ಬ್ರೇಕಿಂಗ್ ನ್ಯೂಸ್
24-02-21 12:00 pm Source: FILMIBEAT ಸಿನಿಮಾ
ಇದೊಂದು ಕಾಲ್ಪನಿಕ ಚಿತ್ರಕಥೆ, ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿಲ್ಲ, ಚಿತ್ರಕಥೆಗೆ ಆ ಸೀನ್ ಬೇಕಿತ್ತು ಎನ್ನುವ ಸ್ಟ್ಯಾಂಡರ್ಡ್ ಉತ್ತರವನ್ನು, ಚಿತ್ರ ವಿವಾದಕ್ಕೆ ಈಡಾದ ನಂತರ ಎಲ್ಲರೂ ಕೊಡುವಂತದ್ದೇ.. ಆದರೆ, ಮನೋರಂಜನೆ ಎಂದು ಹೇಳಿಕೊಂಡು ಸಮುದಾಯವೊಂದನ್ನು ಅವಹೇಳನ ಮಾಡುವುದು ಎಷ್ಟು ಸರಿ? ಇಂದು ಬ್ರಾಹ್ಮಣರು ಇರಬಹುದು, ಸುಮ್ಮನಿದ್ದರೆ ಇನ್ನೊಂದು ಸಮುದಾಯವೂ ಇರಬಹುದು. ರಾಜ್ಯದ ಪ್ರಬಲ ಸಮುದಾಯಗಳ ತಂಟೆಗೇನಾದರೂ ಹೋಗಿದ್ದರೆ, ಚಿತ್ರತಂಡ ಪ್ರಮೋಶನ್ ಗೆ ಹೋಗುವ ಬದಲು, ವಿರೋಧವನ್ನು ಸಮಾಧಾನಿಸಲೆಂದೇ ಸಮಯ ವಿನಿಯೋಗಿಸಬೇಕಾಗಿತ್ತು.
1999ರಲ್ಲಿ ಬಿಡುಗಡೆಯಾದ ಉಪೇಂದ್ರ ಸಿನಿಮಾದಲ್ಲೂ ಬ್ರಾಹ್ಮಣರ ಅವಹೇಳನವಾಗಿತ್ತು. ಆ ಚಿತ್ರದ ಹೀರೋ ಅದೇ ಸಮುದಾಯದವರು ಎಂದು ವಿರೋಧ ವ್ಯಕ್ತವಾಗಿಲ್ಲ ಎಂದೇನೂ ಇಲ್ಲ, ಆಗಲೂ ಆಗಿತ್ತು. ಆದರೆ, ಎರಡು ದಶಕಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ ಆದಾಗಿದ್ದರಿಂದ ಈಗಿನಂತೆ ಟೆಕ್ನಾಲಜಿ, ಸೋಶಿಯಲ್ ಮಿಡಿಯಾ ಪವರ್ ಪುಲ್ ಆಗಿರಲಿಲ್ಲ.
ಏನು ಇಂದು ಕನ್ನಡ ಮತ್ತು ತೆಲುಗು ಬಾಕ್ಸಾಫೀಸ್ ನಲ್ಲಿ ಮತ್ತು ಕಾಂಟ್ರವರ್ಸಿಯಿಂದ ಸದ್ದು ಮಾಡುತ್ತಿರುವ ಪೊಗರು ಸಿನಿಮಾದಲ್ಲಿ, ನಾಯಕ ಪವನಸುತ ಆಂಜನೇಯನ ಭಕ್ತ. ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕ ಆಂಜನೇಯನ ಪ್ರತಿಮೆಯ ಮುಂದೆ ಕಣ್ಣೀರು ಹಾಕುತ್ತಾ ಡೈಲಾಗ್ ಮೇಲೆ ಡೈಲಾಗ್ ಹೊಡಿತಾನೆ. ನಾಯಕನ ಆರಾಧ್ಯದೈವ ಕೂಡಾ ಒಬ್ಬ ಜನಿವಾರ ಸೂತ್ರಧಾರಿ ಎನ್ನುವುದರ ಬಗ್ಗೆ ನಿರ್ದೇಶಕರಿಗೆ ತಿಳಿದಿಲ್ಲವೇನೋ? ಈ ಚಿತ್ರಕ್ಕೆ ಇಷ್ಟರ ಮಟ್ಟಿಗೆ ವಿರೋಧ ಎದುರಾಗುತ್ತಿರುವುದಕ್ಕೆ ಎರಡು ಕಾರಣಗಳು ಇರಬಹುದು.
ರಾಜ್ಯದ ಮುಜರಾಯಿ ವ್ಯಾಪ್ತಿಯ ಸಿ-ಪ್ರವರ್ಗದ ದೇವಾಲಯ
ಚಿತ್ರದಲ್ಲಿ ಕನಿಷ್ಠ ಹತ್ತರಿಂದ ಹನ್ನೆರಡು ಒಂದು ಸಮುದಾಯವನ್ನು ಅವಹೇಳನ ಮಾಡುವ ದೃಶ್ಯ/ಸಂಭಾಷಣೆಗಳಿವೆ. ಚಪ್ಪಲಿಯಿಂದ ಹಿಡಿದು ಮಂಗಳಾರತಿಯವರೆಗೆ ದುಡ್ಡು, ತಟ್ಟೆಕಾಸು ಎನ್ನುವ ಪದಗಳನ್ನು ಬಳಸಲಾಗಿದೆ. ರಾಜ್ಯದ ಮುಜರಾಯಿ ವ್ಯಾಪ್ತಿಯ ಸಿ-ಪ್ರವರ್ಗದ ದೇವಾಲಯಗಳ ಅರ್ಚಕರಿಗೆ ದೇವರಿಗೆ ಹೂವು/ತುಳಸಿ ಹಾಕಲು ತಟ್ಟೆಕಾಸು ಸಾಕಾಗುವುದಿಲ್ಲ, ಕುಟುಂಬ ನಿರ್ವಹಣೆ ನಂತರದ ವಿಚಾರ. ಅಲ್ಲದೇ, ಎಲ್ಲಾ ಸೇವೆಗೂ ದುಡ್ಡು ತೆಗೆದುಕೊಳ್ಳುವ ಪದ್ದತಿ ಬರೀ ಬ್ರಾಹ್ಮಣರ ಮೇಲ್ವಿಚಾರಿಕೆಯಲ್ಲಿ ನಡೆಯುವ ದೇವಾಲಗಳಲ್ಲಿ ಮಾತ್ರ ಇದೆಯಾ?
ಬ್ರಾಹ್ಮಣರು ಏನು ಮಾಡಿಯಾರು
ಬ್ರಾಹ್ಮಣರು ಏನು ಮಾಡಿಯಾರು ಎಂದು ಚಿತ್ರತಂಡ ಯೋಚಿಸಿದ್ದಿರಬಹುದು ಮತ್ತು ಈ ಮಟ್ಟಿನ ವಿರೋಧವನ್ನು ನಿರೀಕ್ಷಿಸಿರಲಿಕ್ಕಿಲ್ಲ. ಆದರೆ, ಅತ್ಯಂತ ಗಂಭೀರವಾಗಿ ಆಲೋಚಿಸಬೇಕಾದ ವಿಚಾರ ಏನಂದರೆ, ಸೆನ್ಸಾರ್ ಮಂಡಳಿ ಏನು ಮಾಡುತ್ತಿತ್ತು. ಅದ್ಯಾವ ಆಧಾರದ ಮೇಲೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿತು. ಚಿತ್ರದಲ್ಲಿ ಬರುವ ಅಶ್ಲೀಲ ದೃಶ್ಯ/ಸಂಭಾಷಣೆ/ಹಿಂಸಾತ್ಮಕ ಸನ್ನಿವೇಶಗಳು ಮಾತ್ರ ಸೆನ್ಸಾರ್ ವ್ಯಾಪ್ತಿಗೆ ಬರುತ್ತದಾ?
ಸೆನ್ಸಾರ್ ಮಂಡಳಿ ಏನು ಮಾಡುತ್ತಿತ್ತು?
ಯಾವುದೇ ಒಂದು ಸಮುದಾಯವನ್ನು ಲೇವಡಿ ಮಾಡುವ ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲು ಸೂಚಿಸುವುದು ಸೆನ್ಸಾರ್ ಕೆಲಸವಲ್ಲವೇ? ಇಂದು ಪೊಗರು ಸಿನಿಮಾ ಈ ಮಟ್ಟಿನ ವಿರೋಧ ಎದುರಿಸುತ್ತಿದೆ ಎಂದರೆ ಅದಕ್ಕೆ ಮೊದಲು ಜವಾಬ್ದಾರಿ ವಹಿಸಬೇಕಾಗಿರುವುದು ಸೆನ್ಸಾರ್ ಮಂಡಳಿ. ಚಿತ್ರ ವೀಕ್ಷಣೆಯ ಸಮಯದಲ್ಲೇ ಆಕ್ಷೇಪಾರ್ಹ ಸನ್ನಿವೇಶಗಳನ್ನು ಬ್ಲರ್/ಮ್ಯೂಟ್/ತೆಗೆದು ಹಾಕಲು ಸೂಚಿಸಿದ್ದರೆ, ಇಂದು ಒಂದು ಸಮುದಾಯಕ್ಕೂ ನೋವಾಗುತ್ತಿರಲಿಲ್ಲ, ಚಿತ್ರತಂಡಕ್ಕೂ ತೊಂದರೆಯಾಗುತ್ತಿರಲಿಲ್ಲ.
ಚಿತ್ರದ ನಿರ್ದೇಶಕರು
ಇನ್ನೊಂದು, ಚಿತ್ರದ ನಿರ್ದೇಶಕರು ಮತ್ತು ಸಂಭಾಷಣೆಕಾರರು ಒಂದು ಸಮುದಾಯದ ವಿರೋಧಿಗಳಾ ಎನ್ನುವ ಪ್ರಶ್ನೆ ಕಾಡದೇ ಇರದು. ಚಿತ್ರಕಥೆಯನ್ನು ಹಣೆಯುವಾಗ ಸಮುದಾಯವೊಂದನ್ನು ಲೇವಡಿ ಮಾಡುತ್ತಿರುವುದು ಸರಿಯಾ, ಚಿತ್ರ ಬಿಡುಗಡೆಯಾದ ನಂತರ ವಿರೋಧ ವ್ಯಕ್ತವಾದರೆ ಎನ್ನುವ ಕನಿಷ್ಠ ತಿಳುವಳಿಕೆ ಇವರಿಗೆ ಇಲ್ಲದಾಯಿತೇ? ಒಟ್ಟಿನಲ್ಲಿ, ಸೆನ್ಸಾರ್ ಮಂಡಳಿ ಮತ್ತು ನಿರ್ದೇಶಕರೇ ಈಗಿನ ವಿದ್ಯಮಾನಕ್ಕೆ ಹೊಣೆಗಾರರಾಗಬೇಕಿದೆ. ಸಿನಿಮಾ ಎನ್ನುವುದು ಒಂದು ಪ್ರಬಲ ಮಾಧ್ಯಮ, ಹೊಣೆಗಾರಿಕೆಯಿಂದ ಇರಬೇಕಾಗುತ್ತದೆ ಎನ್ನುವುದನ್ನು ಇನ್ನಾದರೂ ಅರಿತುಕೊಳ್ಳಲಿ, ಆಂಜನೇಯ ಎಲ್ಲರಿಗೂ ಸದ್ಭುದ್ದಿಯನ್ನು ನೀಡಲಿ.
This News Article Is A Copy Of FILMIBEAT
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm