ಬ್ರೇಕಿಂಗ್ ನ್ಯೂಸ್
01-08-20 11:38 am Headline Karnataka News Network ಸಿನಿಮಾ
ಈ ಬಾರಿಯ ಐಪಿಎಲ್ಗೆ ಸ್ಟೇಡಿಯಂನಲ್ಲಿ ವೀಕ್ಷಕರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಮುಂದಿನ ತಿಂಗಳು ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಕಲ ತಯಾರಿಯಲ್ಲಿ ತೊಡಗಿಕೊಂಡಿದೆ.
ನಾಳೆ ಆಗಸ್ಟ್ 2 ರಂದು ಬಿಸಿಸಿಐ ವೇಳಾಪಟ್ಟಿಯ ಅಂತಿಮ ರೂಪ, ಮತ್ತಿತರ ವ್ಯವಸ್ಥೆ ಕುರಿತು ಆಡಳಿತಾತ್ಮಕ ಸಭೆ ನಡೆಸಲಿದೆ. ಈ ಸಭೆಯಲ್ಲಿ ಐಪಿಎಲ್ನ ಎಲ್ಲಾ ಫ್ರಾಂಚೈಸಿಗಳು ಟೂರ್ನಮೆಂಟ್ನ ವಿಧಾನದ ಕುರಿತಾಗಿ ಸ್ಪಷ್ಟ ಚಿತ್ರಣವನ್ನು ದೊರೆಯಲಿದೆ ಎಂದು ತಿಳಿದು ಬಂದಿದೆ.
ಇನ್ನೂ ಈ ಬಾರಿಯ ಐಪಿಎಲ್ಗೆ ಸ್ಟೇಡಿಯಂನಲ್ಲಿ ವೀಕ್ಷಕರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಆದರೆ ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುಎಇ ಸರ್ಕಾರ ಟೂರ್ನಮೆಂಟ್ ವೀಕ್ಷಿಸಲು ಶೇ.30ರಿಂದ 50ರಷ್ಟು ಅಭಿಮಾನಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೊರೋನಾ ವೈರಸ್ ಕಾರಣದಿಂದ ಈಗ ಕ್ರಿಕೆಟ್ ಹಾಗೂ ಇನ್ನಿತರ ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿವೆ. ಆದರೆ, ಐಪಿಎಲ್ ವೇಳೆ ಶೇ. 30ರಿಂದ ಶೇ. 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡಲು ಪ್ರಯತ್ನಿಸುವುದಾಗಿ ಯುಎಇ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ ಹೇಳಿದ್ದಾರೆ.
ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ನಮ್ಮ ಜನರು ಅನುಭವಿಸಬೇಕೆಂದು ನಾವು ಖಂಡಿತವಾಗಿ ಬಯಸುತ್ತೇವೆ. ಆದರೆ ಇದು ಸಂಪೂರ್ಣವಾಗಿ ಸರ್ಕಾರದ ನಿರ್ಧಾರವಾಗಿದೆ. ಹೆಚ್ಚಿನ ಪಂದ್ಯಗಳಿಗೆ 30-50ಶೇಕಡಾದಷ್ಟು ಹಾಜರಾತೊಯಿರುತ್ತದೆ. ಇದಕ್ಕೆ ನಮ್ಮ ಸರ್ಕಾರದ ಅನುಮೋದನೆ ಪಡೆಯುವ ಭರವಸೆ ಇದೆ ಎಂಬುದು ಮುಬಾಶ್ಶಿರ್ ಉಸ್ಮಾನಿ ಮಾತು.
ಬಿಸಿಸಿಐ ಹಾಗೂ ಭಾರತ ಸರಕಾರದಿಂದ ಕೂಟಕ್ಕೆ ಅಂಕಿತ ಬಿದ್ದೊಡನೆ ನಾವು ನಮ್ಮ ಸರಕಾರವನ್ನು ಸಂಪರ್ಕಿಸಲಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಹಾಗೂ ಬಿಸಿಸಿಐ ಮಾರ್ಗಸೂಚಿಯನ್ನು ಮುಂದಿರಿಸಲಿದ್ದೇವೆ ಎಂದು ಉಸ್ಮಾನಿ ಹೇಳಿದ್ದಾರೆ.
ನಾಳೆ ನಡೆಯಲಿರುವ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಬಿಸಿಸಿಐನ ಹಿರಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ವಿವಿಧ ಪಾಲುದಾರರೊಂದಿಗೆ ಮಾತನಾಡುವ ನಿರೀಕ್ಷೆಯಿದೆ.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am