ಬ್ರೇಕಿಂಗ್ ನ್ಯೂಸ್
22-09-20 04:57 pm Headline Karnataka News Network ಸಿನಿಮಾ
ಮುಂಬೈ, ಸೆಪ್ಟಂಬರ್ 22: ಬಾಲಿವುಡ್ ಡ್ರಗ್ ನಂಟು ಈಗ ಖ್ಯಾತ ನಟಿ ದೀಪಿಕಾ ಪಡುಕೋಣೆ ಕೊರಳು ಸುತ್ತಿಕೊಂಡಿದೆ. ದೀಪಿಕಾ ತನ್ನ ಮ್ಯಾನೇಜರ್ ಜೊತೆ ವಾಟ್ಸಪ್ ಸಂಭಾಷಣೆ ನಡೆಸಿದ್ದ ಪ್ರತಿಗಳು ರಿವೀಲ್ ಆಗಿದ್ದು, ಅದರಲ್ಲಿ ದೀಪಿಕಾ ಡ್ರಗ್ಸ್ ಕೇಳುವ ಸಂಭಾಷಣೆ ಈಗ ವೈರಲ್ ಆಗಿದೆ. ಹೀಗಾಗಿ ಮುಂಬೈನ ಎನ್ ಸಿ ಬಿ ಅಧಿಕಾರಿಗಳು ಇವತ್ತು ಅಥವಾ ನಾಳೆ ದೀಪಿಕಾಗೆ ಸಮನ್ಸ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈಗಾಗ್ಲೇ ನಟಿ ದೀಪಿಕಾ, ಮ್ಯಾನೇಜರ್ ಆಗಿದ್ದ ಕರಿಷ್ಮಾ ಪ್ರಕಾಶ್ ಳನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಾಟ್ಸಪ್ ಸಂದೇಶದಲ್ಲಿ ಇವರಿಬ್ಬರ ಸಂಭಾಷಣೆ ಹೀಗಿದೆ.
ದೀಪಿಕಾ – ‘ಮಾಲ್’ ಇದೆಯಾ ?
ಕರಿಷ್ಮಾ – ಇದೆ, ನನ್ನ ಮನೇಲಿದೆ, ಈಗ ನಾನು ಬಾಂದ್ರಾದಲ್ಲಿದ್ದೇನೆ…
ಕರಿಷ್ಮಾ – ನಿಮ್ಗೆ ಬೇಕಿದ್ದರೆ ಅಮಿತ್ ಬಳಿ ತಂದುಕೊಡಲು ಹೇಳ್ತೀನಿ...
ದೀಪಿಕಾ – ಯಸ್ ಪ್ಲೀಸ್...
ಕರಿಷ್ಮಾ – ಅಮಿತ್ ಬಳಿಯಿದೆ, ಅವನು ತಂದುಕೊಡುತ್ತಾನೆ...’’
ಹೀಗೆ ಮುಂದುವರಿಯುತ್ತದೆ ಈ ಸಂಭಾಷಣೆ. ವಾಟ್ಸಪ್ ನಲ್ಲಿ ಹೀಗೆ ಸಂಭಾಷಣೆ ನಡೆಸಿದ್ದು, ದೀಪಿಕಾ ಡ್ರಗ್ಸ್ ನಂಟು ಹೊಂದಿದ್ದಳೆಂಬುದಕ್ಕೆ ಪುರಾವೆ ಎನ್ನಲಾಗುತ್ತಿದೆ.
KWAN ಎನ್ನುವ ಹೆಸರಿನ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯಲ್ಲಿ ಕರಿಷ್ಮಾ ಪ್ರಕಾಶ್ ಕೆಲಸ ಮಾಡುತ್ತಾಳೆ. ಇದೇ ಸಂಸ್ಥೆ ದೀಪಿಕಾ ಪಡುಕೋಣೆಯ ಚಲನಚಿತ್ರ ಮತ್ತಿತರ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತದೆ. ತಂಡದ ಮ್ಯಾನೇಜರ್ ಆಗಿರುವ ಜಯಾ ಸಹಾನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಯೇ ಡ್ರಗ್ ವಹಿವಾಟಿನ ಕಿಂಗ್ ಪಿನ್ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಈಗ ಜಯಾ ಸಹಾ ಮತ್ತು ಕರಿಷ್ಮಾ ಮೊಬೈಲಿನಲ್ಲಿದ್ದ ವಾಟ್ಸಪ್ ಸಂದೇಶಗಳು ಪೊಲೀಸರಿಗೆ ಲಭಿಸಿದ್ದು, ಅವರ ಜೊತೆ ಸಂಪರ್ಕ ಇದ್ದವರನ್ನು ಜಾಲಾಡ ತೊಡಗಿದ್ದಾರೆ. ದೀಪಿಕಾ ಮತ್ತು ಕರಿಷ್ಮಾ ನಡುವೆ 2017ರ ಅಕ್ಟೋಬರ್ 28ರಂದು ಈ ಸಂಭಾಷಣೆ ನಡೆದಿತ್ತು ಎನ್ನುತ್ತವೆ ವರದಿಗಳು.
ಜಯಾ ಸಹಾ ನೀಡಿರುವ ಮಾಹಿತಿ ಆಧರಿಸಿ ಮ್ಯಾನೇಜ್ಮೆಂಟ್ ಕಂಪನಿಯ ಸಿಇಓ ಧ್ರುವ್ ಚಿಟ್ಗೋಪ್ಕರ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ಸಹಾ ಜೊತೆಗೆ ನಂಟು ಹೊಂದಿದ್ದ ಚಿತ್ರ ನಿರ್ಮಾಪಕ ಮಧು ಮಂತೇನಾಗೆ ಬುಧವಾರ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ. ಹೆಸರಾಂತ ಚಿತ್ರಗಳಾದ ಘಜ್ನಿ, ಕ್ವೀನ್, ಸೂಪರ್ 30 ಚಿತ್ರ ನಿರ್ಮಾಣ ಮಾಡಿದ್ದ ಮಧು ಮಂತೇನಾ, ಕ್ವಾನ್ ಕಂಪೆನಿಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ.
ಇದಲ್ಲದೆ, ನಟಿಯರಾದ ಸಾರಾ, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್, ಫ್ಯಾಷನ್ ಡಿಸೈನರ್ ಸಿಮೋನ್ ಕಂಭಟ್ಟರಿಗೂ ಎನ್ ಸಿಬಿ ನೋಟೀಸ್ ನೀಡಿ, ವಿಚಾರಣೆಗೆ ಕರೆಯಲಿದೆ ಎನ್ನಲಾಗುತ್ತಿದೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಡ್ರಗ್ ನಂಟು ಕೇಳಿ ಬಂದಿದ್ದರಿಂದ ಈಗಾಗ್ಲೇ ರಿಯಾ ಚಕ್ರಬರ್ತಿ ಮತ್ತು ಆಕೆಯ ಸೋದರ ಶೋವಿಕ್ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ, ರಿಯಾ ಮತ್ತು ಶೋವಿಕ್ ಅವರನ್ನು ಅಕ್ಟೋಬರ್ 6ರ ವರೆಗೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm