ಬ್ರೇಕಿಂಗ್ ನ್ಯೂಸ್
21-02-23 09:49 pm Mangalore Correspondent ಕರಾವಳಿ
ಮಂಗಳೂರು, ಫೆ.21 : ಚುನಾವಣೆಗೆ ಎರಡು ತಿಂಗಳು ಇರುವಾಗ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ಈಗಲಾದರೂ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಮತ್ತು ಇದಕ್ಕಾಗಿ ಹೋರಾಟ ಮಾಡಿದವರಿಗೆ ಅಭಿನಂದನೆ ಹೇಳುತ್ತೇವೆ. ಆದರೆ ಈ ಹೊತ್ತಿನಲ್ಲಿ ಅಭಿವೃದ್ಧಿ ನಿಗಮ ಘೋಷಿಸಿ ಇದರ ಲಾಭ ಈಗ ಸಮುದಾಯಕ್ಕೆ ಸಿಗಲು ಸಾಧ್ಯವಿಲ್ಲ. ಇದೊಂದು ಚುನಾವಣೆಗೆ ಮೆಟ್ಟಿಲು ಅನ್ನುವ ರೀತಿ ಮಾಡಿದ್ದಾರಷ್ಟೇ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಬಿಲ್ಲವ ಮುಖಂಡರ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ಅವರು, ಇನ್ನೇನು ಒಂದು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಅದಕ್ಕೂ ಮೊದಲು ನಿಗಮ ಅಸ್ತಿತ್ವಕ್ಕೆ ಬರಲ್ಲ. ಈ ಮೊದಲೇ ಅದಕ್ಕೊಬ್ಬ ಅಧ್ಯಕ್ಷರು, ಸಮಿತಿ ರಚನೆ ಆಗುತ್ತಿದ್ದರೆ ಕೆಲಸ ಆರಂಭ ಆಗುತ್ತಿತ್ತು. ಬಜೆಟ್‌ನಲ್ಲಿ ಒಂದಷ್ಟು ಅನುದಾನ ಘೋಷಿಸಿದ್ದರೆ ಲಾಭ ಇರುತ್ತಿತ್ತು. ಬಜೆಟ್ ಜಾರಿಗೆ ಬರುವುದೂ ಎಪ್ರಿಲ್ ನಂತರ. ಆದರೆ ಮಾರ್ಚ್ ಕೊನೆಯಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇರುವುದರಿಂದ ಬಜೆಟ್ ಘೋಷಣೆ ಅನುಷ್ಠಾನ ಸಾಧ್ಯವಿಲ್ಲ ಎಂದರು.
ಅಭಿವೃದ್ಧಿ ನಿಗಮದ ಬಗ್ಗೆ ಆದೇಶ ಮಾಡಿದ್ದರೂ ಹಣಕಾಸು ನೆರವಿನ ಘೋಷಣೆ ಮಾಡಿಲ್ಲ. ಹಿಂದೆ ಇದ್ದ ದೇವರಾಜು ಅರಸು ನಿಗಮದಿಂದ ನಾವ್ಯಾರೂ ಹಣಕಾಸು ಪಡೆಯುವ ಹಾಗಿಲ್ಲ. ಸಮಾಜಕ್ಕೆ ಲಾಭ ಆಗಬೇಕಿದ್ದರೆ ಹಿಂದಿನ ಬಜೆಟ್ ನಲ್ಲಿ ಉಳಿಕೆ ಹಣವನ್ನು ಕೊಟ್ಟು ಶೀಘ್ರದಲ್ಲಿ ಸಮಿತಿ ನಡೆಸಿದರೆ ಒಳ್ಳೆಯದು. ಇದ್ಯಾವುದೂ ಆಗದೇ ಇರುವುದರಿಂದ ನಿಗಮ ಸ್ಥಾಪನೆ ಎಂದ ಮಾತ್ರಕ್ಕೆ ಸಮಾಜದ ಮುಖಂಡರು ಮೈಮರೆಯುವುದು ಬೇಡ. ಒಂದು ಮಾತ್ರ ಸ್ಪಷ್ಟ, ಮುಂದೆ ಯಾವುದೇ ಸರಕಾರ ಬಂದರೂ ಇದನ್ನು ರದ್ದುಪಡಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕೆಲಸ ಮಾಡಿರುವ ಮುಖ್ಯಮಂತ್ರಿ, ಒತ್ತಡ ಹೇರಿದ ಸಚಿವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಗುರುಗಳ ಪಠ್ಯ ತೆಗೆದವರ ಉಪನ್ಯಾಸ ಅಗತ್ಯವಿಲ್ಲ
ನಾರಾಯಣ ಗುರು ಪಠ್ಯವನ್ನು ತೆಗೆದುಹಾಕಿದ ವ್ಯಕ್ತಿಯನ್ನು ವೇಣೂರಿನ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕ್ಕೆ ಕರೆಸುತ್ತಿದ್ದಾರೆ. ಶಾಸಕ ಹರೀಶ್ ಪೂಂಜ ಈ ಕೆಲಸ ಮಾಡಿದ್ದೆಂದು ಅಲ್ಲಿನ ಬಿಲ್ಲವ ಸಮಾಜ ನಮ್ಮ ಗಮನಕ್ಕೆ ತಂದಿದ್ದಾರೆ. ಈ ರೀತಿಯ ಬೆಳವಣಿಗೆಯನ್ನು ನೋಡಿ ಸಮಾಜ ಸುಮ್ಮನೆ ಕುಳಿತುಕೊಳ್ಳಲ್ಲ. ನಾರಾಯಣ ಗುರು ಪಠ್ಯವನ್ನು ತೆಗೆಯಲು ಕಾರಣವಾದ ವ್ಯಕ್ತಿಯನ್ನು ಉಪನ್ಯಾಸಕ್ಕೆ ಕರೆಸಲು ನಿರ್ಧರಿಸಿ ನಮ್ಮ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಅಂಥ ವ್ಯಕ್ತಿಯನ್ನು ಪದೇ ಪದೇ ಕರೆಸಿ ಸಮರ್ಥನೆ ಮಾಡುತ್ತಿರುವುದನ್ನು ಬಿಲ್ಲವ ಸಮಾಜ ಸಹಿಸುವುದಿಲ್ಲ ಎಂದು ರೋಹಿತ್ ಚಕ್ರತೀರ್ಥ ವಿರುದ್ಧ ಸತ್ಯಜಿತ್ ಸುರತ್ಕಲ್ ಹರಿಹಾಯ್ದರು.
ಬಿಲ್ಲವ ಮುಖಂಡ, ವಕೀಲ ಪದ್ಮರಾಜ್ ಮಾತನಾಡಿ, ಇದಕ್ಕಾಗಿ
ಪಕ್ಷಾತೀತ ಹೋರಾಟ ಮಾಡಿದ ಪ್ರತಿಯೋರ್ವರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಾಲ್ಕು ವರ್ಷಗಳಿಂದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಬ್ರಹ್ಮಾವರದಲ್ಲಿ ಮೊದಲ ಬಾರಿಗೆ ಬಿಲ್ಲವರ ಸಮಾವೇಶ ಮಾಡಿ ಹೋರಾಟ ಆರಂಭಿಸಲಾಗಿತ್ತು. ಇದು ಆರಂಭಿಕ ಹೆಜ್ಜೆ ಅಷ್ಟೇ. ನಿಗಮದ ಬಗ್ಗೆ ಬೈಲಾ ಇನ್ನಿತರ ಪ್ರಕ್ರಿಯೆಗಳು ಬೇಕು. ಇದಕ್ಕೆ ಕನಿಷ್ಠ 3 ತಿಂಗಳು ಸಮಯ ಬೇಕಾಗುತ್ತದೆ. ಆದರೆ 15 ದಿನದಲ್ಲಿ ಚುನಾವಣೆ ನೀತಿ ಸಂಹಿತೆ ಬರುತ್ತದೆ. ಇದರಿಂದ ಸಮಾಜ ಎಚ್ಚರದಲ್ಲಿ ಇರಬೇಕು ಎಂದಷ್ಟೇ ಹೇಳುತ್ತೇನೆ. ನಿಗಮ ಸ್ಥಾಪನೆ ಮಾತ್ರಕ್ಕೆ ಇದರ ಲಾಭ ಸಮಾಜಕ್ಕೆ ದೊರಕಲ್ಲ ಎಂದರು.
ಚುನಾವಣೆ ದೃಷ್ಟಿಯಿಂದ ಈ ಘೋಷಣೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ, ಚುನಾವಣೆ ಕಾಲದಲ್ಲಿ ಘೋಷಣೆ ಮಾಡುವಂಥವು ಎಲ್ಲವೂ ಚುನಾವಣೆ ದೃಷ್ಟಿಯಿಂದಲೇ ಆಗಿರುತ್ತವೆ. ಅದರಲ್ಲಿ ಎರಡು ಮಾತಿಲ್ಲ. ಈ ಘೋಷಣೆ ಯಾವುದೂ ಈಗಿನ ಸರಕಾರದಲ್ಲಿ ಅಸ್ತಿತ್ವಕ್ಕೆ ಬರಲ್ಲ. ಮುಂದಿನ ಸರಕಾರ ಮಾಡುವಂತೆ ಮತ್ತೆ ಒತ್ತಡ ಹೇರಬೇಕಷ್ಟೆ ಎಂದರು ಪದ್ಮರಾಜ್.
ಬಿಲ್ಲವರಿಗೆ ಸೀಟು ಕೊಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ, ನೀವು ಆಗ್ರಹ ಮಾಡುತ್ತೀರಾ ಎಂಬ ಪ್ರಶ್ನೆಗೆ, ಸಾಮಾಜಿಕ ಸಂಘಟನೆಯಾಗಿ ನಾವು ಹಾಗೆ ಹೇಳಲು ಬರುವುದಿಲ್ಲ. ನಮ್ಮದು ದೊಡ್ಡ ಸಮಾಜ, ಹಾಗಾಗಿ ಕೊಟ್ಟರೆ ಒಳ್ಳೆಯದು ಎನ್ನುವುದು ವಿನಂತಿ ಅಷ್ಟೇ. ಇತರರ ಹೇಳಿಕೆಗಳೆಲ್ಲ ಅವರ ವೈಯಕ್ತಿಕ. ನಾವು ಒಂದು ಸಮಾಜದ ಹೆಸರಲ್ಲಿ ಆ ರೀತಿ ಆಗ್ರಹ ಮಾಡಲ್ಲ ಎಂದರು ಸತ್ಯಜಿತ್.
ಚುನಾವಣೆ ಸ್ಪರ್ಧಿಸಬೇಕೆಂಬ ಇರಾದೆ ಇಲ್ಲ
ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ, ನಾನು ರಾಜಕೀಯ ಆಸೆ, ಆಕಾಂಕ್ಷೆ ಇಟ್ಟುಕೊಂಡಿಲ್ಲ. ಸಮಾಜದ ಕೆಲಸಕ್ಕೆ ಇಳಿದಿದ್ದೇನೆ. ಸೀಟು ಕೊಟ್ಟು ಕರೆದಲ್ಲಿ ಸಮಾಜದ ಮಾತಿಗೆ ಮನ್ನಣೆ ಕೊಡುತ್ತೇನೆ. ಸಮಾಜ ಒಪ್ಪಿಗೆ ಕೊಟ್ಟರೆ ಮಾತ್ರ ಚುನಾವಣಾ ಕಣಕ್ಕೆ ಇಳಿಯುತ್ತೇನೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು. ಇದೇ ಪ್ರಶ್ನೆಯನ್ನು ಪದ್ಮರಾಜ್ ಅವರ ಮುಂದಿಟ್ಟಾಗ, ನಾನು ಯಾವುದೇ ಪಕ್ಷದ ಪರವಾಗಿ ಗುರುತಿಸಿಕೊಂಡಿಲ್ಲ. ಆದರೆ ಚುನಾವಣೆ ನಿಲ್ಲಬೇಕೆಂದು ಪ್ರಬಲ ಆಗ್ರಹವನ್ನು ಸಮಾಜದ ಹಲವರು ನನ್ನ ಮುಂದಿಟ್ಟಿದ್ದಾರೆ. ಟಿಕೆಟ್ ಬೇಕೆಂದು ಅರ್ಜಿ ಹಾಕಿಲ್ಲ. ಬಡವರ, ಸಮಾಜದ ಸೇವೆ ನನ್ನ ಪ್ರಥಮ ಆದ್ಯತೆ. ಅವಕಾಶ ಬಂದಲ್ಲಿ ಬಿಡಬಾರದು ಎಂಬ ನೆಲೆಯಲ್ಲಿ ಸಮಾಜದ ಹಿತೈಷಿಗಳ ಮಾತು ಕೇಳಿ ಮುನ್ನಡೆಯುತ್ತೇನೆ ಎಂದು ಹೇಳಿದರು. ರಾಜೇಂದ್ರ ಚಿಲಿಂಬಿ, ಸತೀಶ ಕುಮಾರ್, ದೇವೇಂದ್ರ ಪೂಜಾರಿ ಇದ್ದರು.
While welcoming the state government’s decision on setting up Sri Narayana Guru Development Corporation through an official notification, Sri Narayana Guru Vichara Vedike (SNGV) state president Sathyajith Surathkal and Guru Beladingalu Foundation President Padmaraj R have urged the government to set aside Rs 500 crore for the Corporation.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 09:19 pm
Mangalore Correspondent
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm