ಬ್ರೇಕಿಂಗ್ ನ್ಯೂಸ್
06-06-22 03:04 pm Udupi Correspondent ಕರಾವಳಿ
ಉಡುಪಿ, ಜೂನ್ 6 : ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯೊಂದಕ್ಕೆ ರಾತ್ರೋರಾತ್ರಿ ನಾಥೂರಾಮ್ ಗೋಡ್ಸೆ ಹೆಸರು ಇಟ್ಟಿರುವುದು ಕಂಡುಬಂದಿದ್ದು ಯೂತ್ ಕಾಂಗ್ರೆಸ್ ನಾಯಕರ ಆಕ್ಷೇಪಣೆ, ಆಕ್ರೋಶದ ಬಳಿಕ ಪಂಚಾಯತ್ ಅಧಿಕಾರಿಗಳು ತೆರವು ಮಾಡಿದ್ದಾರೆ.
ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯೊಂದಕ್ಕೆ ‘ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ’ ಎಂದು ನಾಮಫಲಕ ಹಾಕಲಾಗಿತ್ತು. ಇದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಕಡೆಯಿಂದ ತೀವ್ರ ಆಕ್ರೋಶ ಕೇಳಿಬಂದಿತ್ತು.
ಈ ಬಗ್ಗೆ ಪಂಚಾಯತ್ ಅಧಿಕಾರಿಗಳಲ್ಲಿ ಕೇಳಿದಾಗ, ನಮಗೂ ಅದಕ್ಕೂ ಸಂಬಂಧ ಇಲ್ಲ. ಯಾರೋ ಕಿಡಿಗೇಡಿಗಳ ಕೆಲಸ ಎಂದು ಹೇಳಿದ್ದಾರೆ. ಪಂಚಾಯತ್ ನಲ್ಲಿ ಈ ಹೆಸರಿಡುವ ಬಗ್ಗೆ ನಿರ್ಣಯ ಕೈಗೊಂಡಿಲ್ಲ. ಪಂಚಾಯತ್ ಈ ನಾಮಫಲಕ ಹಾಕಿಲ್ಲ ಎಂದಿದ್ದರು ಪಿಡಿಓ.
ಶಾಸಕ, ಸಚಿವ ಸುನೀಲ್ ಕುಮಾರ್ ಗೂ ಈ ಬಗ್ಗೆ ತಿಳಿದಿರಲಿಲ್ಲ. ಯೂತ್ ಕಾಂಗ್ರೆಸ್ ಘಟಕದ ತಾಲೂಕು ಅಧ್ಯಕ್ಷ ಯೋಗೀಶ್ ಇನ್ನಾ ಮತ್ತಿತರ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಲಕ ನೋಡಿದರೆ ಪಂಚಾಯತ್ ಅಥವಾ ರಸ್ತೆ ಪ್ರಾಧಿಕಾರದಿಂದ ಅಧಿಕೃತವಾಗಿ ಹಾಕಿದ ರೀತಿ ಇತ್ತು. ಕಾಂಕ್ರೀಟ್ ಸ್ಲಾಬ್ ಮಾಡಿ, ಅದರಲ್ಲಿ ಫಲಕ ರಚಿಸಲಾಗಿತ್ತು. ರಸ್ತೆ ಬದಿಯಲ್ಲಿ ಹಾಕಿದ್ದ ಫಲಕದಲ್ಲಿ ಮೇಲೆ ಬೋಳ ಗ್ರಾಮ ಪಂಚಾಯತ್ ಅಂತಲೇ ಹಾಕಲಾಗಿತ್ತು. ಹೀಗಾಗಿ ಏನೋ ಹೆಸರಿಟ್ಟಿರಬೇಕು ಎಂದು ಜನಸಾಮಾನ್ಯರು ತಿಳಿದುಕೊಳ್ಳುವಂತಾಗಿತ್ತು. ಫೋಟೊ ವೈರಲ್ ಆಗಿ ಆಕ್ರೋಶ ಕೇಳಿಬರುತ್ತಿದ್ದಂತೆ ವಾಸ್ತವ ಬೆಳಕಿಗೆ ಬಂದಿದ್ದು ಪಂಚಾಯತ್ ವಿರುದ್ಧವೇ ಆಕ್ರೋಶ ವ್ಯಕ್ತವಾಗಿದೆ. ಕೊನೆಗೆ, ಅಲ್ಲಿನ ಅಧಿಕಾರಿಗಳೇ ಫಲಕವನ್ನು ತೆಗೆದು ಹಾಕಿದ್ದು ಪೊಲೀಸ್ ತನಿಖೆಗೆ ದೂರು ನೀಡಿದ್ದಾರೆ.
Udupi Miscreants name road after Nathuram Godse, board removed after pic goes viral in Karkala. Unidentified miscreants put up a board on a road that falls under the limits of Bola gram panchayat of the taluk naming it as Nathuram Godse road. Youth Congress leaders who saw the board expressed their rage and asked the concerned authorities to remove the same. After much uproar on social media and visit of local panchayat officials to the spot, the board was removed under police protection.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm