ಬ್ರೇಕಿಂಗ್ ನ್ಯೂಸ್
28-05-22 09:04 pm Mangalore Correspondent ಕರಾವಳಿ
ಮಂಗಳೂರು, ಮೇ 28: ಮದುವೆ ಮಂಟಪದಲ್ಲಿ ಇನ್ನೇನು ವರ ತಾಳಿ ಕಟ್ಟಲು ರೆಡಿಯಾಗುತ್ತಿದ್ದಾಗಲೇ ವಧು ವರನ ಬಗ್ಗೆಯೇ ಸಂಶಯ ಪಟ್ಟಿದ್ದಲ್ಲದೆ, ವಿನಾಕಾರಣ ರಂಪಾಟ ಮಾಡಿ ಮದುವೆ ಮಂಟಪದಿಂದಲೇ ಎದ್ದು ಹೋದ ಘಟನೆ ನಾರಾವಿಯಲ್ಲಿ ನಡೆದಿದೆ.
ಮೂಡುಕೊಣಾಜೆಯ ಯುವತಿ ಹಾಗೂ ನಾರಾವಿಯ ಯುವಕನ ಜೊತೆ ಮೇ 25ರಂದು ನಾರಾವಿಯಲ್ಲಿ ಮದುವೆ ಕಾರ್ಯಕ್ಕೆ ಸಿದ್ಧತೆ ನಡೆದಿತ್ತು. 500 ಮಂದಿಗೆ ಊಟಕ್ಕೂ ರೆಡಿ ಮಾಡಲಾಗಿತ್ತು. ಇನ್ನೇನು ಮದುವೆ ಕಾರ್ಯ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಯುವತಿ ರಂಪ ಶುರು ಮಾಡಿದ್ದಾಳೆ. ತಾಳಿ ಕಟ್ಟಲು ರೆಡಿಯಾಗುತ್ತಿದ್ದ ಯುವಕ, ತನಗೆ ಕೈ ತಾಗಿಸಿದ ಎಂದು ಹೇಳಿ ರಂಪ ಎತ್ತಿದ್ದ ಯುವತಿ ಬಳಿಕ ಮದುವೆ ಮಂಟಪದಿಂದಲೇ ಎದ್ದಿದ್ದಾಳೆ. ಅಲ್ಲದೆ, ನಿಶ್ಚಯ ಸಂದರ್ಭದಲ್ಲಿ ಬಂದಿದ್ದ ಹುಡುಗನೇ ಬೇರೆ. ಈಗ ಬಂದಿರುವ ಹುಡುಗನೇ ಬೇರೆ ಎಂಬುದಾಗಿ ಸಿಟ್ಟಿಗೆದ್ದು ರಂಪಾಟ ಮಾಡಿದ್ದಾಳೆ.
ಮದುವೆ ಕಾರ್ಯ ಅರ್ಧದಲ್ಲೇ ನಿಂತಿದ್ದಲ್ಲದೆ, ವಿಷಯ ವೇಣೂರು ಪೊಲೀಸರ ಬಳಿಗೆ ಹೋಗಿದೆ. ಮದುವೆಯೇನೋ ನಿಂತಿದೆ, ಮದುವೆಯ ಖರ್ಚು ಯಾರು ಕೊಡಬೇಕೆಂದು ವರನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಮಾತುಕತೆ ನಡೆಸಿ, ಎರಡೂ ಕಡೆಯವರು ಸಮಾನ ಖರ್ಚು ಭರಿಸುವಂತೆ ತಿಳಿಸಿದ್ದರು. 500 ಜನರಿಗೆ ಮಾಡಿದ್ದ ಊಟವನ್ನು ಬಳಿಕ ಪೊಲೀಸರ ಸಲಹೆಯಂತೆ ಅಲ್ಲಿಯೇ ಪಕ್ಕದ ಸರಕಾರಿ ಶಾಲೆಯ ಮಕ್ಕಳಿಗೆ ಕೊಡಿಸಿದ್ದಾರೆ. ಮದುವೆಗೆ ಬಂದಿದ್ದ ಒಂದಷ್ಟು ಜನ ಊಟ ಮಾಡಿಕೊಂಡು ಹಿಂತಿರುಗಿದ್ದಾರೆ.
ಪೊಲೀಸರ ಪ್ರಕಾರ, ವಧು ಸ್ವಲ್ಪ ಮಾನಸಿಕ ಅಸ್ವಸ್ಥಳಂತೆ ಮಾಡುತ್ತಿದ್ದಳಂತೆ. ತಾಳಿ ಕಟ್ಟುವಾಗ, ಕೈ ದೇಹಕ್ಕೆ ತಾಗುವುದು ಕಾಮನ್. ಆದರೆ, ಅದೇ ವಿಷಯ ಹಿಡಿದು ವಧು ರಂಪ ಮಾಡಿದ್ದಾಳೆ. ಯಾರು ಹೇಳಿದ್ದನ್ನೂ ಕೇಳುತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಮಾನಸಿಕ ಸ್ಥಿಮಿತ ಕಳಕೊಂಡ ರೀತಿ ವರ್ತಿಸುತ್ತಿದ್ದಳು. ಹೀಗಾಗಿ ವರನ ಕಡೆಯವರು ಕೂಡ ಇದನ್ನು ಮದುವೆಯಾದರೆ ನಮಗೆ ಉಳಿಗಾಲ ಇಲ್ಲ ಎಂದು ಸಂಬಂಧ ಕಡಿದುಕೊಳ್ಳಲು ಒಪ್ಪಿದ್ದರಂತೆ. ವರನ ಕಡೆಯವರ ಪ್ರಕಾರ, ನಿಶ್ಚಯ ಆದಂದಿನಿಂದಲೂ ಯುವತಿ ಅದೇ ರೀತಿ ವರ್ತಿಸುತ್ತಿದ್ದಳಂತೆ. ಹೀಗಾಗಿ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ, ಮದುವೆಯ ಖರ್ಚನ್ನು ಸಮಾನವಾಗಿ ಭರಿಸಲು ಹೇಳಿದ್ದು, ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ.
In a bizarre incident reported from Naravi in the taluk on May 25, a bride threw the garland and refused to get married to the groom just because the groom’s hand brushed her neck during the traditional garland exchange.The wedding of the girl from Moodukonaje and boy from Naravi was fixed and was to be held on May 25 at a marriage hall in Naravi.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm