ಬ್ರೇಕಿಂಗ್ ನ್ಯೂಸ್
07-06-22 03:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 7: ಬೈಕಂಪಾಡಿ ಬಳಿಯ ಮೀನಕಳಿಯದಲ್ಲಿ ಸೋಮವಾರ ಸಂಜೆ ಗಂಭೀರ ಹಲ್ಲೆಗೊಳಗಾಗಿದ್ದ ಪಣಂಬೂರು ಠಾಣೆಯ ರೌಡಿಶೀಟರ್ ರಾಜಾ ಯಾನೆ ರಾಘವೇಂದ್ರ (29) ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ರಾಘವೇಂದ್ರ 2019ರಲ್ಲಿ ನಡೆದ ಸಂದೇಶ್ ಪೂಜಾರಿ ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಆನಂತರ ಒಂದು ವರ್ಷ ಕಾಲ ಮಂಗಳೂರು ಜೈಲಿನಲ್ಲಿದ್ದ ರಾಘವೇಂದ್ರ, ಜಾಮೀನು ಪಡೆದು ಹೊರಬಂದಿದ್ದ. ಆನಂತರ, ಒಂದು ವರ್ಷದ ಹಿಂದೆ ರಾಘವೇಂದ್ರನಿಗೆ ಮನೆಯವರು ಮದುವೆ ಮಾಡಿದ್ದರು.

ಜೂನ್ 6ರಂದು ಪತ್ನಿಯ ಬರ್ತ್ ಡೇ ಇದ್ದುದರಿಂದ ಮನೆಯಲ್ಲೇ ಕೇಕ್ ಕಟ್ಟಿಂಗ್ ಪಾರ್ಟಿ ಮಾಡಲಾಗಿತ್ತು. ಮಧ್ಯಾಹ್ನ ಪಾರ್ಟಿ ಮುಗಿಸ್ಕೊಂಡ ಬಳಿಕ ಸಂಜೆ ಹೊತ್ತಿಗೆ ಬೇರೆ ಯಾವುದೋ ತಿಂಡಿಯನ್ನು ತರುವುದಕ್ಕಾಗಿ ಅಲ್ಲಿಯೇ ಹತ್ತಿರದ ಬೇಕರಿಗೆ ಹೊರಟಿದ್ದ. ಇದೇ ವೇಳೆ, ಬೈಕಿನಲ್ಲಿ ಇಬ್ಬರು ಯುವಕರು ಬಂದು ಅಡ್ಡಗಟ್ಟಿದ್ದು ರಾಘವೇಂದ್ರನ ತಲೆ, ಮುಖಕ್ಕೆ ತಲವಾರು ಬೀಸಿದ್ದರು. ರಸ್ತೆ ಮಧ್ಯದಲ್ಲೇ ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದಂತೆ ಯುವಕರು ಆತನನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಸ್ಥಳೀಯರು ಸೇರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಮೈಗೆಲ್ಲಾ ಟ್ಯಾಟೂ ಹಾಕ್ಕೊಂಡು ತಿರುಗಾಡುತ್ತಿದ್ದ ಕಾರಣಕ್ಕೆ ಸ್ಥಳೀಯವಾಗಿ ಆತನನ್ನು ಟ್ಯಾಟೂ ರಾಜ ಎನ್ನುತ್ತಿದ್ದರು. ರಾಘವೇಂದ್ರ ಎಂದು ಹೆಸರಿದ್ದರೂ, ರಾಜ ಎಂದೇ ಪರಿಚಿತನಾಗಿದ್ದ. ತಂದೆ ನಡೆಸಿಕೊಂಡು ಬಂದಿದ್ದ ಶ್ರೀನಿಧಿ ಟ್ರಾನ್ಸ್ ಪೋರ್ಟ್ ವ್ಯವಹಾರವನ್ನು ತಾನೇ ಉಸ್ತುವಾರಿ ವಹಿಸ್ಕೊಂಡು ಮಾಡುತ್ತಿದ್ದ. ರಸ್ತೆ ಬದಿಯ ಈತನ ಮನೆಯ ಕಟ್ಟಡದಲ್ಲಿಯೇ ಟ್ರಾನ್ಸ್ ಪೋರ್ಟ್ ಕಚೇರಿ ಇತ್ತು. ಹಾಗಾಗಿ, ಬಿಸಿನೆಸ್ ಚೆನ್ನಾಗಿದ್ದುದರಿಂದ ರೌಡಿಸಂ ಬಿಟ್ಟು ಪತ್ನಿಯೊಂದಿಗೆ ಸುಖ ಜೀವನ ಆರಂಭಿಸಿದ್ದಾಗಲೇ ಗೆಳೆಯರ ವೈಷಮ್ಯಕ್ಕೆ ಬಲಿಯಾಗಿದ್ದಾನೆ.


ಮೂರು ವರ್ಷಗಳ ಹಿಂದೆ ಸುರತ್ಕಲ್ ಬಾರ್ ಬಳಿಯಲ್ಲಿದ್ದಾಗ ಗೆಳೆಯರೇ ಆಗಿದ್ದ ಎರಡು ತಂಡಗಳ ನಡುವೆ ವೈಷಮ್ಯ ಉಂಟಾಗಿ ಜಗಳ ನಡೆದು ಸಂದೇಶ್ ಮೇಲೆ ತಲವಾರು ಬೀಸಿ ಕೊಲೆ ಮಾಡಿದ್ದರು. ಆರೋಪಿಗಳಲ್ಲಿ ರಾಘವೇಂದ್ರನೂ ಒಬ್ಬ. ಈಗ ಸಂದೇಶ್ ಸಹಚರರೇ ರಾಘವೇಂದ್ರನ ಕತೆ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ವಿಪರ್ಯಾಸ ಅಂದರೆ, ರಾಘವೇಂದ್ರನ ಮುದ್ದಿನ ಪತ್ನಿ ಗರ್ಭಿಣಿ ಎನ್ನಲಾಗುತ್ತಿದ್ದು, ಆಕೆಯ ಇಚ್ಛೆಯನ್ನು ಪೂರೈಸುವುದಕ್ಕಾಗಿಯೇ ನಿನ್ನೆ ಪಾರ್ಟಿ ನಡೆಸಿದ್ನಂತೆ. ಆದರೆ, ಪಾರ್ಟಿ ಸಂಭ್ರಮದ ಬೆನ್ನಲ್ಲೇ ಗೆಳೆಯರ ವೈಷಮ್ಯಕ್ಕೆ ಕೊಲೆಯಾಗಿ ಹೋಗಿದ್ದಾನೆ.
ಪಣಂಬೂರು ರೌಡಿಶೀಟರ್ ಮೇಲೆ ಮಾರಣಾಂತಿಕ ತಲವಾರು ದಾಳಿ ; ಹಳೆ ವೈಷಮ್ಯಕ್ಕೆ ಸ್ನೇಹಿತರಿಂದಲೇ ಪ್ರತೀಕಾರ !
Mangalore Accused in Sandesh murder case, Rowdy sheeter Raja declared dead after attack. Murder attempt on Rowdy sheeter Raja Raghavendra was attacked by leathon weapons by bike borne assaliants last night. The miscrents attacked him on the day of his wife birthday.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm