ಬ್ರೇಕಿಂಗ್ ನ್ಯೂಸ್
10-08-20 05:07 pm Headline Karnataka News Network ಸಿನಿಮಾ
ನಟ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ್ದು, ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‌ನಿಂದ ಮತ್ತೆ ನಾಲ್ಕು ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ಸ್ವೀಕರಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂದ ಸುದೀಪ್ ಒತ್ತಾಸೆಯಂತೆ, ಈ ಶಾಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರ ಭಾಗವಾಗಿ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳ ವೇತನ ಹೊರತುಪಡಿಸಿ, ಶಾಲೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ಈ ಟ್ರಸ್ಟ್ ನಿರ್ವಹಿಸಲಿದೆ.
ಆವಿಗೆಹಳ್ಳಿ ಸಾಗರದಿಂದ 49 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಶಾಲೆ ಇರುವುದು ದಟ್ಟ ಕಾನನದ ನಡುವೆ. ಕಾಡಿನಲ್ಲಿ ವಾಸವಿರುವ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಸರ್ಕಾರ ಶಾಲೆಯನ್ನು ಕಟ್ಟಿಸಿದೆ. ಶಾಲೆಗೆ ಮುಖ್ಯೋಪಾಧ್ಯಾಯರನ್ನೂ ನೇಮಿಸಿದೆ. ಆದರೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೇ ಇಲ್ಲ. ಇಡೀ ಊರಿನಲ್ಲಿ ಹುಡುಕಿದರೂ ಸಿಗುವುದು ಮೂರೇ ಮೂರುಮಂದಿ ವಿದ್ಯಾವಂತರು. ಒಬ್ಬರು ಪದವಿ, ಇನ್ನಿಬ್ಬರು ಪಿಯುಸಿಯವರೆಗೆ ಓದಿದ್ದಾರೆ. ಈ ಮೂವರಲ್ಲಿ ಭಾಸ್ಕರ ಎಂಬಾತನೇ ಮಕ್ಕಳ ಪಾಲಿಗೆ ಕಾಯಂ ಟೀಚರ್. ಈ ಶಾಲೆಯ ಮಕ್ಕಳು ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ನಡೆದು ಬರಬೇಕು. ಈ ವಿಷಯ ಗೊತ್ತಾಗಿದ್ದೇ ತಡ ಸುದೀಪ್ ತಮ್ಮ ಚಾರಿಟೆಬಲ್ ಟ್ರಸ್ಟ್ ಸದಸ್ಯರ ತಂಡವನ್ನು ಆವಿಗೆಹಳ್ಳಿಗೆ ಕಳುಹಿಸಿ, ಶಾಲೆಗೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವ ಆಲೋಚನೆಯಲ್ಲೂ ಇದ್ದಾರೆ ಎನ್ನುತ್ತಾರೆ ಟ್ರಸ್ಟ್ ಸದಸ್ಯರು.
ಕೊರೊನಾ ಲಾಕ್‌ಡೌನ್ ವೇಳೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಹಿರಿಯೂರು ಮತ್ತು ಚಳ್ಳಕೆರೆ ಬಿಇಒಗಳ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಇತ್ತೀಚೆಗಷ್ಟೇ ದತ್ತು ತೆಗೆದುಕೊಂಡಿತ್ತು.
ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗ ಜಿಲ್ಲೆಯ 4 ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ, ಅಭಿನಂದಿಸಿದ್ದಾರೆ.
05-01-26 10:06 pm
HK News Desk
Devaraj Aras, CM Siddaramaiah: ದೀರ್ಘ ಮುಖ್ಯಮಂತ...
05-01-26 10:00 pm
ಶಾರ್ಟ್ ಸರ್ಕಿಟ್ ; ಹೊಗೆಯಿಂದ ಉಸಿರುಗಟ್ಟಿ ಮಂಗಳೂರು...
05-01-26 08:39 pm
ಕೇಂದ್ರ ಸಚಿವ ಸೋಮಣ್ಣ ಎದುರಲ್ಲೇ ಬಿಜೆಪಿ- ಕಾಂಗ್ರೆಸ್...
05-01-26 08:17 pm
'ರಾಜ್ಯದಲ್ಲಿ ಅತಿ ದೀರ್ಘ ಮುಖ್ಯಮಂತ್ರಿ' ಸಿದ್ದರಾಮಯ್...
05-01-26 03:14 pm
05-01-26 02:13 pm
HK News Desk
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
05-01-26 05:11 pm
Mangalore Correspondent
ಬಿಜೆಪಿ ಮುಖಂಡನ ಸೋದರನ ಪತ್ನಿ ಮಗುವಿನೊಂದಿಗೆ ಬಾವಿಗೆ...
04-01-26 11:10 pm
Suhas Shetty, Social Media Post, Bajpe Police...
04-01-26 02:44 pm
Dharmasthala Case, Belthangady Court: ಧರ್ಮಸ್ಥ...
04-01-26 01:57 pm
ಕಂಬಳ ಕ್ಷೇತ್ರದ ಭೀಷ್ಮ ಗುಣಪಾಲ ಕಡಂಬರಲ್ಲಿ ಬಹಿರಂಗ ಕ...
03-01-26 11:04 pm
04-01-26 11:02 pm
HK News Desk
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm
ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮುಸ್ಲಿಂ ಮಾ...
02-01-26 12:58 pm
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm