ಬ್ರೇಕಿಂಗ್ ನ್ಯೂಸ್
24-02-23 11:09 pm Mangaluru Correspondent ಕರಾವಳಿ
ಮಂಗಳೂರು, ಫೆ.24: ಪ್ರಸಿದ್ಧ ಅನಿವಾಸಿ ಉದ್ಯಮಿ, ಕೊಡುಗೈ ದಾನಿ, ಸಮಾಜಸೇವಕ ಡಾ.ರೊನಾಲ್ಡ್ ಕೊಲಾಸೋ ಅವರನ್ನು ಮಂಗಳೂರಿನ ನಾಗರಿಕರ ಪರವಾಗಿ ಅಭಿಮಾನಿಗಳು, ಹಿತೈಷಿಗಳು ಅದ್ದೂರಿಯಾಗಿ ನಾಗರಿಕ ಸಂಮಾನ ನೆರವೇರಿಸಿದ್ದಾರೆ.
ನಗರದ ಪಂಪ್ವೆಲ್ ಬಳಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಸಮಾಜದ ಗಣ್ಯರು ಕೊಲಾಸೋ ಅವರನ್ನು ಸನ್ಮಾನಿಸಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಸಲ್ದಾನ, ಯೇನಪೋಯ ವಿವಿಯ ಚೇರ್ಮನ್ ಯೇನಪೋಯ ಅಬ್ದುಲ್ಲ ಕುಂಞ, ರಾಮಕೃಷ್ಣ ಮಠದ ಜಿತಕಾಮಾನಂದಜೀ ಮಹಾರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ರಾಜ್ಯಸಭೆ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ವಿಡಿಯೋ ಸಂದೇಶ ಕಳುಹಿಸಿದ್ದು, ಅದನ್ನು ಸಭೆಯಲ್ಲಿ ಪ್ರಸಾರ ಮಾಡಲಾಯಿತು.
ಸಮಾಜಸೇವೆ ಮತ್ತು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಡಾ.ಕೊಲಾಸೋ ಅವರನ್ನು ಲಂಡನ್ನಿನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿಂದ ವಿಭಿನ್ನ ಸಾಧಕನೆಂಬ ಸರ್ಟಿಫಿಕೇಟ್ ನೀಡಿ ಗೌರವಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಹುಟ್ಟೂರ ವತಿಯಿಂದ ಮಂಗಳೂರಿನಲ್ಲಿ ವಿವಿಧ ಸಮಾಜಗಳ ಗಣ್ಯರು ಸೇರಿ ಸನ್ಮಾನ ನೆರವೇರಿಸಿದ್ದಾರೆ. ಇದೇ ವೇಳೆ, ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೊಲಾಸೋ, ನಾನು ದಾನ, ಧರ್ಮಗಳನ್ನು ಮಾಡಿದ್ದು ಅಥವಾ ಸಮಾಜಸೇವೆಯ ಕಾರ್ಯಗಳನ್ನು ಮಾಡಿದ್ದು ಯಾವುದೇ ಬಿರುದು, ಸನ್ಮಾನಗಳಿಗಲ್ಲ. ಸಾಮಾಜಿಕ ಕಾರ್ಯ ಮಾಡುವುದು ನಮ್ಮ ಕರ್ತವ್ಯ ಅನ್ನುವಂತೆ ಮಾಡುತ್ತಿದ್ದೇನೆ. ಸಮಾಜದಿಂದ ಗಳಿಸಿದ್ದನ್ನು ತಿರುಗಿ ಸಮಾಜಕ್ಕೆ ಕೊಡುವುದು ನಮ್ಮ ಧರ್ಮ. ಈ ರೀತಿಯ ವಿಶೇಷ ಸಮ್ಮಾನ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಎಲ್ಲರು ಕೂಡ ಸಮಾಜದಿಂದ ಗಳಿಸಿದ ಒಂದಷ್ಟು ಅಂಶವನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಎಂದು ಹೇಳಿದರು.
ನಾವು ಪಡೆದ ಸಂಪತ್ತು ಅದು ನಮ್ಮದಲ್ಲ. ಅದು ಈ ಸಮಾಜದ್ದು. ಅದನ್ನು ನಾವು ದೀನರಿಗೆ ನೀಡುವ ಮೂಲಕ ಸಮಾಜದ ಋಣ ತೀರಿಸಬೇಕು. ನಾವು ಗಳಿಸಿದ ಒಟ್ಟು ಸಂಪತ್ತಿನ ಒಂದು ಅಂಶವನ್ನು ನಾವು ಸಮಾಜಕ್ಕೆ ನೀಡುವುದು ಕಷ್ಟವಾಗಲ್ಲ. ಅದನ್ನು ನೀಡುವುದಕ್ಕೆ ನಮಗೆ ಬದ್ಧತೆ ಇರಬೇಕಷ್ಟೆ. ನಾನೇನಾದರೂ, ಸಮಾಜಕ್ಕೆ ಕೊಟ್ಟಿದ್ದರೆ ಅದೇನು ದೊಡ್ಡ ಕೆಲಸ ಅಲ್ಲ. ಕರ್ತವ್ಯ ಪೂರೈಸಿದ್ದೇನೆ ಅಷ್ಟೇ. ಇದು ದೇವರು ನಮಗೆ ನೀಡಿರುವ ಏಕೈಕ ಅವಕಾಶ. ದೇವರು ಮತ್ತೊಂದು ಅವಕಾಶ ನೀಡುವುದಿಲ್ಲ. ಸಮಾಜಕ್ಕೆ, ದೀನರಿಗೆ ಸಹಾಯ ಮಾಡಿದ್ದು ಪುಣ್ಯದ ಕಾರ್ಯವಾಗಿ ಡಿಪಾಸಿಟ್ ಆಗುತ್ತದೆ. ನಮಗದು ಸ್ವರ್ಗದಲ್ಲಿ ಪುಣ್ಯದ ಕಾರ್ಯದ ರೂಪದಲ್ಲಿ ಡಿಪಾಸಿಟ್ ಆಗಿ ಸಿಗುತ್ತದೆ. ನಮ್ಮ ಸೇವಾ ಕಾರ್ಯ ಸ್ವರ್ಗದ ಬ್ಯಾಂಕಿನಲ್ಲಿ ದ್ವಿಗುಣಗೊಳ್ಳುತ್ತಾ ಹೋಗುತ್ತದೆ.
ದೇವರು ನಮ್ಮನ್ನು ಮಾನವನಾಗಿ ಹುಟ್ಟಿಸಿದ್ದಾನೆ. ಯಾವುದೇ ಧರ್ಮ, ಮತದಿಂದ ಆಧರಿಸಿ ಹುಟ್ಟಿಸಿಲ್ಲ. ಎಲ್ಲ ಧರ್ಮಗಳು ಹೇಳುವುದು ಒಳ್ಳೆಯದನ್ನೇ. ನಾವು ಸಮಾಜ ಕಾರ್ಯ ಮಾಡುವುದಂದ್ರೆ, ಹಣವನ್ನು ದಾನ ನೀಡಬೇಕೆಂಬುದಿಲ್ಲ. ನಾವು ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯದಿಂದ ವರ್ತಿಸುವುದೂ ಸೇವಾಕಾರ್ಯ, ಧರ್ಮ ಕಾರ್ಯ. ಈ ರೀತಿಯ ಕೆಲಸದಿಂದ ನಮಗೆ ಸ್ವರ್ಗದ ನಿಧಿ ಹೆಚ್ಚುತ್ತದೆ. ಈ ಮಾತುಗಳನ್ನು ಯಾಕೆ ಹೇಳುತ್ತಿದ್ದೇನಂದ್ರೆ, ಆ ಕೆಲಸವನ್ನು ನಾನು ಮಾಡಿದ್ದೇನೆಂಬ ಸಂತೃಪ್ತಿ ಇದೆ ಎಂದು ಕೊಲಾಸೋ ಹೇಳಿದರು. ಎಲ್ಲ ಭಾಗದಿಂದ ಆಗಮಿಸಿದ್ದ ಗಣ್ಯರು ಕೊಲಾಸೋ ದಂಪತಿಯನ್ನು ಗೌರವಿಸಿದರು.
ಬೆಂಗಳೂರು ಬಿಷಪ್ ಫಾದರ್ ಪೀಟರ್ ಮಚಾದೋ ಅಧ್ಯಕ್ಷತೆ ವಹಿಸಿದ್ದು, ರೊನಾಲ್ಡ್ ಕೊಲಾಸೋ ಮತ –ಭೇದ ಎನ್ನದೆ ಈ ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾರೋ, ಯಾವ ರೀತಿಯ ಕೆಲಸ ಮಾಡಿದ್ದಾರೋ ಅದು ನಮ್ಮ ನಡುವಿನ ಅತ್ಯಂತ ದೊಡ್ಡ ಮಾದರಿ ಅನ್ನುವಂತಹ ಕೆಲಸ. ನಾವು ಇವರನ್ನು ಸೇವಾ ಕಾರ್ಯದಲ್ಲಿ ಅನುಕರಣೆ ಮಾಡಬೇಕಿದೆ ಎಂದರು. ಉಡುಪಿ, ಬೆಳ್ತಂಗಡಿ, ಶಿವಮೊಗ್ಗ, ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಗಳು ಉಪಸ್ಥಿತರಿದ್ದರು. ಮಾಜಿ ಶಾಸಕ ಜೆಆರ್ ಲೋಬೊ ನೇತೃತ್ವದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಲಾಗಿತ್ತು.
NRI entrepreneur and philanthropist Ronald Colaco felicitated with Civic Honour in Mangalore. Dr. Colaco and his wife Jean Colaco were felicitated with the ‘Civic Honour’ at the Father Muller Convention Center in the city by a committee led by former MLA J R Lobo, on Dr. Colaco’s receiving the Certificate of Excellence’ and also in recognition of his social service over several decades and in several fields. The philanthropist said, “I am happy to receive this honour, but it would have satisfied me even greater had the organizing committee spent the time, money and energy on social service.”
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm