷ ಅವರಲ್ಲಿ ಕೇಳಿದಾಗ, ನಾವು ಚುನಾವಣೆ ನಡೆಸಿ, ಅದರ ವರದಿಯನ್ನು ರಾಜ್ಯ ಕಮಿಟಿಗೆ ಅನುಮೋದನೆಗಾಗಿ ಕಳುಹಿಸಿದ್ದೇವೆ. ಅದು ಬಂದ ಕೂಡಲೇ ಮುಂದಿನ ವಾರ ಸಭೆ ಕರೆದು ಅಧ್ಯಕ್ಷ, ಕಾರ್ಯದರ್ಶಿ ಇನ್ನಿತರ ಪದಾಧಿಕಾರಿಗಳನ್ನು ಮಾಡುತ್ತೇವೆ. ಇಲ್ಲಿನ ಬಣದ ವಿಚಾರದ ಬಗ್ಗೆ ನಮಗೇನು ತಿಳಿದಿಲ್ಲ ಎಂದರು. 2012ರಲ್ಲಿ ವಕ್ಫ್ ಕಮಿಟಿಗೆ ನಿಯಮಾವಳಿ ಆಗಿದ್ದು, ಅದರ ಪ್ರಕಾರವೇ ವಕ್ಫ್ ಆಸ್ತಿಯ ನಿರ್ವಹಣೆ ಆಗಬೇಕು. ನಿಯಮದ ಪ್ರಕಾರ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕು ಎಂದು ಹೇಳಿದರು. ರಶೀದ್ ಹಾಜಿ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿರುವುದನ್ನು ಕೇಳಿದಾಗ, ನಮಗೇನು ಅದರ ಮಾಹಿತಿಯಿಲ್ಲ. ಕೋರ್ಟಿನಲ್ಲಿ ದಾವೆ ಹೂಡಿದರೆ ನಮಗೆ ನೋಟೀಸ್ ಬರುತ್ತದೆ ಎಂದರು.
ಕರಾವಳಿಯಲ್ಲಿ ಎಸ್ಸೆಸ್ಸೆಫ್ ಮತ್ತು ಎಸ್ ಕೆಎಸ್ಸೆಸ್ಸೆಫ್ ಎಂಬ ಎರಡು ಬಣಗಳಿವೆ. ಇವೆರಡೂ ಕೇರಳದ ಎಪಿ ಉಸ್ತಾದ್ ಮತ್ತು ಇಕೆ ಮುಸ್ಲಿಯಾರ್ ಸಂಸ್ಥಾಪಿತ ಪ್ರತ್ಯೇಕ ಸಂಘಟನೆಗಳು. ಎರಡೂ ಸುನ್ನಿಯದ್ದೇ ಸಂಘಟನೆ ಆಗಿದ್ದರೂ, ಕೆಲವು ವಿಚಾರಗಳಲ್ಲಿ ಭೇದ ಹೊಂದಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಎಸ್ಸೆಸ್ಸೆಫ್ ಸಂಘಟನೆಯ ಸದಸ್ಯರು ಮಂಗಳೂರಿನ ಹೆಚ್ಚಿನ ದರ್ಗಾ ಕಮಿಟಿಗಳಲ್ಲಿ ಹೆಚ್ಚುತ್ತಿದ್ದಾರೆ.
Mangalore Ullal Darga sudden elections by waqf board, SSF bags power, Haji Abdul Rasheed moves to court. It has been alleged that Abdul Rasheed dumped all the important accounting records of the Darga and was transporting them illegally after which SSF members caught the Auto Driver red-handed at Kumpala and filed a police complaint at the ullal police station.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 10:50 pm
Mangalore Correspondent
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
03-07-25 11:03 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm
Massive Scam, Mangalore City Corporation, Fak...
02-07-25 12:24 pm