ಬ್ರೇಕಿಂಗ್ ನ್ಯೂಸ್
15-06-22 09:09 pm Mangalore Correspondent ಕರಾವಳಿ
ಉಳ್ಳಾಲ, ಜೂ.15 : ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಯಲು ನೂತನ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ನೆಲ್ಲಿಕುನ್ನು ಭಾಗದಲ್ಲಿ ಅಳವಡಿಸಿರುವ ಯು.ಕೆ.ಯೂಸುಫ್ ಎಫೆಕ್ಟ್ಸ್ ಸೀವೇವ್ ಬ್ರೇಕರ್ಸ್ ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಬಂದಿದ್ದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮೂರು ದಿವಸಗಳಲ್ಲಿ ವರದಿಯನ್ನು ಸಲ್ಲಿಸಲಿದ್ದೇನೆ ಎಂದು ಬಂದರು ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಸೋಮೇಶ್ವರ, ಉಚ್ಚಿಲದ ಕಡಲ್ಕೊರೆತ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಕಡಲ್ಕೊರೆತ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಬೇಕು. ಅದಕ್ಕಾಗಿ ಈ ಹಿಂದಿನ ತಂತ್ರಜ್ಞಾನದ ಬದಲಾಗಿ ಕಾಸರಗೋಡು ನೆಲ್ಲಿಕುನ್ನು ಲೈಟ್ ಹೌಸ್ ಬಳಿ ಅಳವಡಿಸಲಾದ ಸೀವೇವ್ ಬ್ರೇಕರ್ಸ್ ತಂತ್ರಜ್ಞಾನವನ್ನು ಅಳವಡಿಸಲು ಮುಖ್ಯಮಂತ್ರಿಗಳು, ತಂತ್ರಜ್ಞರು ಹಾಗೂ ಅಧಿಕಾರಿಗಳ ಜೊತೆಗೆ ಸಮಾಲೋಚಿಸುವುದಾಗಿ ಹೇಳಿದರು.
ಜೂನ್ 12 ರಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾಗ ಕರಾವಳಿ ಭಾಗದ ಕಡಲ್ಕೊರೆತದ ಬಗ್ಗೆ ಮನವರಿಕೆ ಮಾಡಿದ್ದು, ಕಾಸರಗೋಡಿನ ತಂತ್ರಜ್ಞಾನ ಅಳವಡಿಕೆಯ ಬಗ್ಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿಗಳು ಮನವಿ ಬೇಡ, ಯೋಜನೆ ಮಾಡಿಕೊಡಿ ಎಂದ ಕಾರಣಕ್ಕೆ ಈ ಭಾಗಕ್ಕೆ ಬಂದಿದ್ದೇನೆ. ಕಡಲ್ಕೊರೆತ ಶಾಶ್ವತ ತಡೆಗೆ ಸರಕಾರ ಮುತುವರ್ಜಿ ವಹಿಸಿದೆ ಎಂದರು.
ಬಂದರು ಇಲಾಖೆಯ ನಿರ್ದೇಶಕ ಸ್ವಾಮಿ ಹಾಗೂ ಮುಖ್ಯ ಅಭಿಯಂತರ ರಾಥೋಡ್ ಅವರು ನಮ್ಮ ಜೊತೆ ಬಂದಿದ್ದು ಸ್ಥಳ ಪರಿಶೀಲನೆ ಮಾಡಿದ್ದು ಮೂರು ದಿನಗಳೊಳಗೆ ಎಲ್ಲ ವಿವರಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಿದ್ದೇವೆ. ಅನೇಕ ಸರಕಾರಗಳು ಇಲ್ಲಿ ತಾತ್ಕಾಲಿಕವಾದ ರಕ್ಷಣೆ ಕೆಲಸ ಮಾಡಿದ್ರೂ ಅದು ಯಾವುದು ಪ್ರಯೋಜನಕ್ಕೆ ಬಂದಿಲ್ಲ. ಈಗಾಗಲೇ ಕಾಸರಗೋಡಿನಲ್ಲಿ ಶಾಶ್ವತ ಕಡಲ್ಕೊರೆತ ತಡೆ ಯೋಜನೆ ಕಂಡ ಬಳಿಕ, ಇಲ್ಲೂ ಅದು ಯಶಸ್ವಿ ಆಗುವುದರ ಬಗ್ಗೆ
ನಮಗಂತೂ ವಿಶ್ವಾಸ ಇದೆ. ಇಂಜಿನಿಯರ್ ಗಳ ಜತೆ ಚರ್ಚಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆ ಎಂದು ಹೇಳಿದರು.
ಕಾಸರಗೋಡಿನ ನೆಲ್ಲಿಕುನ್ನು ಲೈಟ್ ಹೌಸ್ ಬಳಿ ಅಳವಡಿಸಲಾದ ಸೀವೇವ್ ಬ್ರೇಕರ್ಸ್ ವಿಭಿನ್ನವಾಗಿದ್ದು ಸಫಲ ಕಂಡಿದೆ. 50 ಅಡಿ ಉದ್ದ 20 ಅಡಿ ಅಗಲ ಮತ್ತು 15 ರಿಂದ 20 ಅಡಿ ಎತ್ತರದ ಕಾಂಕ್ರೀಟ್ ಫ್ರೇಮ್ ಗಳ ನಡುವಿಗೆ ಮರಳು, ಮಣ್ಣನ್ನ ತುಂಬಿಸಿ ಮೇಲ್ಬಾಗದಲ್ಲಿ ಹಸಿರು ಪೈರನ್ನ ಬೆಳೆಸಿ ಆಕರ್ಷಕ ಶಾಶ್ವತ ಕಡಲ್ಕೊರೆತ ತಡೆಗೋಡೆಯನ್ನ ಕಾಸರಗೋಡಲ್ಲಿ ನಿರ್ಮಿಸಲಾಗಿದೆ ಎಂದವರು ತಿಳಿಸಿದ್ದಾರೆ.
Someshwara sea erosion, approach road devastated, minister Angara who visited Ullal today plans for the latest technology to control sea erosion.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 07:43 pm
Mangalore Correspondent
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm