ಬ್ರೇಕಿಂಗ್ ನ್ಯೂಸ್
06-06-22 02:49 pm Mangalore Correspondent ಕರಾವಳಿ
ಮಂಗಳೂರು, ಜೂನ್ 6: ಇಲ್ಲಿ ಪ್ರತಿ ವಿಚಾರದಲ್ಲಿ ಹೋರಾಟ ಮಾಡುತ್ತಿರುವವರು ಒಮ್ಮೆ ವಿದೇಶಕ್ಕೆ ಹೋಗಿ ನೋಡಿ ಬರಬೇಕು. ಇಲ್ಲಿ ಪ್ರತಿ ವಿಚಾರದಲ್ಲಿ ಪ್ರೆಸ್ ಕರೆದು ಮಾತನಾಡಲು ಅವಕಾಶ ಇದೆ. ಮಧ್ಯರಾತ್ರಿಯಲ್ಲೂ ಎಲ್ಲಿ ಬೇಕಾದರೂ ಓಡಾಡುವುದಕ್ಕೆ ಅವಕಾಶ ಇದೆ. ಇವರು ಸೌದಿ, ಪಾಕಿಸ್ಥಾನಕ್ಕೆ ಹೋಗಿ ನೋಡಲಿ. ಅಲ್ಲಿ ಪರಿಸ್ಥಿತಿ ಹೇಗಿದೆ ಅನ್ನುವುದು ತಿಳಿದು ಇಲ್ಲಿ ಬಂದು ಟೀಕಿಸಲಿ. ಅಲ್ಲಿ ಸರಕಾರದ ನಿರ್ಣಯವನ್ನು ಪ್ರಶ್ನೆ ಮಾಡಲಿಕ್ಕೆ ಅವಕಾಶ ಇದೆಯೇ ಅಂತ ತಿಳಿದುಕೊಳ್ಳಲಿ ಎಂದು ಯು.ಟಿ. ಖಾದರ್ ಪರೋಕ್ಷವಾಗಿ ಹಿಜಾಬ್ ಬಗ್ಗೆ ಹೋರಾಟ ಮಾಡುತ್ತಿರುವ ಮಂದಿಗೆ ಟಾಂಗ್ ಇಟ್ಟಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಹಿಜಾಬ್ ಕುರಿತು ಕೇಳಿದ ಪ್ರಶ್ನೆಗೆ, ವಿದ್ಯಾರ್ಥಿನಿಯರು ಹಿಜಾಬ್ ಬಗ್ಗೆ ಪ್ರಶ್ನೆ ಮಾಡಿರುವುದು ಗೊತ್ತಿದೆ. ಇಡೀ ಜಿಲ್ಲೆಯ ಸಾಂವಿಧಾನಿಕ ಜವಾಬ್ದಾರಿ ಹೊತ್ತವರು ಜಿಲ್ಲಾಧಿಕಾರಿ. ಇಲ್ಲಿ ವಿವಿಯ ಸಿಂಡಿಕೇಟ್ ಸದಸ್ಯರು ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ ಪ್ರಶ್ನೆ ಇರುವುದು, ಹಂಪನಕಟ್ಟೆ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಹಿಜಾಬ್ ಬ್ಯಾನ್ ಇರಲಿಲ್ಲ ಎನ್ನುವುದು. ಈಗ ವರ್ಷಾಂತ್ಯಕ್ಕೆ ಎರಡು ತಿಂಗಳು ಇರುವಾಗ ಹಿಜಾಬ್ ನಿಷೇಧಿಸಿ ನಿರ್ಣಯ ತೆಗೆದುಕೊಂಡಿದ್ದು ಎಷ್ಟು ಸರಿ ಎಂದು ಖಾದರ್ ಪ್ರಶ್ನಿದರು,
ಹೈಕೋರ್ಟ್ ತೀರ್ಪಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಯೂನಿಫಾರ್ಮ್ ಬಗ್ಗೆ ಯಾವ ರೀತಿ ನಿರ್ಣಯ ತೆಗೆದುಕೊಳ್ಳುತ್ತಾರೆ ಅದರಂತೆ ನಡೆದುಕೊಳ್ಳಬೇಕು ಅನ್ನುವುದಿದೆ. ಮಂಗಳೂರು ವಿವಿ ಕುಲಪತಿಯವರಲ್ಲಿ ಈ ಬಗ್ಗೆ ಕೇಳಿದ್ದೇನೆ. ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಆಗಿದೆ ಎಂದು ಅಸಹಾಯಕತೆ ಹೇಳಿದ್ದಾರೆ. ಆದರೆ ಇಲ್ಲಿ ವಿದ್ಯಾರ್ಥಿನಿಯರು ಪ್ರಶ್ನೆ ಎತ್ತಿರುವುದು ಶೈಕ್ಷಣಿಕ ವರ್ಷದ ಆರಂಭದಲ್ಲಿ ಹಿಜಾಬ್ ಬ್ಯಾನ್ ಇರಲಿಲ್ಲ ಎನ್ನುವುದು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕಾನೂನು ಮಾಹಿತಿ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಂತಿಮ ಜವಾಬ್ದಾರಿ ಅವರಿಗೇ ಇರುವುದಲ್ಲವೇ ಎಂದರು ಖಾದರ್. ವಿದ್ಯಾರ್ಥಿನಿಯರನ್ನು ರಾಜಕೀಯ ಕಾರಣಕ್ಕೋಸ್ಕರ ದಾರಿ ತಪ್ಪಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಇದ್ದಿರಲೂಬಹುದು. ಆದರೆ, ಯಾರೂ ದಾರಿ ತಪ್ಪಿಸುವುದಿದ್ದರೂ, ಇಲ್ಲಿ ದುಡ್ಡು ಕೊಟ್ಟು ಮಕ್ಕಳನ್ನು ಓದಿಸುವುದು ಹೆತ್ತವರು. ಹಾಗಾಗಿ ಅವರೇ ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಪ್ರತಿ ವಿಚಾರದಲ್ಲಿ ಪ್ರಶ್ನೆ ಮಾಡುತ್ತಾ ಹೋದರೆ ಆಗುವುದಿಲ್ಲ. ಇಲ್ಲಿನ ಕಾನೂನು ಏನಿದೆ, ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಕೋರ್ಟ್ ಇದೆ, ಪ್ರಶ್ನೆ ಮಾಡಬಹುದು. ಪ್ರತಿ ವಿಚಾರಕ್ಕೂ ಪ್ರಶ್ನೆ ಮಾಡುವ ಮಂದಿ ವಿದೇಶದಲ್ಲಿ ಹೇಗಿದೆ, ಅಲ್ಲಿನ ವಾತಾವರಣ ಹೇಗಿದೆ ಅನ್ನುವುದನ್ನು ತಿಳ್ಕೋಬೇಕು. ಸೌದಿ, ಪಾಕಿಸ್ತಾನಕ್ಕೆ ಹೋಗಿ ಬಂದಲ್ಲಿ ಎಲ್ಲವೂ ತಿಳಿಯುತ್ತದೆ. ಇಲ್ಲಿ ಹೇಗಿದೆ, ಅಲ್ಲಿ ಹೇಗಿದೆ ಅನ್ನುವುದು. ಇಲ್ಲಿ ವಿಮಾನದಿಂದ ಇಳಿದು ಬರುತ್ತಿದ್ದಂತೆ, ಜೊತೆಗೆ ಬೌನ್ಸರ್ ಇಟ್ಕೊಂಡು ಹೊರಗೆ ಬರುತ್ತಾರೆ. ಅಲ್ಲಿ ಬೆಕ್ಕಿನಂತೆ ಸದ್ದಿಲ್ಲದೆ ಹೋಗುತ್ತಾರೆ ಎಂದು ಪೋಸು ಕೊಡುವ ಮಂದಿಗೆ ಟಾಂಗ್ ಇಟ್ಟರು.
Mangalore Students protesting for Hijab must-visit Saudi and Pakistan slams MLA U T Khader during a press meet held at the congress office. India has so much freedom to walk as well as question is the same possible in Saudi and Pak, if you question the government orders they will be punished he slammed.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm