ಬ್ರೇಕಿಂಗ್ ನ್ಯೂಸ್
12-09-20 07:44 pm Mangalore Reporter ಸಿನಿಮಾ
ಮಂಗಳೂರು, ಸೆಪ್ಟಂಬರ್ 12: ಶ್ರೀ ಹರಿ ಕಥಾನಕ ಎನ್ನುವ ಕನ್ನಡ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದ್ದು, ಮುಂದಿನ ತಿಂಗಳು ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ.
ವಿಶೇಷ ಅಂದ್ರೆ ಚಿತ್ರದ ಟ್ರೈಲರ್ ಸುದೀರ್ಘ 18 ನಿಮಿಷ ಇರಲಿದೆಯಂತೆ. ಆದರೆ, ಟ್ರೈಲರ್ ನಲ್ಲಿ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಡಲ್ಲ. ಎಲ್ಲಿ ಟ್ರೈಲರ್ ಕೊನೆಗೊಳ್ಳುತ್ತದೋ ಅಲ್ಲಿಂದ ಫಿಲ್ಮ್ ಪ್ರಾರಂಭವಾಗಲಿದ್ದು ಹೊಸ ಮಾದರಿಯ ಟ್ರೈಲರ್ ನಿರ್ಮಿಸುವುದೇ ನಮ್ಮ ಚಿತ್ರದ ಹೆಚ್ಚುಗಾರಿಕೆ ಎನ್ನುವ ಮಾತನ್ನು ಚಿತ್ರದ ನಿರ್ದೇಶಕ ಶರತ್ ಕುಮಾರ್ ಹೇಳುತ್ತಾರೆ. ಟ್ರೈಲರ್ ನಲ್ಲಿ ಕಾಶೀನಾಥ್, ಉಪೇಂದ್ರ ಚಿತ್ರಗಳ ಮಾದರಿಯಲ್ಲಿ ಡಬಲ್ ಮೀನಿಂಗ್ ವರ್ಡ್ ಪ್ಲೇ ಇರಲಿದ್ದು, ಸಂಪೂರ್ಣ ಚಲನಚಿತ್ರವು ರೊಮ್ಯಾಂಟಿಕ ಕಾಮಿಡಿ ಸ್ವರೂಪದಲ್ಲಿರಲಿದೆ ಎನ್ನುತ್ತಾರೆ.

ಲುಂಗಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಅಕ್ಷಿತ್ ಶೆಟ್ಟಿ ಮೊದಲ ಬಾರಿಗೆ ಅಭಿನಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಒಂದು ಮೊಟ್ಟೆಯ ಕತೆ ಖ್ಯಾತಿಯ ಶೈಲಶ್ರೀ ಚಿತ್ರದ ನಾಯಕಿಯಾಗಿದ್ದಾರೆ. ಹೊಸ ಮಾದರಿಯ ಟ್ರೈಲರನ್ನು ದಿವಂಗತ ನಟ ಕಾಶಿನಾಥ್ ಅವರಿಗೆ ಅರ್ಪಿಸುವುದಾಗಿ ಹೇಳುವ ಚಿತ್ರತಂಡ, ಸದ್ಯಕ್ಕೆ ನಟ - ನಟಿಯರ ಪೋಸ್ಟರ್ ಬಿಡುಗಡೆ ಹಂತದಲ್ಲಿ ಬಿಝಿಯಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ನಾಯಕಿ ಸಾನ್ವಿ ಶ್ರೀವಾಸ್ತವ, ಚಿತ್ರದ ಹೀರೋಯಿನ್ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಟೈಟಲ್ ಫಸ್ಟ್ ಲುಕ್ ಪೋಸ್ಟರನ್ನು ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಹೀರೋ ಫಸ್ಟ್ ಲುಕ್ ಪೋಸ್ಟರನ್ನು ಟಗರು ಖ್ಯಾತಿಯ ಡಾಲಿ ಧನಂಜಯ್, ಗೆಸ್ ದಿ ಟೈಟಲ್ ಪೋಸ್ಟರನ್ನು ಗಿರ್ಗಿಟ್ ಖ್ಯಾತಿಯ ರೂಪೇಶ್ ಶೆಟ್ಟಿ , ಟೈಗರ್ರಾಜ ಪೋಸ್ಟರನ್ನ ಸಲಗದ ಖಳನಾಯಕ ಯಶ್ ಶೆಟ್ಟಿ ರಿಲೀಸ್ ಮಾಡಿದ್ದಾರೆ.



ಅಂದಹಾಗೆ, ಹೊಸ ಚಿತ್ರದಲ್ಲಿ ನಾಯಕ - ನಾಯಕಿಯರು ಸೇರಿ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಕರಾವಳಿಯವರೇ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಏಳು ವರ್ಷಗಳಿಂದ ಕೆಲಸ ಮಾಡುತ್ತಿರುವ ಶಿರ್ವ ಮೂಲದ ಶರತ್ ಕುಮಾರ್, ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಒಟ್ಟು ಚಿತ್ರ ಕಾಶಿನಾಥ್ ಚಿತ್ರವನ್ನು ನೆನಪಿಸುವ ರೀತಿ ಇರಲಿದ್ದು, ರೊಮ್ಯಾಂಟಿಕ್ ಕಾಮೆಡಿಯಿಂದ ಕೂಡಿರುತ್ತದೆ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದು ಆಸಕ್ತ ನಿರ್ಮಾಪಕರ ಹುಡುಕಾಟಕ್ಕಾಗಿ ಪ್ರೊಡ್ಯೂಸರ್ ಪಿಚ್ ಟ್ರೈಲರ್ ಕಟ್ ಆಗಿದೆ.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm