ಬ್ರೇಕಿಂಗ್ ನ್ಯೂಸ್
11-06-22 10:34 am Mangalore Correspondent ಕರಾವಳಿ
ಬಂಟ್ವಾಳ, ಜೂನ್ 11: ಇತ್ತೀಚೆಗೆ ಬಂಟ್ವಾಳ ತಾಲೂಕಿನ ಚೆಂಡ್ತಿಮಾರ್ ಎಂಬಲ್ಲಿ ನಡೆದ ಅಪಘಾತದಲ್ಲಿ 2 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಇದೀಗ ಅಪಘಾತಕ್ಕೊಳಗಾದ ಕಾರಿನ ಡ್ಯಾಶ್ ಬೋರ್ಡ್ ಒಳಗಡೆ ನಗದು ಇದ್ದ ಪ್ಯಾಕೆಟ್ ಪತ್ತೆಯಾಗಿದ್ದು, ಅದನ್ನು ಬಂಟ್ವಾಳ ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಮಡಂತ್ಯಾರಿನಲ್ಲಿ ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದ ರೋಶನ್ ಸೆರಾವೋ ಪ್ರಯಾಣಿಸುತ್ತಿದ್ದ ಕಾರು ಜೂನ್ 1ರಂದು ಟ್ಯಾಂಕರ್ ಡಿಕ್ಕಿಯಾಗಿ ಅಪಘಾತವಾಗಿತ್ತು. ಘಟನೆಯಲ್ಲಿ ರೋಶನ್ ಸೆರಾವೋ ಸ್ಥಳದಲ್ಲೇ ಸಾವು ಕಂಡಿದ್ದರು. ಆದರೆ ರೋಶನ್ ಸೆರಾವೋ ಮುನ್ನಾ ದಿನದ ಎರಡು ಲಕ್ಷ ರೂಪಾಯಿ ಕ್ಯಾಟರಿಂಗ್ ವ್ಯವಹಾರದ ಕಲೆಕ್ಷನ್ ಹಣವನ್ನು ಪಡೆದು ಕಾರಿನಲ್ಲಿ ಹಿಂತಿರುಗುತ್ತಿದ್ದರು. ಅಪಘಾತದ ಬಳಿಕ ಹಣ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಗೊಂಡಿತ್ತು. ಮೊದಲಿಗೆ, ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ತಪಾಸಣೆ ನಡೆಸಲಾಗಿತ್ತು. ಕಾರಿನಲ್ಲಿ ಡ್ಯಾಶ್ ಬೋರ್ಡ್ ನೋಡಿದರೆ ಹಣದ ಬ್ಯಾಗ್ ಕಾಣಿಸಿರಲಿಲ್ಲ. ಅಪಘಾತ ನಡೆದಿದ್ದ ಸಂದರ್ಭದಲ್ಲಿಯೂ ಪೊಲೀಸರು ಮತ್ತು ಕುಟುಂಬಸ್ಥರು ಕಾರಿನಲ್ಲಿ ತಪಾಸಣೆ ನಡೆಸಿದ್ದರು. ಹಣ ಮತ್ತು ದಾಖಲೆ ಪತ್ರಗಳಿದ್ದ ಬ್ಯಾಗ್ ಪತ್ತೆಯಾಗಿರಲಿಲ್ಲ. ಪೊಲೀಸರು ನುರಿತ ಮೆಕ್ಯಾನಿಕ್ ಕರೆಸಿ ಕಾರಿನಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಅದೇ ಡ್ಯಾಶ್ ಬೋರ್ಡ್ ಒಳಗಡೆ ಹಣದ ಬ್ಯಾಗ್ ಪತ್ತೆಯಾಗಿದೆ.
ಹೊಸ ರೀತಿಯ ಆಧುನಿಕ ಕಾರುಗಳಲ್ಲಿ ಅಪಘಾತವಾದೊಡನೆ, ಡ್ಯಾಶ್ ಬೋರ್ಡ್ ಡ್ರಾವರ್ ಫೋಲ್ಡ್ ಆಗುವಂತಿದ್ದು, ಅದೇ ರೀತಿ ಹಣದ ಬ್ಯಾಗ್ ಇದ್ದುದು ಒಳಗಡೆ ಹೋಗಿತ್ತು. ಮೆಕ್ಯಾನಿಕ್ ತಪಾಸಣೆ ನಡೆಸಿದಾಗ ಡ್ಯಾಶ್ ಬೋರ್ಡಿನ ಇನ್ನೊಂದು ಫೋಲ್ಡರಲ್ಲಿ ಬ್ಯಾಗ್ ಕಂಡುಬಂದಿತ್ತು. ಮೇಲ್ನೋಟಕ್ಕೆ ಬ್ಯಾಗ್ ಕಾಣಿಸದೇ, ಡ್ಯಾಶ್ ಬೋರ್ಡ್ ಕೂಡ ಖಾಲಿಯಾಗಿ ಕಾಣಿಸುವುದು ಇದರ ವಿಶೇಷ.
A few days ago, it was said that Rs 2.03 lac cash that was kept in the car, which met with accident at Chanditmar of taluk, went missing from the vehicle. It is found that the cash is in fact intact inside the dashboard drawer of the car and the same was handed over to the family members.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm