ಬ್ರೇಕಿಂಗ್ ನ್ಯೂಸ್
04-07-22 10:53 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಕುಳೂರು ಬಿಜೆಪಿ ಶಕ್ತಿಕೇಂದ್ರದ ಸಕ್ರಿಯ ಕಾರ್ಯಕರ್ತ, ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೇತನ್ ಕುಮಾರ್ (27) ಎಂಬ ಯುವಕನ ಶವ ಕುಳೂರು ಸೇತುವೆಯ ಬಳಿ ನದಿಯಲ್ಲಿ ಪತ್ತೆಯಾಗಿದೆ.
ಕುಳೂರು ನಿವಾಸಿಯಾಗಿದ್ದ ಚೇತನ್ ಕುಮಾರ್ ಮೆಕ್ಯಾನಿಕಲ್ ಡಿಪ್ಲೊಮಾ ಪೂರೈಸಿ ಬೈಕಂಪಾಡಿಯ ಸಿಗ್ನೆಟ್ ಕೆಂಟ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಏಳು ವರ್ಷಗಳಿಂದಲೂ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಚೇತನ್ ಗೆ ಹಣಕಾಸು ತೊಂದರೆ ಇರಲಿಲ್ಲ. ಬೇರಾವುದೇ ಚಟ, ಹವ್ಯಾಸವೂ ಇರಲಿಲ್ಲ. ಆದರೆ ಜುಲೈ 2ರಂದು ಸಂಜೆ ಯುವಕ ದಿಢೀರ್ ನಾಪತ್ತೆಯಾಗಿದ್ದು ಮನೆಯವರನ್ನಲ್ಲದೆ, ಅಲ್ಲಿನ ಯುವಕರನ್ನೂ ದಂಗುಬಡಿಸಿತ್ತು. ಹೀಗಾಗಿ ಚೇತನ್ ನಾಪತ್ತೆಯಾದ ವಿಚಾರವೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಇದೀಗ ಮೃತದೇಹ ನದಿಯಲ್ಲಿ ಸಿಗುತ್ತಲೇ ಮನೆಯವರು ಅದನ್ನು ದೃಢಪಡಿಸಿದ್ದಾರೆ. ಅಲ್ಲದೆ, ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲವೆಂದು ಹೇಳಿದ್ದಾರೆ. ಆತನ ಗೆಳೆಯರ ಮಾಹಿತಿ ಪ್ರಕಾರ, ಇತ್ತೀಚೆಗೆ ಸ್ವಲ್ಪ ಹಣಕಾಸಿನ ತೊಂದರೆಗೆ ಈಡಾಗಿದ್ದ. ಹಣ ಪಡೆದಿದ್ದವರು ಹಿಂತಿರುಗಿಸದೆ ಕೈಕೊಟ್ಟಿದ್ದರು. ಕೈಸಾಲ ಪಡೆದು ತೀರಿಸಲಾಗದೆ ಚಿಂತೆಗೆ ಒಳಗಾಗಿದ್ದ. ಇತ್ತೀಚೆಗೆ ಕಂಪನಿಯಲ್ಲಿದ್ದ ಉದ್ಯೋಗವನ್ನೂ ಕಳಕೊಂಡಿದ್ದ. ಇದರ ಚಿಂತೆಯಿಂದ ಮನೆಯಲ್ಲಿ ಖಿನ್ನನಾಗಿರುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.
ಹೆತ್ತವರ ನಾಲ್ಕು ಗಂಡು ಮಕ್ಕಳಲ್ಲಿ ಮೂರನೇಯನಾಗಿರುವ ಚೇತನ್ ಕುಮಾರ್, ಸಾವಿನ ಬಗ್ಗೆ ಜೊತೆಗಿದ್ದ ಯುವಕರಲ್ಲೇ ಅನುಮಾನ ಮೂಡಿಸಿತ್ತು. ಅಂಥಹದ್ದೇನೂ ಆಪತ್ತು, ತೊಂದರೆ ಇಲ್ಲದ ಯುವಕ ಯಾಕಾಗಿ ಸಾವು ಕಂಡ ಅನ್ನುವ ಪ್ರಶ್ನೆ ಮಾಡುತ್ತಿದ್ದರು. ಹಿಂದು ಸಂಘಟನೆ, ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾತ ಹಠಾತ್ತಾಗಿ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಕಾವೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಲವ್ ಅಫೇರ್ ಇತ್ತೇ, ಕೈಸಾಲ ಇತ್ತೇ ಅಥವಾ ಬೇರೆ ಯಾವುದಾದ್ರೂ ಚಟಕ್ಕೆ ಅಂಟಿಕೊಂಡಿದ್ದನೇ ಅನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
A youth from Kavoor, who went missing two days ago, was found dead on Monday, July 4. The deceased is identified as Chethan Kumar (27), a resident of Kavoor. Chethan was active in betting and had lost too much of money which has lead to for suicide. He went missing two days ago and a complaint was filed in Kavoor police station by the family members.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm