ಕದ್ರಿ, ಧರ್ಮಸ್ಥಳ, ತಿರುಪತಿ ಬೌದ್ಧ ಮಂದಿರಗಳು, ನೀವು ಒಂದು ಮಸೀದಿ ಕೇಳಿದರೆ ನಾವು 84 ಸಾವಿರ ಬೌದ್ಧ ಮಂದಿರ ಕೇಳುತ್ತೇವೆ ; ಭಾಸ್ಕರ ಪ್ರಸಾದ್  

28-05-22 01:09 pm       Mangalore Correspondent   ಕರಾವಳಿ

ಇಲ್ಲಿ ಕೆಲವರು ಜೀವ ತೆತ್ತಾದರೂ, ಮಳಲಿ ಮಸೀದಿ ಬಿಟ್ಟು ಕೊಡಲ್ಲ ಎಂದಿದ್ದಾರೆ. ಆದರೆ ನಾನು ಹಾಗೆ ಹೇಳೋದಿಲ್ಲ. ಪ್ರಮೋದ್ ಮುತಾಲಿಕ್, ಮಳಲಿ ಮಸೀದಿ ಬಿಟ್ಟು ಕೊಡದಿದ್ದರೆ ಹತ್ಯಾಕಾಂಡ ನಡೆಸುವುದಾಗಿ ಹೇಳಿದ್ದಾನೆ.

ಮಂಗಳೂರು, ಮೇ 28 : ಇಲ್ಲಿ ಕೆಲವರು ಜೀವ ತೆತ್ತಾದರೂ, ಮಳಲಿ ಮಸೀದಿ ಬಿಟ್ಟು ಕೊಡಲ್ಲ ಎಂದಿದ್ದಾರೆ. ಆದರೆ ನಾನು ಹಾಗೆ ಹೇಳೋದಿಲ್ಲ. ಪ್ರಮೋದ್ ಮುತಾಲಿಕ್, ಮಳಲಿ ಮಸೀದಿ ಬಿಟ್ಟು ಕೊಡದಿದ್ದರೆ ಹತ್ಯಾಕಾಂಡ ನಡೆಸುವುದಾಗಿ ಹೇಳಿದ್ದಾನೆ. ಇವರು ಹತ್ಯಾಕಾಂಡ ನಡೆಸೋದಾದ್ರೆ ನಾವೇನು ಬಳೆ ಹಾಕ್ಕೊಂಡು ಕುಳಿತಿಲ್ಲ. ಈ ಪ್ರಮೋದ್ ಮುತಾಲಿಕ್ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ಮಳಲಿಗೆ ಬಂದು ಒಂದು ತುಂಡು ಇಟ್ಟಿಗೆ ಎತ್ತಿಕೊಂಡು ಹೋಗಲಿ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಭಾಸ್ಕರ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. 

ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಮಾತನಾಡಿದ ಭಾಸ್ಕರ್ ಪ್ರಸಾದ್, ಮಳಲಿಯ ಮಸೀದಿ ಎತ್ತಬೇಕು, ದೇಶಾದ್ಯಂತ 36 ಸಾವಿರ ಮಸೀದಿಗಳನ್ನು ಒಡೆದು ಮಂದಿರ ನಿರ್ಮಿಸುತ್ತೇವೆ ಎನ್ನುವ ಈಶ್ವರಪ್ಪನಂಥವರಿಗೆ ಪ್ರಶ್ನೆ ಕೇಳುತ್ತೇನೆ. ಹಿಂದೆ ಅಶೋಕ ಚಕ್ರವರ್ತಿ ಈ ದೇಶದಲ್ಲಿ 84 ಸಾವಿರ ಬೌದ್ಧ ಮಂದಿರಗಳನ್ನು ನಿರ್ಮಿಸಿದ್ದ. ಆನಂತರ ಮೌರ್ಯರ ಕಾಲದ ಬಳಿಕ ಬ್ರಾಹ್ಮಣ ರಾಜನೊಬ್ಬ ಅಧಿಕಾರಕ್ಕೆ ಬಂದು  ಎಲ್ಲ ಬೌದ್ಧ ಮಂದಿರಗಳನ್ನು ನಾಶ ಮಾಡಿ ಅಲ್ಲಿಯೆಲ್ಲಾ ರಾಮ, ಕೃಷ್ಣನ ದೇವಸ್ಥಾನಗಳನ್ನು ನಿರ್ಮಿಸಿದ್ದ. ನೀವು ಮಸೀದಿ ಬಗ್ಗೆ ಕೇಳಿದರೆ, ನಾವು ಎಲ್ಲ ಬೌದ್ಧ ಮಂದಿರಗಳನ್ನು ಕೇಳುತ್ತೇವೆ. ನಿಮಗೆ ಕೊಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು. 

1991 ರಲ್ಲಿ ದೇಶದಲ್ಲಿ ಇರುವ ಎಲ್ಲ ಮಂದಿರ, ಮಸೀದಿಗಳು ಯಥಾಸ್ಥಿತಿಯಲ್ಲೇ ಇರಬೇಕು. ಯಾವುದನ್ನೂ ಕೆದಕಲು ಹೋಗಬಾರದು ಎಂದು ಕಾನೂನು ತರಲಾಗಿತ್ತು. ಹಾಗಾಗಿ ನಾವು ಈ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಆದರೆ ನೀವು ಪ್ರಶ್ನೆ ಎತ್ತಿದರೆ, ನಾವು 84 ಸಾವಿರ ದೇವಸ್ಥಾನಗಳ ಬಗ್ಗೆಯೂ ಪ್ರಶ್ನೆ ಮಾಡುತ್ತೇವೆ. ಕದ್ರಿ ಮಜುನಾಥ, ಧರ್ಮಸ್ಥಳ ಮಂಜುನಾಥ, ಅನಂತ ಪದ್ಮನಾಭಸ್ವಾಮಿ ದೇಗುಲದಿಂದ ತೊಡಗಿ ತಿರುಪತಿಯ ವರೆಗೂ ಎಲ್ಲದಕ್ಕೂ ದಾಖಲೆಗಳಿವೆ. ಹತ್ತನೇ ಶತಮಾನದಲ್ಲಿ ಕದ್ರಿಯ ಬೌದ್ಧ ಮಂದಿರವನ್ನು ಹಿಂದುಗಳ ಮಂದಿರ ಮಾಡಲಾಗಿತ್ತು. ಬೌದ್ಧರ ಮಂದಿರವನ್ನು ದೇವಸ್ಥಾನ ಮಾಡಿದ್ದಕ್ಕೆ ಬಹಳಷ್ಟು ಸಂಶೋಧನೆಗಳಾಗಿವೆ, ಸರಕಾರದ ಬಳಿ ದಾಖಲೆಗಳಿವೆ. ನೀವು ಒಂದು ಪ್ರಶ್ನೆ ಇಟ್ಟರೆ ನಮ್ಮಲ್ಲಿ ನೂರು ಪ್ರಶ್ನೆಗಳಿವೆ ಎಂದು ಭಾಸ್ಕರ್ ಪ್ರಸಾದ್ ಹೇಳಿದ್ದಾರೆ. 

Kadri Manjunatheshwara Temple | Kadri Manjunatheshwara Temple Festivals

Dharmasthala Temple - Wikipedia

ಎನ್ಇಪಿ ಜಾರಿ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ಮಾಡಿಲ್ಲ. ಎಸ್ಡಿಪಿಐ ಮಾತ್ರ ವಿರೋಧ ಮಾಡಿದ್ದು. ಎನ್ಇಪಿ ನೀತಿಯ ಪರಿಣಾಮ ಈಗ ಗೊತ್ತಾಗುತ್ತಿದೆ. ಯಾರೋ ಒಬ್ಬ ಫೇಸ್‌ಬುಕ್‌ ನಲ್ಲಿ ಟ್ರೋಲ್ ಮಾಡುತ್ತಿದ್ದ, ಗಾಂಧೀಜಿ, ಅಂಬೇಡ್ಕರ್, ಕುವೆಂಪು ಬಗ್ಗೆ ದೂರುತ್ತಿದ್ದ, ಫೇಸ್‌ಬುಕ್‌ ನಲ್ಲಿ ಕುಟ್ಟುತ್ತಿದ್ದ ಅಯೋಗ್ಯನನ್ನು ಮಕ್ಕಳ ಪಠ್ಯ ರಚನಾ ಸಮಿತಿಯ ಅಧ್ಯಕ್ಷನಾಗಿ ಮಾಡಿದ್ದಾರೆ. ಕುವೆಂಪು, ದೇವನೂರು ಬಗ್ಗೆ ಪರಿಚಯದಲ್ಲಿಯೇ ಅವಹೇಳನ ಮಾಡಿದ್ದಾನೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಡಿ, ಹಿಂದು ರಾಷ್ಟ್ರಕ್ಕಾಗಿ ಬ್ರಿಟಿಷರ ಜೊತೆ ಕೈಜೋಡಿಸಿ ಎಂದಿದ್ದ ಹೆಡಗೇವಾರ್ ಬಗ್ಗೆ ಪಠ್ಯ ಕೊಟ್ಟಿದ್ದಾರೆ. ವಿದೇಶದಲ್ಲಿ ಕೂಡಿಟ್ಟ ಹಣವನ್ನು ಮರಳಿ ತಂದರೆ ಹಳ್ಳಿಯಿಂದ ಡೆಲ್ಲಿ ವರೆಗೆ ಚಿನ್ನದ ರಸ್ತೆ ಮಾಡಬಹುದೆಂದು ಪುಂಗಿ ಊದಿದ್ದ ಹೆಂಗ್ ಪುಂಗ್ಲಿ ಸೂಲಿಬೆಲೆ ಬಗ್ಗೆ ಮಕ್ಕಳು ಓದಬೇಕಾ.. ಇವರನ್ನು ಪಠ್ಯದಲ್ಲಿ ಓದಿದರೆ ಮಕ್ಕಳು ಏನಾಗಬೇಕು. ಇಂಥ ಪಠ್ಯ ರಚಿಸಿದ ನಾಲಾಯಕ್ ವ್ಯಕ್ತಿಯ ಶಿಕ್ಷಣ ಮಟ್ಟ ಏನೆಂದೇ ಗೊತ್ತಿಲ್ಲ. ಆತ ಸಿಇಟಿ ಪ್ರೊಫೆಸರ್ ಎಂದು ಸುಳ್ಳು ಹೇಳಿದ ವ್ಯಕ್ತಿ ಶಿಕ್ಷಣ ಸಚಿವರಾಗಿರುವುದು ನಮ್ಮ ದುರಂತ. ಪ್ರೊಫೆಸರ್ ಆಗಲು ಎಷ್ಟು ವಿದ್ಯಾರ್ಹತೆ ಬೇಕೆಂದೇ ತಿಳಿಯದ ವ್ಯಕ್ತಿ ನಮ್ಮ ಶಿಕ್ಷಣ ಸಚಿವ ಎಂದು ಹೀಗಳೆದಿದ್ದಾರೆ ಭಾಸ್ಕರ್ ಪ್ರಸಾದ್.

Malali row, SDPI Bhaskar Prasad in Mangalore claims Dharmasthala and kadri temples were once Bowda temples. If VHP is demanding for temples from mosques then even we can demand Bowda temples that were once in Dharmasthala and kadri he added. Sdpi during a mass program also said that VHP can not even touch the soil of Malali mosque.