ಬ್ರೇಕಿಂಗ್ ನ್ಯೂಸ್
05-06-22 08:00 pm Mangalore Correspondent ಕರಾವಳಿ
ಮಂಗಳೂರು, ಜೂನ್ 5: ಪನಾಮಾ ದೇಶಕ್ಕೆ ಸೇರಿದ ಹಡಗಿನಲ್ಲಿ ಕ್ಯಾಪ್ಟನ್ ಆಗಿದ್ದ ಚೀನಾ ಮೂಲದ ಅಧಿಕಾರಿ ಅರಬ್ಬೀ ಸಮುದ್ರದಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಮಂಗಳೂರಿನ ಕರಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 10 ರಂದು ಸುರತ್ಕಲ್ ಕಡಲ ತೀರದಿಂದ 70 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆ ಹಡಗು ಸಾಗುತ್ತಿದ್ದಾಗ ಚೀನಾ ಮೂಲದ ಅಧಿಕಾರಿ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ನಾಪತ್ತೆಯಾದ ಅಧಿಕಾರಿಯನ್ನು ಕ್ಷು ಜುನ್ ಫೇಂಗ್ (52) ಎಂದು ಗುರುತಿಸಲಾಗಿದೆ.
ಚೀನಾದ ಝುನ್ ಪೇ ಬಂದರಿನಿಂದ ಸಿಂಗಾಪುರ ಮಾರ್ಗವಾಗಿ ಶ್ರೀಲಂಕಾಕ್ಕೆ ಬಂದಿದ್ದ ಹಡಗು ಅಲ್ಲಿಂದ ಗುಜರಾತಿನ ಮುಂಡ್ರಾ ಬಂದರಿನತ್ತ ತೆರಳುತ್ತಿತ್ತು. ಮೇ 10ರಂದು ರಾತ್ರಿ 1.10ರ ಸುಮಾರಿಗೆ ಅರಬ್ಬೀ ಸಮುದ್ರದಲ್ಲಿ ಹಡಗು ತೆರಳುತ್ತಿದ್ದ ಅಧಿಕಾರಿ ಕಾಣೆಯಾಗಿರುವ ಬಗ್ಗೆ ಮೇ 28ರಂದು ಗುಜರಾತ್ ಪೊಲೀಸರಿಗೆ ದೂರು ನೀಡಲಾಗಿದೆ. ಹಡಗು ಗುಜರಾತ್ ತಲುಪಿದ 15 ದಿನದ ಬಳಿಕ ಇತರೇ ಸಿಬಂದಿ ಅಲ್ಲಿ ನಾಪತ್ತೆ ದೂರು ನೀಡಿದ್ದರು.
ಗುಜರಾತ್ ಪೊಲೀಸರು ಮಂಗಳೂರು ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಿದ್ದು ಜೂ.1ರಂದು ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಚೀನೀ ಪ್ರಜೆಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಮಂಗಳೂರು ಕರಾವಳಿ ಪೊಲೀಸ್ ಠಾಣೆ 9480800574 ಅಥವಾ ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಂ 0820-2538100 ಸಂಪರ್ಕಿಸಬಹುದು ಎಂದು ಕರಾವಳಿ ಕಾವಲು ಪೊಲೀಸರು ತಿಳಿಸಿದ್ದಾರೆ.
China based ship captain goes missing in Mangalore, missing case filed at Coastal Police station. The missing person has been identified as Shu Ju Ping (52).
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm