ಬ್ರೇಕಿಂಗ್ ನ್ಯೂಸ್
23-02-23 03:28 pm Mangalore Correspondent ಕರಾವಳಿ
ಮಂಗಳೂರು, ಫೆ.23 : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಹಂತಕರಿಗೆ ತರಬೇತಿ ನೀಡಲಾಗಿತ್ತು ಎನ್ನಲಾದ ವಿಟ್ಲ ಬಳಿಯ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಮತ್ತು ಅಲ್ಲಿನ 20 ಸೆಂಟ್ ಆಸ್ತಿಯನ್ನು ಎನ್ಐಎ ವಶಕ್ಕೆ ಪಡೆದಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿರುವ ಮಿತ್ತೂರು ಫ್ರೀಡಂ ಎಜುಕೇಶನ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಡಿ ಕಾರ್ಯ ನಿರ್ವಹಿಸುತ್ತಿದ್ದ ಫ್ರೀಡಂ ಕಮ್ಯನಿಟಿ ಹಾಲ್ ಕಟ್ಟಡ ಮತ್ತು 20 ಸೆಂಟ್ ಜಾಗದ ಸುತ್ತಳತೆಯ ಸಂಪೂರ್ಣ ಆಸ್ತಿಯನ್ನು ಎನ್ಐಎ ಅಧಿಕಾರಿಗಳು ಯುಎಪಿಎ ಕಾಯ್ದೆಯಡಿ ತಮ್ಮ ವಶಕ್ಕೆ ಪಡೆದು ಆದೇಶ ಮಾಡಿದ್ದಾರೆ. ಅದರಂತೆ, ಈ ಜಾಗವನ್ನು ಯಾವುದೇ ಕಾರಣಕ್ಕೂ ಇತರರಿಗೆ ಪರಭಾರೆ ಮಾಡುವಂತಿಲ್ಲ. ಬಾಡಿಗೆ, ಲೀಜ್ ಕೊಡುವಂತಿಲ್ಲ. ಖಾಸಗಿಯಾಗಿ ಬಳಕೆ ಮಾಡುವಂತಿಲ್ಲ. ಅಲ್ಲಿರುವ ಯಾವುದೇ ಸೊತ್ತು, ಆಸ್ತಿಯನ್ನು ಬೇರೆ ಕಡೆ ಸಾಗಿಸುವಂತಿಲ್ಲ.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಬೆಂಗಳೂರು ಎನ್ಐಎ ಘಟಕದ ಎಸ್ಪಿ ಶಣ್ಮುಗಂ ಈ ಬಗ್ಗೆ ಆದೇಶ ಮಾಡಿದ್ದಾರೆ. ಇದಲ್ಲದೆ, ಕೇಂದ್ರ ಗೃಹ ಸಚಿವಾಲಯದಡಿ ಇರುವ ರಾಷ್ಟ್ರೀಯ ತನಿಖಾ ದಳದ ಅಧೀನಕ್ಕೆ ಪಡೆದು, ಫ್ರೀಡಂ ಕಮ್ಯುನಿಟಿ ಹಾಲ್ ಸೆಂಟರಿನ ಕಾರ್ಯದರ್ಶಿಯಿಂದ ಸಹಿಯನ್ನೂ ಪಡೆದಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ವಿಟ್ಲ ಠಾಣಾಧಿಕಾರಿಗೆ ಆದೇಶ ಪ್ರತಿ ರವಾನೆ ಮಾಡಲಾಗಿದೆ. ಪ್ರವೀಣ್ ಹತ್ಯೆ ಭಯೋತ್ಪಾದಕ ಕೃತ್ಯ, ಸಮಾಜದಲ್ಲಿ ಭೀತಿ ಮೂಡಿಸಲು ಮಾಡಿದ್ದ ಕೃತ್ಯ ಎಂದು ಎನ್ಐಎ ಚಾರ್ಜ್ ಶೀಟ್ ನಲ್ಲಿ ಹಾಕಲಾಗಿತ್ತು.
ಅಲ್ಲದೆ, ಪಿಎಫ್ಐ ಸಂಘಟನೆಯ ಅಸಾಲ್ಟ್ ಟೀಮ್ ಅಂದರೆ, ಹಂತಕರ ತಂಡದ ಸದಸ್ಯರ ತರಬೇತಿಗೆ ಫ್ರೀಡಂ ಕಮ್ಯುನಿಟಿ ಸಭಾಂಗಣವನ್ನು ಬಳಸುತ್ತಿದ್ದರು ಎಂದು ಉಲ್ಲೇಖ ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್ 27ರಂದು ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ ಬಳಿಕ ಈ ಹಾಲ್ ಕಟ್ಟಡವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಪ್ತಿ ಮಾಡಿ ಸೀಲ್ ಹಾಕಿತ್ತು. ಇದೀಗ ಅಲ್ಲಿನ ಆಸ್ತಿಯನ್ನು ಯಾವುದೇ ವ್ಯಕ್ತಿ ಬಳಸುವಂತಿಲ್ಲ ಮತ್ತು ದೇಶದ್ರೋಹದ ಕಾಯ್ದೆಯಡಿ ಅಲ್ಲಿನ ಆಸ್ತಿಯನ್ನೂ ವಶಕ್ಕೆ ಪಡೆದು ಎನ್ಐಎ ತನ್ನ ಅಧೀನಕ್ಕೆ ತೆಗೆದುಕೊಂಡಿದೆ.
Praveen nettaru murder case, NIA Seize PFI community hall at vitla in Mangalore.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm