ಬ್ರೇಕಿಂಗ್ ನ್ಯೂಸ್
01-06-22 08:07 pm Mangalore Correspondent ಕರಾವಳಿ
ಮಂಗಳೂರು, ಜೂನ್ 1: ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಪೂರ್ತಿ ಬಹುಮತದಿಂದ ಗೆಲ್ಲಲು ಬಿಜೆಪಿ ಹೈಕಮಾಂಡ್ ಪ್ಲಾನ್ ಹಾಕುತ್ತಿದೆ. ಅದಕ್ಕಾಗಿ ಯಾರನ್ನು ಬದಲಿಸಬೇಕು, ಯಾವ ಕ್ಷೇತ್ರದಲ್ಲಿ ಮೈನಸ್ ಇದೆ ಅನ್ನೋದನ್ನು ತಿಳಿಯಲು ರಾಷ್ಟ್ರೀಯ ನಾಯಕರು ಪ್ರತ್ಯೇಕ ಕಂಪನಿ ಒಂದಕ್ಕೆ ಗುತ್ತಿಗೆ ಕೊಟ್ಟು ರಹಸ್ಯ ಸಮೀಕ್ಷೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳ ಪೈಕಿ ಎರಡು – ಮೂರು ಕಡೆ ಪಕ್ಷಕ್ಕೆ ಮೈನಸ್ ಇರುವ ಬಗ್ಗೆ ಮಾಹಿತಿ ರವಾನೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದರೂ, ಈಗಿನ ಸ್ಥಿತಿಯಲ್ಲಿ ಚುನಾವಣೆಗೆ ಹೋದಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಎನ್ನುವ ಸಂದೇಶ ಹೋಗಿದೆ. ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಜೊತೆಗಿನ ಒಡನಾಟ ಕೊರತೆಯಿಂದಾಗಿ ಹಾಲಿ ಶಾಸಕ ಭರತ್ ಶೆಟ್ಟಿಗೆ ಮೈನಸ್ ಇದೆ ಎನ್ನುವ ಅಂಶ ರವಾನೆಯಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕಾಂಗ್ರೆಸಿನಿಂದ ಬಿಲ್ಲವ ಅಭ್ಯರ್ಥಿಯಾದಲ್ಲಿ ಬಿಜೆಪಿ ಗೆಲುವು ಕಷ್ಟ. ಇಲ್ಲದಿದ್ದರೆ ಕನಿಷ್ಠ ಐದು ಸಾವಿರ ಮತಗಳಿಂದ ಬಿಜೆಪಿ ಗೆಲ್ಲಲಿದೆ ಎನ್ನುವ ಮಾಹಿತಿ ಹೋಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಂ ಮತಗಳು ಈ ಬಾರಿ ಸೇರ್ಪಡೆಯಾಗಿದ್ದು, ಆ ಕಾರಣದಿಂದ ಬಿಜೆಪಿಗೆ ಅಲ್ಲಿ ಗೆಲುವು ಕಷ್ಟ ಅನ್ನುವ ಮಾಹಿತಿಗಳಿವೆ. ಈಗಿನ ಸನ್ನಿವೇಶದಲ್ಲಿ ಚುನಾವಣೆಯಾದರೆ, ರಮಾನಾಥ ರೈ ಅವರೇ ಅಭ್ಯರ್ಥಿಯಾಗಿದ್ದಲ್ಲಿ ಕಾಂಗ್ರೆಸ್ ಗೆಲ್ಲುವುದಂತೆ. ಮಾಹಿತಿ ಪ್ರಕಾರ, ಬಂಟ್ವಾಳ ಕ್ಷೇತ್ರದಲ್ಲಿ ಹಿಂದು – ಮುಸ್ಲಿಂ ಮತಗಳು ಸಮಬಲ ಆಗುವಷ್ಟು ಹತ್ತಿರ ಬಂದಿದೆಯಂತೆ. ಎಸ್ಡಿಪಿಐ ಅಡ್ಡಗಾಲು ಹಾಕದೇ ಇದ್ದರೆ, ಅಲ್ಲಿ ಕಾಂಗ್ರೆಸ್ ಗೆಲುವು ಕಷ್ಟ ಇಲ್ಲ ಎನ್ನುವ ವರದಿಯಿದೆ. ಹೀಗಾಗಿ ಹಾಲಿ ಬಿಜೆಪಿ ಶಾಸಕರು ಬಂಟ್ವಾಳದಲ್ಲಿ ಸ್ಪರ್ಧಿಸುವುದಕ್ಕೇ ಹಿಂದೇಟು ಹಾಕುತ್ತಿದ್ದಾರೆ ಅನ್ನುವ ಮಾಹಿತಿಗಳಿವೆ.
ಮೂಡುಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕರ ಬಗೆಗಾಗಲೀ, ಅಭಿವೃದ್ದಿ ಕಾರ್ಯದ ವಿಷಯದಲ್ಲಾಗಲೀ ಮೈನಸ್ ಇಲ್ಲ. ಆದರೆ, ಹಾಲಿ ಶಾಸಕರನ್ನು ಬದಲಾಯಿಸಬೇಕೆಂದು ಒಂದು ವರ್ಗ ಒತ್ತಡ ಹಾಕುತ್ತಿರುವುದು ಬಿಜೆಪಿ ಒಳಗಿನ ಮೈನಸ್ ಪಾಯಿಂಟ್. ಪುತ್ತೂರು ಮತ್ತು ಸುಳ್ಯ ಕ್ಷೇತ್ರದಲ್ಲಿ ಹಾಲಿ ಶಾಸಕರ ಬಗೆಗೆ ಕಾರ್ಯಕರ್ತರಲ್ಲಿ ಅಸಮಾಧಾನ ಇದೆಯಂತೆ. ಸುಳ್ಯ ಕ್ಷೇತ್ರದಲ್ಲಿ ಐದು ಬಾರಿಯ ಶಾಸಕ ಅಂಗಾರ ಸಚಿವರಾದರೂ, ಅಭಿವೃದ್ಧಿ ಕಾರ್ಯ ಆಗಿಲ್ಲ. ಕಾಮಗಾರಿಗಳಿಗೆ ವೇಗ ಸಿಕ್ಕಿಲ್ಲ ಅನ್ನುವ ನೋವು ಕಾರ್ಯಕರ್ತರಲ್ಲಿ ಜೋರಾಗಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಬದಲಿಸುವ ಬಗ್ಗೆ ಮಾತು ಕೇಳಿಬಂದಿದೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಹರೀಶ್ ಪೂಂಜ ಬಗ್ಗೆ ಕಾರ್ಯಕರ್ತರಲ್ಲಿ ಉತ್ತಮ ಅಭಿಪ್ರಾಯ ಇದೆ. ಜನರಲ್ಲಿಯೂ ಹಿಂದಿಗಿಂತ ಹೆಚ್ಚು ಅಭಿವೃದ್ಧಿ ಕಾರ್ಯ ಆಗುತ್ತಿದೆ ಅನ್ನುವ ಅಭಿಪ್ರಾಯಗಳಿವೆ. ಆದರೆ, ಬಿಲ್ಲವ ಮತ್ ಬ್ಯಾಂಕ್ ಆಧರಿಸಿ ಕಾಂಗ್ರೆಸ್ ಕಡೆಯಿಂದ ವರ್ಕೌಟ್ ಆಗುತ್ತಿರುವ ಮಾಹಿತಿ ರವಾನೆಯಾಗಿದೆ. ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅಲ್ಲಿ ಅತಿ ಹೆಚ್ಚು ಮತದಾರರಿರುವ ಬಿಲ್ಲವರ ಮತಗಳು ಒಡೆದು ಹೋಗುವ ಆತಂಕ ಬಿಜೆಪಿಗಿದೆ.
ಬೈಂದೂರು, ಕುಂದಾಪುರದಲ್ಲಿ ಅಭ್ಯರ್ಥಿ ಬದಲು
ಉಡುಪಿ ಜಿಲ್ಲೆಯಲ್ಲಿ ಕುಂದಾಪುರ, ಬೈಂದೂರು ಮತ್ತು ಕಾಪು ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ನಿಲ್ಲಿಸಲು ಪ್ಲಾನ್ ಆಗಿದೆ ಎನ್ನುವ ಮಾಹಿತಿಗಳಿವೆ. ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಬಗ್ಗೆ ಕಾರ್ಯಕರ್ತರಲ್ಲಿ ಸಕಾರಾತ್ಮಕ ಅಭಿಪ್ರಾಯಗಳಿಲ್ಲ. ಹಾಗಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬೈಂದೂರು ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು ಅನ್ನುವ ಅಭಿಪ್ರಾಯಗಳಿವೆ. ಕುಂದಾಪುರ ಕ್ಷೇತ್ರದಲ್ಲಿ ಅಜಾತಶತ್ರು ಎಂದೇ ಬಿಂಬಿತವಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಸುಳಿವು ಕೊಟ್ಟಿದ್ದಾರಂತೆ. ಅನಾರೋಗ್ಯ ಕಾರಣದಿಂದ ಕ್ಷೇತ್ರ ಬಿಟ್ಟು ಕೊಡಲಿದ್ದಾರೆ ಎನ್ನಲಾಗುತ್ತಿದ್ದು ಮಾಜಿ ನಾಯಕ ಎ.ಜಿ.ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿ ಬಿಜೆಪಿ ಸೀಟು ಪಡೆಯಲಿದ್ದಾರಂತೆ.
ಕಾಪು ಕ್ಷೇತ್ರದಲ್ಲಿ ಲಾಲಾಜಿ ಮೆಂಡನ್ ಅವರಿಗೆ ನಿವೃತ್ತಿ ಕೊಟ್ಟು ಪ್ರಮೋದ್ ಮಧ್ವರಾಜ್ ಅಥವಾ ಯಶಪಾಲ್ ಸುವರ್ಣ ಅವರಿಗೆ ಸೀಟು ಕೊಡುವ ಮಾತುಗಳಿವೆ. ಪ್ರಮೋದ್ ಇಲ್ಲಿ ಅಭ್ಯರ್ಥಿಯಾದರೆ, ಯಶಪಾಲ್ ಸುವರ್ಣ ಮುಂದೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನ್ನುವ ಮಾತು ಕೇಳಿಬಂದಿದೆ. ಯಶಪಾಲ್, ರಾಷ್ಟ್ರೀಯ ಎಸ್ಸಿ ಮೋರ್ಚಾದಲ್ಲಿ ಗುರುತಿಸಿಕೊಂಡಿರುವುದರಿಂದ ಸಂಸದ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ. ಇದೇ ವೇಳೆ, ಅಸೆಂಬ್ಲಿ ಚುನಾವಣೆ ಬಳಿಕ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕೂಡ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದ್ದು ಅವರಿಗಾಗಿ ವೇದಿಕೆ ಸಿದ್ಧಪಡಿಸುವ ಕಾರ್ಯವೂ ನಡೆದಿದೆ. ಹಾಗಾಗಿ ಪುತ್ತೂರು, ಮೂಡುಬಿದ್ರೆ, ಮಂಗಳೂರು ಉತ್ತರದತ್ತ ದೃಷ್ಟಿ ಬಿದ್ದಿದೆ ಎನ್ನುವ ಮಾಹಿತಿಗಳಿವೆ.
Here is a special Political analysis report of Plus and Minus of BJP in Dakshina Kannada, according to the analysis BJP to lose two constituency seats.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm