ಬ್ರೇಕಿಂಗ್ ನ್ಯೂಸ್
15-02-21 02:26 pm Source: FILMIBEAT ಸಿನಿಮಾ
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ 'ಪೊಗರು' ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕೊರೊನಾ ನಿಯಮಗಳನ್ನೆಲ್ಲಾ ಗಾಳಿಗೆ ತೂರಲಾಗಿತ್ತು.
ಆರಂಭದಲ್ಲಿ ಚಿರಂಜೀವಿ ಸರ್ಜಾ ಅವರ ಪರಿಚಯ ಮಾಡುವಾಗ ಪ್ರೇಕ್ಷಕರು ಮೂಕರಾದರು. ಬಳಿಕ ಖರಾಬು ಹಾಡು ಬಂದಾಗ ಹುಚ್ಚೆದ್ದು ನರ್ತಿಸಿದರು. ಆಡಿಯೊ ಬಿಡುಗಡೆಗೂ ಮುನ್ನ ನಿರ್ದೇಶಕ, ನಿರ್ಮಾಪಕರಾದಿಯಾಗಿ ಚಿತ್ರ ತಂಡದವರೆಲ್ಲರೂ ಈ ಹಾಡಿಗೆ ನರ್ತಿಸಿದರು. ಚಿತ್ರದ ಹಾಡನ್ನು ಮತ್ತೊಮ್ಮೆ ಪ್ಲೇ ಮಾಡಿದಾಗ ಮನಸೋ ಇಚ್ಛೆ ಕುಣಿದರು. ಹಾಡಿನ ಬಗ್ಗೆ ಅಭಿಪ್ರಾಯ ಕೇಳಲು ಪ್ರೇಕ್ಷಕರ ಗ್ಯಾಲರಿಗೆ ಬಂದಾಗ ಪ್ರೇಕ್ಷಕರೊಬ್ಬರು 'ನಟೋರಿಯಸ್' ಎಂದು ಗುಡುಗಿದರು. ಯುವತಿಯರು 'ವಿ ಲವ್ ಧ್ರುವ ಸರ್ಜಾ' ಎಂದು ಹುರಿದುಂಬಿಸಿದರು. ಬಾಲಕ ತನ್ಮಯ್ ಖರಾಬು ಹಾಡನ್ನು ಸಲೀಸಾಗಿ ಹಾಡಿದ ನಿರೂಪಕಿ ಅನುಶ್ರೀ 10ನೇ ಮಗ್ಗಿ ಹೇಳು ಎಂದು ಕೇಳಿದಾಗ ತೊದಲಿದ!

ಪೊಗರು ಆಡಿಯೋ ರಿಲೀಸ್ ಗೆ ಟಗರು
ಪೊಗರು ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಿನಿಮಾ ನಿರ್ದೇಶಕ ನಂದಕಿಶೋರ್ ಅವರ ತಂದೆ ಸುದೀರ್ ಹೆಸರಾಂತ ಕಲಾವಿದರು. ಹಿರಿಯ ಕಲಾವಿದ ಶಕ್ತಿ ಪ್ರಸಾದ್ ಅವರ ಮಗ ಅರ್ಜುನ್ ಸರ್ಜಾ ಮತ್ತು ಮೊಮ್ಮಗ ಧೃವ ಸರ್ಜಾ. ನಟನೆ ಎಂಬುದು ರಕ್ತಗತವಾಗು ಬಂದಿದೆ. ಕುಟುಂಬವೇ ನಟನೆ ಸೇವೆ ಮಾಡುತ್ತಿದೆ. ಧೃವ ಸರ್ಜಾ ಅವರ ಮೂರು ಸಿನಿಮಾ ಯಶಸ್ವಿಯಾಗಿದ್ದು, ನಾಲ್ಕನೇ ಸಿನಿಮಾ ಪೊಗರು ಸಹ ಯಶಸ್ವಿ ಕಾಣಲಿದೆ. ಪ್ರೇಕ್ಷಕರು ಈ ಸಿನಿಮಾ ಮೆಚ್ಚಿ ಸ್ವಾಗತಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್‌ಕುಮಾರ್ ಅವರಂತೆ ದೊಡ್ಡ ಹೆಸರು ಮಾಡಲಿ
ಫೆ.19ಕ್ಕೆ ಸಿನಿಮಾ ತೆರೆ ಮೇಲೆ ಬರಲಿದ್ದು, ಹಾಡುಗಳೇ ಜನಮೆಚ್ವುಗೆ ಪಡೆದಿದ್ದು, ಸಿನಿಮಾ ದೊಡ್ಡ ಹೆಸರು ಮಾಡಲಿದೆ. ದೊಡ್ಡ ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣಲಿದೆ. ಆಕ್ಷನ್, ಕುಟುಂಬ ಮನರಂಜನೆ, ಕುಟುಂಬ ಸಹಿತ ನೋಡಬಹುದಾದ ಈ ಸಿನಿಮಾ ಪ್ರೇಕ್ಷಕರ ಪ್ರೀತಿ, ವಿಶ್ವಾಸ ಗಳಿಸಲಿದೆ. ಸಿನಿಮಾ ಯಶಸ್ವಿಗೆ ಪ್ರೇಕ್ಷಕರು ಬಹುಮುಖ್ಯ. ಧೃವ ಸರ್ಜಾ ಪ್ರತಿಭಾವಂತ ನಟ. ಇನ್ನು ಎತ್ತರಕ್ಕೆ ಬೆಳೆಯಲಿ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ ಹಿರಿಯ ನಟ ಡಾ. ರಾಜ್ ಕುಮಾರ್ ಅವರಂತೆ ಧೃವ ಸರ್ಜಾ ಸಹ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಲಿ ಎಂದು ಶುಭಹಾರೈಸಿದರು.

ಶುಭಹಾರೈಕೆಗಳ ಸುರಿಮಳೆ
ಇದೇ ವೇಳೆ ವೇದಿಕೆ ಹಂಚಿಕೊಂಡ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾರ್ಚಾ ಮಾತನಾಡಿ, ಸಿನಿಮಾ ಹೆಸರೇ ಪೊಗರು. ಜೊತೆಗಿದ್ದಾರೆ ಟಗರು ಎಂದು ಸಿದ್ದರಾಮಯ್ಯ ಅವರ ಸೇರಿಕೊಂಡು ಹೇಳಿದರು. ನಾಡಿನ ಉತ್ತಮ ಚಿತ್ರವಾಗಿ ಹೊರಹೊಮ್ಮಲಿ ಎಂದು ಹಾರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮಾತನಾಡಿ, ‘ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ ಉತ್ತಮ ಚಿತ್ರ ನೀಡಲಿ. ಫೆ. 19ರಂದು ತೆರೆ ಕಾಣಲಿರುವ ಚಿತ್ರವನ್ನು ಜನರು ವೀಕ್ಷಿಸುವ ಮೂಲಕ ಆಶೀರ್ವಾದ ಮಾಡಬೇಕು. ಚಿತ್ರ ಶತದಿನೋತ್ಸವ ಆಚರಿಸಲಿ' ಎಂದು ಆಶಿಸಿದರು. ಬಳಿಕ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಅಭಿನಂದಿಸಲಾಯಿತು.
This News Article is a Copy of FILMIBEAT
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm