ಬ್ರೇಕಿಂಗ್ ನ್ಯೂಸ್
21-06-22 05:11 pm Mangalore Correspondent ಕರಾವಳಿ
ಬಂಟ್ವಾಳ, ಜೂನ್ 21: ಮುಸ್ಲಿಂ ಹುಡುಗನೊಬ್ಬ ತನ್ನ ಹೆಸರನ್ನು ವಿಜಯ್ ಎಂದು ಬದಲಿಸಿಕೊಂಡು ಹಿಂದುವೆಂದು ನಂಬಿಸಿ, ಹಿಂದು ಹುಡುಗಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಬಾಡಿಗೆ ಮನೆಯಲ್ಲಿ ಇಟ್ಟುಕೊಂಡಿದ್ದನ್ನು ತಿಳಿದು ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹುಡುಗ ಮತ್ತು ಹುಡುಗಿಯನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ, ಅವರಿಬ್ಬರು ಮದುವೆಯಾಗದೆ ಜೊತೆಗಿರುವುದು ತಿಳಿದುಬಂದಿದೆ.
ಹುಡುಗಿ ತೀರ್ಥಹಳ್ಳಿ ಮೂಲದವಳಾಗಿದ್ದು ಈ ಹಿಂದೆ ಉಡುಪಿಯ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದಳು. ಅದೇ ಪೆಟ್ರೋಲ್ ಪಂಪ್ ನಲ್ಲಿ ಮಂಗಳೂರಿನ ಆಕಾಶಭವನ ನಿವಾಸಿ ಹುಸೇನ್ ಸಾಹೇಬ ಎಂಬಾತನೂ ಕೆಲಸಕ್ಕಿದ್ದು ಅಲ್ಲಿ ಹುಡುಗ ಮತ್ತು ಹುಡುಗಿ ನಡುವೆ ಲವ್ ಆಗಿತ್ತು ಎನ್ನಲಾಗಿದೆ. ತನ್ನ ಹೆಸರನ್ನು ವಿಜಯ್ ಎಂದು ಹೇಳಿಕೊಂಡು ಹಿಂದುವೆಂದು ಬಿಂಬಿಸಿಕೊಂಡಿದ್ದ ಹುಸೇನ್, ವಾರದ ಹಿಂದೆ ಆಕೆಯನ್ನು ಜೊತೆಗೆ ಕರೆತಂದು ವಿಟ್ಲ ಕಸಬಾ ಗ್ರಾಮದ ಪಲಿಕೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆಬಳಿಕ ಹುಸೇನ್, ವಿಟ್ಲ ಪೆಟ್ರೋಲ್ ಪಂಪ್ ಬಳಿ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ವಾರ ಕಳೆಯುತ್ತಲೇ ಹುಡುಗ- ಹುಡುಗಿಯ ಬಗ್ಗೆ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೂನ್ 20ರಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ವೇಳೆ, ಇವರು ವಯಸ್ಕರಾಗಿದ್ದರೂ ಮದುವೆ ಆಗಿರುವುದಕ್ಕೆ ಯಾವುದೇ ದಾಖಲೆ ಇರಲಿಲ್ಲ. ಪೊಲೀಸರು ಹುಡುಗ- ಹುಡುಗಿಗೆ ಬುದ್ಧಿ ಮಾತು ಹೇಳಿ, ಹುಡುಗಿ ಹೆತ್ತವರಿಗೆ ಮಾಹಿತಿ ನೀಡಿ ಆಕೆಯನ್ನು ಮಂಗಳೂರಿನ ಕೌನ್ಸಿಲಿಂಗ್ ಸೆಂಟರಿಗೆ ಹಾಕಿದ್ದಾರೆ. ಹುಡುಗನನ್ನು ಪೊಲೀಸರು ವಿಚಾರಿಸಿ ಬಿಟ್ಟು ಕಳುಹಿಸಿದ್ದಾರೆ.
Mangalore Muslim boy changes name to Vijay to live in a rented house with Hindu girl in Bantwal without marriage. Hussain is said to be working as a cleaner in the truck. A week ago he brought the girl to the house and neighbours who were suspicious about their behavior complained it to Vitla police. Police took them to the couselling center and later they were left to go to their homes. No case has been registered.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 12:58 pm
Mangalore Correspondent
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm